ETV Bharat / state

ಪ್ರತಿಷ್ಠಿತ ಬ್ರ್ಯಾಂಡೆಡ್ ಬಟ್ಟೆಗಳ ನಕಲಿ ಮಾಡಿ ಮಾರಾಟ: ಮೂವರ ಬಂಧನ - COUNTERFEIT BRANDED CLOTHES SEIZED

ದಾಳಿ ವೇಳೆ ಸುಮಾರು ಸುಮಾರು 40 ಲಕ್ಷ ರೂ. ಮೌಲ್ಯದ ನಕಲಿ ಬ್ರ್ಯಾಂಡೆಡ್ ಬಟ್ಟೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Arrested Accused
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : April 18, 2025 at 12:31 PM IST

1 Min Read

ಬೆಂಗಳೂರು: ನಗರದಲ್ಲಿ ನಕಲಿಕೋರರ ಮೇಲಿನ ದಾಳಿ ಮುಂದುವರೆದಿದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳ ಲೇಬಲ್ ಬಳಕೆ ಮಾಡಿ ನಕಲಿ ಸಿದ್ಧ ಉಡುಪು ತಯಾರಿಕೆ ಮಾಡುತ್ತಿದ್ದ ಘಟಕದ ಮೇಲೆ ಮಾದನಾಯಕನಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಪತ್ತೆಯಾದ ಸುಮಾರು 40 ಲಕ್ಷ ರೂ. ಮೌಲ್ಯದ ನಕಲಿ ಬ್ರ್ಯಾಂಡೆಡ್ ಬಟ್ಟೆಗಳನ್ನು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಬಗ್ಗೆ ಬ್ರ್ಯಾಂಡ್ ಕಂಪನಿಯ ರಾಯಭಾರಿ ಸಂಸ್ಥೆಯಾಗಿರುವ ಅನ್ವೇಶ್ ಐಪಿಆರ್ ಸಂಸ್ಥೆ ಮಾಹಿತಿ ಕಲೆಹಾಕಿ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿತ್ತು. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ತೋಟದ ಗುಡ್ಡದಹಳ್ಳಿಯಲ್ಲಿ ಆಶ್ರಫ್, ಶರ್ಪುದ್ದೀನ್ ಮತ್ತು ಸರವಣ ಎಂಬುವವರು ಈ ನಕಲಿ ಗಾರ್ಮೆಂಟ್ ಫ್ಯಾಕ್ಟರಿ ನಡೆಸುತ್ತಿದ್ದರು.

ಈ ನಕಲಿ ಬ್ರ್ಯಾಂಡ್​ನ ಗಾರ್ಮೆಂಟ್​ಗಳನ್ನು ಅಸಲಿ ಬ್ರಾಂಡ್‌ಗಳೆಂದು ಬಿಂಬಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಾರಕಾಸ್ತ್ರ ಹಿಡಿದು ರೀಲ್ಸ್​​: ಕಿರುತೆರೆ ನಟ ರಜತ್ ಕಿಶನ್‌ಗೆ 14 ದಿನ ನ್ಯಾಯಾಂಗ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.