ಆನೇಕಲ್(ಬೆಂಗಳೂರು): ಕುಖ್ಯಾತ ರೌಡಿಶೀಟರ್ ಗಾಂಜಾ ಮನೋಜ್ ಅಲಿಯಾಸ್ ಜಾಕಿಯನ್ನು ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಜಿಗಣಿ ಮಾದಾಪಟ್ಟಣದ ಬಳಿ ಕೆಲ ತಿಂಗಳ ಹಿಂದೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಬೈಕ್ ಸವಾರನಿಂದ ಬೈಕ್ ಕಸಿದು ಪರಾರಿಯಾಗಿ, ತಲೆ ಮರೆಸಿಕೊಂಡಿದ್ದ.
ಮನೋಜ್ ಬನ್ನೇರುಘಟ್ಟ, ಸೂರ್ಯನಗರ, ಅತ್ತಿಬೆಲೆ, ಬೆಂಗಳೂರಿನ ಕುಂಬಳಗೋಡು ಸೇರಿದಂತೆ ಮತ್ತಿತರೆಡೆ ನಡೆದ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ. ಮನೋಜ್ ನವೆಂಬರ್ 18 ರಂದು ತನ್ನ ಅಕ್ಕನ ಮದುವೆಯ ಕರೆಯೋಲೆ ಹಂಚಲು ಹೋದಾಗ ಮಾದಾಪಣ್ಣಟದ ಬಳಿ ಏಕಾಏಕಿ ಗುಂಪೊಂದು ದಾಳಿ ಮಾಡಿತ್ತು.
ಮನೋಜ್ ಮಹಾರಾಷ್ಟ್ರಕ್ಕೆ ತೆರಳಲು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬರುವ ಮಾಹಿತಿ ತಿಳಿದು ಪೊಲೀಸರು ಬಂಧಿಸಿದ್ದಾರೆ. ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮನೋಜ್ ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.
ಇದನ್ನೂ ಓದಿ: ಆನೇಕಲ್: ಸೂಟ್ಕೇಸ್ನಲ್ಲಿ ಯುವತಿ ಶವ ಪತ್ತೆ, ಬೆಚ್ಚಿಬಿದ್ದ ಜನರು
ಇದನ್ನೂ ಓದಿ: ಟರ್ಕಿಯಲ್ಲಿ ಕಾಂಗ್ರೆಸ್ ಅಧಿಕೃತ ಕಚೇರಿ ಹೊಂದಿರುವುದಾಗಿ ಆರೋಪಿಸಿದ್ದ ಇಬ್ಬರ ವಿರುದ್ಧ ಎಫ್ಐಆರ್