ಶಿವಮೊಗ್ಗ: ಅಕ್ಕ ಪಕ್ಕದ ಜಮೀನಿನವರ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 7 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ತಾಲೂಕು ಭದ್ರಾಪುರ ಗ್ರಾಮದಲ್ಲಿ 2020 ರಲ್ಲಿ ಬಡ್ಡಿ ಪರಮೇಶ್ ಹಾಗೂ ಅವರು ಮಕ್ಕಳು ಸೇರಿದಂತೆ ಒಟ್ಟು 7 ಜನ ಭದ್ರಾಪುರ ಗ್ರಾಮದ ಕರಿಯಪ್ಪ (65) ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಬಡ್ಡಿ ಪರಮೇಶ್, ಜಗದೀಶ್, ರಮೇಶ್, ಮಂಜಪ್ಪ, ಗೌತಮ್ ಅಭಿಷೇಕ್, ಶರತ್, ವಿಕ್ರಮ್, ಸಂಜಯ್ ಹಾಗೂ ಕೃತಿಕ್ ಅವರ ಮೇಲೆ ಕಲಂ 143, 147, 148, 504 341, 323, 324, 307, 302, 302,;506 ಸಹಿತ 149 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿ ಅಂದಿನ ಭದ್ರಾವತಿಯ ಸಿಪಿಐ ಮಂಜುನಾಥ್ ತನಿಖೆ ನಡೆಸಿದ್ದರು. ನಂತರ ಹೊಳೆಹೊನ್ನೂರು ಪಿಐ ಲಕ್ಷ್ಮೀಪತಿ ಅವರು ಪ್ರಕರಣದ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದು, ಆರೋಪಿತರ ವಿರುದ್ಧದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಅವರು ಆರೋಪಿಗಳಾದ ಪರಮೇಶ್, ಜಗದೀಶ್, ರಮೇಶ್, ಗೌತಮ್, ಅಭಿಷೇಕ್, ವಿಕ್ರಮ್ ಮತ್ತು ಸಂಜಯ್ ಅವರಿಗೆ ಐಪಿಸಿ ಕಲಂ 143, 147, 148, 504, 341, 323, 324, 307, 302 ಅಡಿ ಜೀವಾವಧಿ ಶಿಕ್ಷೆ ಮತ್ತು 1.55 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಸೂಟ್‌ಕೇಸ್‌ನೊಳಗೆ ಬಾಲಕಿಯ ಮೃತದೇಹ ಪತ್ತೆ: ಲೈಂಗಿಕ ದೌರ್ಜನ್ಯ, ಕೊಲೆ ಆರೋಪ; ಪರಿಸ್ಥಿತಿ ಉದ್ವಿಗ್ನ
ಇದನ್ನೂ ಓದಿ: ಸಾಲ ತೀರಿಸಲಾಗದೆ ವೃದ್ಧ ದಂಪತಿಯ ಕೊಲೆ; ಮೂವರಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ