ETV Bharat / state

ಬೆಂಗಳೂರು: ಕೇರಳದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ - Nursing Student Suicide

author img

By ETV Bharat Karnataka Team

Published : Aug 5, 2024, 3:22 PM IST

ಕಾಲೇಜು ಕಟ್ಟಡದಿಂದ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

COLLEGE BUILDING  SUICIDE CASE  BENGALURU CRIME NEWS  BENGALURU
ಸೋಲದೇವನಹಳ್ಳಿ ಪೊಲೀಸ್ ಠಾಣೆ (ETV Bharat)

ಬೆಂಗಳೂರು: ಇಲ್ಲಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರಲ್ಲಿ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವತಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತುಲ್ಯ ಸಾವನ್ನಪ್ಪಿದವರು.

ವಿದ್ಯೋದಯ ನರ್ಸಿಂಗ್ ಕಾಲೇಜಿನಲ್ಲಿ ಇವರು ವ್ಯಾಸಂಗ ಮಾಡುತ್ತಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ನರ್ಸಿಂಗ್ ಸೇರಿದ್ದ ಅತುಲ್ಯಾ ಅವರಿಗೆ ಕಾಲೇಜು ಶಿಕ್ಷಣ ಹೊಂದಾಣಿಕೆ ಆಗುತ್ತಿರಲಿಲ್ಲವಂತೆ. ಹೀಗಾಗಿ, ಮನೆಗೆ ವಾಪಸ್ ಬರ್ತೀನಿ ಎಂದು ತಾಯಿಗೆ ಹೇಳಿದ್ದರು. ಇದಕ್ಕೆ ಸಮಾಧಾನ ಹೇಳಿದ್ದ ತಾಯಿ, ಫೀಸ್ ಕಟ್ಟಿದ್ದೇವೆ. ಸ್ವಲ್ಪ ದಿನ ಕಳೆದರೆ ಸರಿ ಹೋಗುತ್ತದೆ ಎಂದು ಹೇಳಿದ್ದರಂತೆ. ಇದರಿಂದ ತೃಪ್ತರಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ತಿಳಿದುಬಂದಿದೆ.

ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಾಕಿಂಗ್​ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆರೋಪಿಯ ಕೃತ್ಯ - sexual harassment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.