ETV Bharat / state

ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ: ನಾಳೆಗೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ‌ ನ್ಯಾಯಾಲಯ - Court reserved order for tomorrow

ಶಾಸಕ ಮುನಿರತ್ನ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್​, ಎರಡೂ ಕಡೆ ವಾದ- ಪ್ರತಿವಾದ ಆಲಿಸಿ ನಾಳೆಗೆ ತೀರ್ಪು ಕಾಯ್ದಿರಿಸಿದೆ.

author img

By ETV Bharat Karnataka Team

Published : Sep 18, 2024, 10:15 PM IST

mla-muniratna-bail-application-hearing-court-of-peoples-representatives-reserved-order-for-tomorrow
ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ: ನಾಳೆಗೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ‌ ನ್ಯಾಯಾಲಯ (ETV Bharat)

ಬೆಂಗಳೂರು: ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿತರಾಗಿ ಶಾಸಕ ಮುನಿರತ್ನ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ ಆದೇಶ ಕಾಯ್ದಿರಿಸಿದೆ. ವಿಚಾರಣೆ ವೇಳೆ ಮುನಿರತ್ನ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರಾದ ಪ್ರದೀಪ್ ಕುಮಾರ್ ಆಕ್ಷೇಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ, ಇದು ಆರೇಳು ವರ್ಷದ ಹಳೆಯ ಪ್ರಕರಣ. ಗುತ್ತಿಗೆದಾರ ಚಲುವರಾಜು ಉಪಸ್ಥಿತಿಯಲ್ಲಿ ಆದ ಘಟನೆ. ಸಾರ್ವಜನಿಕರ ಮುಂದೆ ನಡೆದ ಘಟನೆ ಅಲ್ಲ ಎಂದು ವಾದಿಸಿದರು. ಬಳಿಕ ವಾದ - ಪ್ರತಿವಾದ ಆಲಿಸಿದ ಕೋರ್ಟ್ ಗುರುವಾರಕ್ಕೆೆ ಆದೇಶ ಕಾಯ್ದಿರಿಸಿದೆ.

ಮುನಿರತ್ನ ಪರ ವಕೀಲರವಾದ ಏನು?: ಮುನಿರತ್ನ ಪರ ವಾದ ಮಂಡಿಸಿದ ವಕೀಲ ಅಶೋಕ್ ಹಾರನಹಳ್ಳಿ, 2015-2024ರ ನಡುವೆ ನಡುವಿನ ಅಪರಾಧವೆಂದು ಹೇಳಿದ್ದಾರೆ. ಜನಾಂಗೀಯ ಪ್ರಚೋದನೆ ಆರೋಪ ಹೊರಿಸಲಾಗಿದೆ. ಗುತ್ತಿಗೆದಾರ ಚೆಲುವರಾಜು ಉಪಸ್ಥಿತಿಯಲ್ಲೇ ಘಟನೆ ನಡೆದಿದೆ. ಅದನ್ನು ಚೆಲುವರಾಜು ಪ್ರಚಾರ ಮಾಡಿದ್ದಾರೆ.ದೂರುದಾರರ ವೇಲು ನಾಯಕರ್ ಸಮ್ಮುಖದಲ್ಲಿ ಘಟನೆ ನಡೆದಿಲ್ಲ.

ಈ ಪ್ರಕರಣದಲ್ಲಿ ಎಸ್ಸಿಎಸ್ಟಿ ಕಾಯ್ದೆ ಅನ್ವಯವಾಗುವುದಿಲ್ಲ. ಶಾಸಕರ ಕಚೇರಿಯಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ದೂರುದಾರರ ಮುಂದೆಯೂ ಜಾತಿ ನಿಂದನೆ ಮಾಡಿಲ್ಲ. ದೂರಿನಲ್ಲಿ ಅಪರಾಧದ ಅಂಶಗಳು ಇಲ್ಲ ಎಂದು ವಾದ ಮಂಡಿಸಿದರು. ಮತ್ತೆೆ ವಾದ ಮುಂದುವರಿಸಿದ ಅವರು, ಸಾರ್ವಜನಿಕರ ಮುಂದೆ ನಿಂದಿಸಿಲ್ಲ. ಗುಂಪಿನ ಮುಂದೆ ಜಾತಿನಿಂದನೆ ಮಾಡಿದ್ದಾರೆಂಬ ಆರೋಪವಿಲ್ಲ. ಹಳೆಯ ಘಟನೆ ಸಂಬಂಧ ಸೆ.18ರಂದು ಪ್ರಕರಣ ದಾಖಲಾಗಿದೆ. ಅದೇ ದಿನ ತರಾತುರಿಯಲ್ಲಿ ರಾಜಕೀಯ ಕಾರಣಕ್ಕಾಗಿ ಮುನಿರತ್ನ ಅವರನ್ನು ಬಂಧಿಸಲಾಗಿದೆ. ತಮ್ಮ ಕಕ್ಷಿದಾರರ ವಿರೋಧ ಪಕ್ಷ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಾಗಿ ಜಾಮೀನು ನೀಡಿದರೆ, ಸಾಕ್ಷ್ಯ ನಾಶದ ಅಪಾಯವಿಲ್ಲ. ಜತೆಗೆ ತಮ್ಮ ಕಕ್ಷಿದಾರರ ಧ್ವನಿ ಮಾದರಿ ಸಂಗ್ರಹಿಸಲಾಗಿದೆ.ಹೀಗಾಗಿ ಜಾಮೀನು ನೀಡುವಂತೆ ಅಶೋಕ್ ಹಾರನಹಳ್ಳಿ ಕೋರ್ಟ್‌ಗೆ ಮನವಿ ಮಾಡಿದರು.

ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು: ಅದಕ್ಕೆೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರಾದ ಪ್ರದೀಪ್, 9 ವರ್ಷಗಳಿಂದ ನಿಂದಿಸಲಾಗುತ್ತಿದೆ. ದೂರುದಾರ ವೇಲು ನಾಯಕರ್, ಶಾಸಕರ ಕಚೇರಿ ಸಾರ್ವಜನಿಕರೂ ಓಡಾಡುವ ಸ್ಥಳ. ಅಲ್ಲಿಯೇ ಘಟನೆ ನಡೆದಿದೆ. ಸ್ನೇಹಿತರ ಮುಂದೆಯೂ ಮುನಿರತ್ನ ಜಾತಿ ನಿಂದಿಸಿದ್ದಾಾರೆ. ಭಯದ ಕಾರಣಕ್ಕೆೆ ಇಷ್ಟು ವರ್ಷ ದೂರುದಾರ ಸಹಿಸಿಕೊಂಡಿದ್ದಾಾರೆ. ಮಹಿಳೆಯನ್ನು ನಿಂದಿಸಿದ್ದಾರೆ. ಚೆಲುವರಾಜು ನೀಡಿದ ಆಡಿಯೋ ಕೇಳಿದ ನಂತರ ದೂರು ದಾಖಲಿಸಿದ್ದಾರೆ. ಸಾರ್ವಜನಿಕರ ಸಮ್ಮುಖದ್ಲಲೇ ಘಟನೆ ನಡೆಯಬೇಕಿಂದಿಲ್ಲ. ಒಬ್ಬ ವ್ಯಕ್ತಿ ಇದ್ದರೂ ಅಪರಾಧ ಎನ್ನಿಸಿಕೊಳ್ಳಲಾಗುತ್ತದೆ. ಜತೆಗೆ ತನಿಖೆ ಆರಂಭದ ಹಂತದಲ್ಲಿರುವಾಗ ಜಾಮೀನು ನೀಡಬಾರದು, ಮುನಿರತ್ನ ಇತಿಹಾಸ ಗಮನಿಸಿದರೆ ಸಾಕ್ಷ್ಯ ನಾಶ ಮಾಡಬಹುದು. ಹೀಗಾಗಿ ತನಿಖೆ ಮುಗಿಯುವವರೆಗೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಇದೇ ವೇಳೆ ದೂರುದಾರ ವೇಲುನಾಯಕರ ಪರ ವಕೀಲ ಸೂರ್ಯ ಮುಕುಂದರಾಜ್ ವಾದ ಮಂಡಿಸಿದರು. ಅವರು ಕೂಡ ಜಾಮೀನು ನೀಡಿದರೆ, ಆರೋಪಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ಕೋರ್ಟ್‌ಗೆ ಮನವಿ ಮಾಡಿದರು. ಇದೇ ವೇಳೆ ಚೆಲುವರಾಜು ದಾಖಲಿಸಿರುವ ದೂರಿನ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮುನಿರತ್ನ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಎರಡು ಪ್ರಕರಣದಲ್ಲೂ ಗುರುವಾರ ಆದೇಶ ಕಾಯ್ದಿರಿಸಿದೆ.

ಇದನ್ನೂ ಓದಿ:ಒಂದು ದೇಶ, ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ ಸಿದ್ದರಾಮಯ್ಯ - One country one election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.