ETV Bharat / state

ಚಿಕ್ಕಮಗಳೂರು: ಮಳೆ ಅಬ್ಬರ ತಗ್ಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ - Kalaseshwara Temple

author img

By ETV Bharat Karnataka Team

Published : Aug 2, 2024, 11:00 PM IST

ಮಳೆ ಕಡಿಮೆಯಾಗಲೆಂದು ಪ್ರಾರ್ಥಿಸಿ ಕಳಸದ ಕಳಸೇಶ್ವರಸ್ವಾಮಿಗೆ ಮಲೆನಾಡಿಗರು ಅಗಿಲು ಸೇವೆ ಸಲ್ಲಿಸಿದ್ದಾರೆ.

ಕಳಸೇಶ್ವರ
ಕಳಸೇಶ್ವರ ದೇಗುಲ (ETV Bharat)
ಮಳೆ ಅಬ್ಬರ ತಗ್ಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ (ETV Bharat)

ಚಿಕ್ಕಮಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಲೆಂದು ಜಿಲ್ಲೆಯ ಕಳಸದ ಕಳಸೇಶ್ವರಸ್ವಾಮಿಗೆ ಮಲೆನಾಡಿ ಮಂದಿ ಅಗಿಲು ಸೇವೆ ಸಲ್ಲಿಸಿದರು. ಮಳೆಗಾಗಿ ಭಕ್ತರು ಕಳಸೇಶ್ವರನನ್ನು ಪ್ರಾರ್ಥನೆ ಮಾಡುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಈಗ ಮಳೆ ತೀವ್ರವಾಗಿದೆ, ಸದ್ಯಕ್ಕೆ ಮಳೆ ನಿಲ್ಲಿಸುವಂತೆ ಜನರು ದೇವರಲ್ಲಿ ಮೊರೆ ಇಟ್ಟಿದ್ದಾರೆ.

ಶತಮಾನಗಳಿಂದ ಅತಿವೃಷ್ಠಿ-ಅನಾವೃಷ್ಠಿಯಲ್ಲಿ ಪೂಜೆ ಸಲ್ಲಿಸಿದರೆ ಭಕ್ತರ ಬಯಕೆ ಈಡೇರಲಿದೆ ಎಂಬುದು ಈ ಭಾಗದ ಜನರ ನಂಬಿಕೆ. ವಾಡಿಕೆಗಿಂತ ಹೆಚ್ಚಿನ ಮಳೆಯಿಂದಾಗಿ ಕಳಸ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕುದುರೆಮುಖ ಹಾಗೂ ಪಶ್ಚಿಮ ಘಟ್ಟ ಸಾಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತುಂಗಾ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಮನೆಗಳಿಗೆ ಹಾನಿಯಾಗುತ್ತಿದೆ.

ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರು, ಜಯಪುರ, ಕೊಪ್ಪ, ಬಸರಿಕಟ್ಟೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮತ್ತೊಂದೆಡೆ, ಭದ್ರಾ ನದಿ ಅಬ್ಬರಕ್ಕೆ ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶ ಜಲಾವೃತವಾಗಿದೆ. ಭದ್ರಾ ನದಿಯ ಅಬ್ಬರ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಳೆಹೊನ್ನೂರಿನ ಅಂಗಡಿ ಮುಂಗಟ್ಟುಗಳು, ಮೀನು ಮಾರುಕಟ್ಟೆ, ಸಂತೆ ಮೈದಾನ ಜಲಾವೃತವಾಗಿದ್ದು, ಭದ್ರಾ ನದಿ ಪ್ರವಾಹಕ್ಕೆ ಬಾಳೆಹೊನ್ನೂರು ಜನರು ಹೈರಾಣಾಗಿದ್ದಾರೆ. ನದಿ ಪಾತ್ರದ ಕಾಫಿ, ಅಡಿಕೆ ತೋಟಗಳು, ಸಂಪೂರ್ಣ ಜಲಾವೃತಗೊಂಡಿವೆ.

ಕೋಡಿ ಬಿದ್ದ ಅಯ್ಯನಕೆರೆ: ಮತ್ತೊಂದೆಡೆ, ಸಖರಾಯ ಪಟ್ಟಣ ಬಳಿ ಇರುವ ಅಯ್ಯನಕೆರೆ ಕೋಡಿ ಬಿದ್ದಿದೆ. ಕಡೂರು ತಾಲೂಕಿನ ಮದಗದ ಕೆರೆ ಕೋಡಿ ಬಿದ್ದ ಬಳಿಕ ಅಯ್ಯನಕೆರೆ ಕೋಡಿ ಬೀಳುವುದು ವಾಡಿಕೆಯಾಗಿದೆ. ಹತ್ತಾರು ಹಳ್ಳಿ, ಸಾವಿರಾರು ಎಕರೆ ಜಮೀನು, ಜನ-ಜಾನುವರಗಳಿಗೆ ಪ್ರಮುಖ ನೀರಿನ ಮೂಲವಾಗಿವೆ.ಎರಡೂ ಕೆರೆ ಕೋಡಿ ಬಿದ್ದಿರುವುದರಿಂದ ಬಯಲು ಸೀಮೆ ಕಡೂರು ತಾಲೂಕಿನ ಜನರಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಮಳೆ ಅಬ್ಬರ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ - Karnataka Rain Forecast

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.