ETV Bharat / state

ದೊಡ್ಡಬಳ್ಳಾಪುರ: ವಾಮಾಚಾರ ನಡೆಸಿ ನಿಧಿಗಾಗಿ ದುಷ್ಕರ್ಮಿಗಳಿಂದ ಬೆನಕನಹಳ್ಳದ ದೇವಸ್ಥಾನದಲ್ಲಿ ಶೋಧ

ದೊಡ್ಡಬಳ್ಳಾಪುರ ತಾಲೂಕು ಯದ್ದಲಹಳ್ಳಿ ಸಮೀಪದ ಬೆನಕನಹಳ್ಳದ ಶ್ರೀಬೆನಕಪ್ಪ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿದ್ದಾರೆ.

miscreants-search-benakanahalla-temple-for-treasure-practicing-witchcraft
ವಾಮಾಚಾರ ನಡೆಸಿ ನಿಧಿಗಾಗಿ ದುಷ್ಕರ್ಮಿಗಳಿಂದ ಬೆನಕನಹಳ್ಳದ ದೇವಸ್ಥಾನದಲ್ಲಿ ಶೋಧ (ETV Bharat)
author img

By ETV Bharat Karnataka Team

Published : March 31, 2025 at 10:33 PM IST

1 Min Read
Choose ETV Bharat

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸುತ್ತಮುತ್ತಲಿನ ಪುರಾತನ ಕ್ಷೇತ್ರಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದೆ. ಯುಗಾದಿ ಅಮಾವಾಸ್ಯೆ ದಿನ ವಾಮಾಚಾರ ಮಾಡಿ ನಿಧಿಗಾಗಿ ಕಳ್ಳರು ಶೋಧ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ಯದ್ದಲಹಳ್ಳಿ ಸಮೀಪದ ಬೆನಕನಹಳ್ಳದ ಶ್ರೀಬೆನಕಪ್ಪ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಲಾಗಿದೆ. ಕಾಡಿನೊಳಗಿರುವ ದೇವಸ್ಥಾನ ಮಲೆನಾಡಿನ ಅನುಭವ ನೀಡುತ್ತದೆ, ಜನರು ಇಲ್ಲದೆ ಇರುವ ಸಮಯದ ಲಾಭ ಪಡೆದ ಕಳ್ಳರು ನಿಧಿಗಾಗಿ ಹುಡುಕಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಭಾನುವಾರ ಯುಗಾದಿ ಅಮಾವಾಸ್ಯೆಯ ದಿನ ದೇವಸ್ಥಾನದಲ್ಲಿ ನಿಧಿಗಳ್ಳತನಕ್ಕೆ ಯತ್ನಿಸಿರುವ ಕಳ್ಳರು ಪುರಾತನ ಛತ್ರ ವಿರೂಪಗೊಳಿಸಿದ್ದಾರೆ. ನಿಧಿ ಶೋಧಕ್ಕಾಗಿ ದಿಗ್ಬಂಧನ, ಪೂಜೆ ಮೂಲಕ ವಾಮಾಚಾರ ನಡೆಸಿರುವ ಹಿನ್ನೆಲೆ ದೇವಾಲಯದ ಬಳಿ ಹೋಗಲು ಗ್ರಾಮಸ್ಥರು ಹೆದರುತ್ತಿದ್ದಾರೆ.

ದೇವಸ್ಥಾನದ ಆರ್ಚಕರ ಸಂಬಂಧಿ ಉದಯ ಆರಾಧ್ಯ ಮಾತನಾಡಿ, ತಾಲೂಕಿನಲ್ಲಿ ದೇವಾಲಯಗಳ ಹುಂಡಿ ಕಳ್ಳತನ ಪ್ರಕರಣಗಳ ಜೊತೆಗೆ ಈಗ ನಿಧಿಗಳ್ಳರ ಹಾವಳಿ ಶುರುವಾಗಿದೆ. ಇತ್ತೀಚಿಗೆ ಘಾಟಿ ಸುಬ್ರಹ್ಮಣ್ಯ ರಸ್ತೆಯ ದೇವರ ಬೆಟ್ಟದಲ್ಲಿರುವ ಗುಟ್ಟೆನರಸಿಂಹಸ್ವಾಮಿ ದೇವಾಲದಲ್ಲೂ ಇದೇ ಮಾದರಿಯ ಶೋಧ ನಡೆಸಿ ಕಲ್ಲಿನ ಮೂರ್ತಿಯನ್ನೇ ಅಪಹರಿಸಿದ್ದರು. ಸರ್ಕಾರ ನಿರ್ಜನ ಪ್ರದೇಶದಲ್ಲಿರುವ ದೇವಸ್ಥಾನಗಳಿಗೆ ಸೂಕ್ತ ಭದ್ರತೆ ಒದಗಿಸಬೇಂದು ಮನವಿ ಮಾಡಿದರು.

ಇದನ್ನೂ ಓದಿ: ’ಛಾವಾ' ಸಿನಿಮಾದಲ್ಲಿ ನಿಧಿ ಉಲ್ಲೇಖ: ಈ ಕೋಟೆಯ ಸುತ್ತಲೂ ಅಗೆದು ಚಿನ್ನ ಹುಡುಕುತ್ತಿರುವ ಸಾವಿರಾರು ಜನ!

ಇದನ್ನೂ ಓದಿ: ಚಿತ್ರದುರ್ಗ: ನಿಧಿಯಾಸೆಗೆ ಜ್ಯೋತಿಷಿಯ ಮಾತು ಕೇಳಿ ನರಬಲಿ, ಇಬ್ಬರು ಅರೆಸ್ಟ್​