ಮೈಸೂರು: 'ಇಂಡಿಯನ್ ಮೈಕಲ್ ಜಾಕ್ಸನ್' ಖ್ಯಾತಿಯ ನಟ ಪ್ರಭುದೇವ ಅವರಿಂದು ತಮ್ಮ ತಾಯಿಯ ಆಸೆಯಂತೆ, ತಾಯಿಯ ಹುಟ್ಟೂರಾದ ನಂಜನಗೂಡಿನ ಕೆಂಬಾಲು ಗ್ರಾಮದಲ್ಲಿರುವ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡರು.
ಹೋಮ-ಹವನ, ಪೂಜೆಯಲ್ಲಿ ಪ್ರಭುದೇವ ಕುಟುಂಬಸ್ಥರು ಭಾಗಿಯಾಗಿದ್ದರು. ಪ್ರಭುದೇವ ಅವರ ತಾಯಿ ಮಹದೇವಮ್ಮ ಮೂಲತ: ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದವರು. ಇವರು ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದವರಾದ ಸುಂದರ್ ಅವರನ್ನು ಮದುವೆಯಾಗಿ ಅಲ್ಲಿ ನೆಲೆಸಿದ್ದರು. ಕೆಂಬಾಲುವಿನಲ್ಲಿ ದೇವಸ್ಥಾನ ಕಟ್ಟಬೇಕೆನ್ನುವ ಮಹದಾಸೆ ಕುಟುಂಬಕ್ಕಿತ್ತು. ಅದರಂತೆ ಇದೀಗ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಕುಟುಂಬಸ್ಥರು ಸೇರಿದ್ದಾರೆ.
ಸುಬ್ರಹ್ಮಣ್ಯಕ್ಕೆ ಭೇಟಿ: ನಟ ಆಗಾಗ್ಗೆ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು.
ತಿರುಪತಿಗೆ ಭೇಟಿ: ಆಂಧ್ರ ಪ್ರದೇಶದ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ವಿಷ್ಣುವಿನ ಅವತಾರವಾದ ಭಗವಾನ್ ವೆಂಕಟೇಶ್ವರನಿಗೆ ಸಮರ್ಪಿತವಾದ ಈ ದೇವಾಲಯವು ಭಾರತದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥದ ವಿಡಿಯೋ ನೋಡಿ
ನಟ, ನೃತ್ಯ ನಿರ್ದೇಶಕ ಪ್ರಭುದೇವ ಬ್ಯುಸಿ ಶೆಡ್ಯೂಲ್ ಹೊಂದಿದ್ದಾರೆ. ನಟನೆಯ ಹೊರತಾಗಿ, ವಿಷ್ಣು ಮಂಚು ಅವರ ಕಣ್ಣಪ್ಪದಂತಹ ಚಿತ್ರಗಳ ನೃತ್ಯ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಗೇಮ್ ಚೇಂಜರ್ ಚಿತ್ರದ ಜರಗಂಡಿ ಹಾಡಿಗೆ ಪ್ರಭುದೇವ ನೃತ್ಯ ಸಂಯೋಜಿಸಿದ್ದರು.
ಇದನ್ನೂ ಓದಿ: ಸೆಟ್ಟೇರಿತು ಅಭಿನಯ ಚಕ್ರವರ್ತಿಯ 'ಬಿಲ್ಲ ರಂಗ ಭಾಷಾ': ಸುದೀಪ್ ಫಸ್ಟ್ ಲುಕ್ ರಿಲೀಸ್
ಇತ್ತೀಚೆಗಷ್ಟೇ ಪ್ರಭುದೇವ, ವಿಷ್ಣು ಮಂಚು ಅವರೊಂದಿಗೆ ತಮ್ಮ ಮುಂಬರುವ ಚಿತ್ರ ಕಣ್ಣಪ್ಪ ಪ್ರಚಾರವನ್ನು ಲಕ್ನೋದಲ್ಲಿ ನಡೆಸಿದ್ದರು. ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು. ಭೇಟಿಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರು ಕಣ್ಣಪ್ಪ ಚಿತ್ರದ ಪೋಸ್ಟರ್‌ಗೆ ತಮ್ಮ ಸಹಿ ಹಾಕಿದ್ದರು. ಜೊತೆಗೆ, ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದರು.