ETV Bharat / state

ಆರ್‌ಸಿಬಿ, ಕೆಎಸ್​ಸಿಎ ₹1 ಕೋಟಿ ಪರಿಹಾರ ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಾಯ - BENGALURU STAMPEDE

ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಕೆಎಸ್​ಸಿ​ಎ ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವತಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.

LAKSHMI HEBBALKAR
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಾಯ (ETV Bharat)
author img

By ETV Bharat Karnataka Team

Published : June 6, 2025 at 1:36 PM IST

2 Min Read

ಬೆಳಗಾವಿ: ಆರ್​​ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಮೃತಪಟ್ಟ ಕುಟುಂಬದವರಿಗೆ ಕೆಎಸ್​ಸಿಎ ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವತಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ಸಾವು ನೋವು ತಂದಿದೆ. ಆರ್​​ಸಿಬಿ ಹಾಗೂ ಕೆಎಸ್​ಸಿ​ಎ ಹೆಚ್ಚಿನ ಪರಿಹಾರ ಕೊಡಬೇಕು. ಈ ಪ್ರಕರಣದಲ್ಲಿ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ. ನಮ್ಮ ಹಿರಿಯರು ಇದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ. ರಾಜಕಾರಣಕ್ಕಿಂತ ಘಟನೆ ಯಾಕೆ ಆಯ್ತು ಎಂಬುದು ಗೊತ್ತಾಗಬೇಕು. ಇಂಥ ದುರ್ಘಟನೆ ನಡೆದಿದ್ದು, ನಿಜಕ್ಕೂ ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

ಬಿಸಿಸಿಐ ಒಂದೊಂದು ಕೋಟಿ ಕೊಡಬೇಕು: ಮತ್ತೊಂದೆಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಂಗಳೂರಿನಲ್ಲಿ ಮಾತನಾಡಿ, ಐಪಿಎಲ್ ನಡೆಸುವವರು ಸಾವಿರಾರು ಕೋಟಿ ಮಾಲೀಕರು. ಆದ್ದರಿಂದ ಆರ್‌ಸಿಬಿ ವಿಜಯೋತ್ಸವದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಬಿಸಿಸಿಐ ಒಂದೊಂದು ಕೋಟಿ ಕೊಡಬೇಕು. ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ ಎಂದರು.

ಯಾವುದೋ ಒಂದು ಭಾವನೆ ಮತ್ತು ಹರ್ಷೋದ್ಘಾರದಲ್ಲಿ ವಿಜಯೋತ್ಸವದ ವೇಳೆ ಈ ಘಟನೆ ನಡೆದಿದೆ‌. ಏನಾಗಿದೆ ಏನಾಗಿಲ್ಲ ಅನ್ನುವುದನ್ನು ಸಿಎಂ ಹೇಳಬೇಕಾಗುತ್ತದೆ. ಎಲ್ಲರೂ ದುಃಖದಲ್ಲಿದ್ದಾರೆ, ಹಾಗಾಗಿ ಏನೂ ಹೇಳಲು ಹೋಗಲ್ಲ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ದುಃಖ ತಡೆದುಕೊಳ್ಳಲು ಭಗವಂತ ಶಕ್ತಿ ಕೊಡಲಿ. ಸರ್ಕಾರ ಏನು ಮಾಡಿದೆ ಏನು ಮಾಡಿಲ್ಲವೆಂದು ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳಲು ಆಗಲ್ಲ. ಸಿಎಂ, ಡಿಸಿಎಂ, ಗೃಹ ಸಚಿವರು ಈ ಬಗ್ಗೆ ತಿಳುವಳಿಕೆ ಕೊಡಬೇಕು ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣ ಸಾಮರ್ಥ್ಯ ಇರೋದು 35 ಸಾವಿರ ಮಂದಿಗೆ ಮಾತ್ರ. ಉಚಿತ ಅಂದ ತಕ್ಷಣ 3 ಲಕ್ಷ ಜನ ಅಲ್ಲಿಗೆ ಬಂದಿದ್ದರು. ಸಾವಿರಕ್ಕೆ ಒಂದು ಪೊಲೀಸ್ ನಮ್ಮಲ್ಲಿರೋದು, ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ. ಸಾವು ಹೊರಗಡೆ ಆದಾಗ ಒಳಗಡೆ ಸೆಲೆಬ್ರೇಷನ್ ನಿಲ್ಲಿಸಬೇಕಾಗಿತ್ತು. ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಹೈಕೋರ್ಟ್‌ಗೆ ಸುಮೊಟೋ ಕೇಸ್ ಮಾಡುವ ಎಲ್ಲಾ ಹಕ್ಕಿದೆ. ಅದೇ ಥರ ಎಲ್ಲದರಲ್ಲೂ ಮಾಡಿದರೆ ಒಳ್ಳೆಯದು. 11 ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು. ಇದು ಸರ್ಕಾರ ನಡೆಸಿರುವ ಕ್ರಿಕೆಟ್ ಅಲ್ಲ, ವಿಧಾನಸೌಧದ ಬಳಿ ಏನೂ ಆಗಿಲ್ಲ. ಸ್ಟೇಡಿಯಂನವರು ನಡೆಸುವಾಗ ಸ್ವಲ್ಪ ಯೋಚನೆ ಮಾಡಿ ನಡೆಸಬೇಕಿತ್ತು ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಘಟನೆ! ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್!

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಆರ್​ಸಿಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.