ETV Bharat / state

ನಿಮ್ಮ ಸದಾರಮೆ ನಾಟಕ ಬಯಲಾಗಿದೆ: ಚಲವಾದಿ ನಾರಾಯಣಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ಕಿಡಿ - MINISTER PRIYANK KHARGE

ಸಚಿವ ಪ್ರಿಯಾಂಕ ಖರ್ಗೆ ಅವರು ಚಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

chalavadi-narayanaswamy and minister-priyank-kharge
ಚಲವಾದಿ ನಾರಾಯಣಸ್ವಾಮಿ ಹಾಗೂ ಸಚಿವ ಪ್ರಿಯಾಂಕ ಖರ್ಗೆ (ETV Bharat)
author img

By ETV Bharat Karnataka Team

Published : May 24, 2025 at 10:33 AM IST

3 Min Read

ಬೆಂಗಳೂರು: ಮೇಲ್ಮನೆ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ಪೋಸ್ಟ್ ಮೂಲಕ ವಾಗ್ದಾಳಿ ನಡೆಸಿರುವ ಅವರು, ಹಿಟ್ಲರ್ ಕಾಲದಲ್ಲಿ ಗೋಬೇಲ್ಸ್ ಎಂಬುವವನಿದ್ದ, ಅವನು ಈಗ ಬಿಜೆಪಿಗರ ರೂಪದಲ್ಲಿ ಪುನಃರಾವತಾರ ಪಡೆದಿದ್ದಾನೆ. ಗಂಟೆಗೊಂದು ಸುಳ್ಳು, ಗಳಿಗೆಗೊಂದು ಬಣ್ಣ, ಇವು ಬಿಜೆಪಿಯವರು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಬಂದ ಗುಣ. ನಾನು ಗಾದೆಮಾತು ಹೇಳಿದೆ, ಬಸವಣ್ಣನವರ ವಚನ ಹೇಳಿದೆ, ಅವರೇಕೆ ನನಗೆ ಹೇಳಿದರು ಎಂದುಕೊಳ್ಳಬೇಕು ಎಂದು ಮನುವಾದಿ ನಾರಾಯಣಸ್ವಾಮಿಯವರು ಹೇಳಿದ್ದಾರೆ. ನಾರಾಯಣಸ್ವಾಮಿಯವರೇ, ಗೋಸುಂಬೆಗೂ ನಿಮಗೂ ಬಣ್ಣ ಬದಲಿಸುವ ಕಾಂಪಿಟೇಶನ್ ಇಟ್ಟರೆ ಗೆಲುವು ನಿಮ್ಮದೇ ಎಂದು ಲೇವಡಿ ಮಾಡಿದ್ದಾರೆ.

ಮೊದಲು ಪ್ರಿಯಾಂಕ್ ಖರ್ಗೆಯೇ ಬೊಗಳುವ ನಾಯಿ ಎಂದಿರಿ. ನಂತರ ಇದಕ್ಕೆ ವಿಷಾದಿಸುತ್ತೇನೆ ಎಂದಿರಿ. ಆ ನಂತರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿರಿ. ತದನಂತರ “ನಾನು ಗಾದೆ ಹೇಳಿದೆ, ಅವರು ನನಗೇ ಹೇಳಿದರು ಎಂದು ಭಾವಿಸಿಕೊಂಡಿದ್ದಾರೆ“ ಎನ್ನುತ್ತಿರುವಿರಿ. ಒಂದೊಂದು ಹೊತ್ತಿಗೆ ಒಂದೊಂದು ಮಾತನಾಡುವ ನಾರಾಯಣಸ್ವಾಮಿಯವರೇ, ನಿಮಗೆ ನಾಲಿಗೆ ಹಿಡಿತದಲ್ಲಿಲ್ಲವೇ ಅಥವಾ ಬುದ್ದಿಯೇ ಹಿಡಿತದಲ್ಲಿಲ್ಲವೇ?. ಬಾಬಾ ಸಾಹೇಬರ ಸೋಲಿಗೆ ಸಾವರ್ಕರ್ ಕಾರಣ ಎಂಬುದಕ್ಕೆ ದಾಖಲೆ ನೀಡಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಿರಿ. ನಾನು ದಾಖಲೆ ನೀಡಿದ್ದಕ್ಕೆ ಹತಾಶೆ, ಕೋಪ ಒಟ್ಟಿಗೆ ಸೇರಿ ತಮ್ಮ ಬಾಯಿಯಿಂದ ಈ ಬೈಗುಳಗಳು ಉದುರುತ್ತಿವೆಯೇ? ಎಂದು ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರಿಗೆ ಹಾಗೂ ಪ್ರಿಯಾಂಕ್ ಖರ್ಗೆಯೆಡೆಗೆ ತೂರುವ ಒಂದೊಂದು ಬೈಗುಳವೂ ನಿಮ್ಮ ಕುರ್ಚಿಯ ಭದ್ರತೆಗೆ ಒಂದೊಂದು ಮೊಳೆ ಹೊಡೆದಂತೆ, ಬಿಜೆಪಿಯಲ್ಲಿ ನಿಮ್ಮ ಅಸ್ತಿತ್ವ ಇರುವುದೇ ನಮಗೆ ಬೈಯ್ಯುವುದರಲ್ಲಿ. ಬೈಯ್ಯುವುದಕ್ಕಾಗಿಯೇ ಬಿಜೆಪಿ ನಿಮ್ಮನ್ನು ಇಟ್ಟುಕೊಂಡಿದೆ ಎಂಬ ಸತ್ಯ ನಮಗೆ ತಿಳಿದಿದೆ. ಸ್ಪಷ್ಟವಾಗಿ ನನ್ನ ಹೆಸರನ್ನೇ ಬಳಸಿ ನಾಯಿ ಎಂದಿರುವ ತಾವು ಈಗ "ಅವರೇ ಭಾವಿಸಿಕೊಂಡಿದ್ದಾರೆ" ಎನ್ನುತ್ತಿದ್ದೀರಲ್ಲ, ಈ ಹಸಿಹಸಿಯಾದ ಸುಳ್ಳು ಹೇಳುವುದಕ್ಕೆ RSS ಕಚೇರಿಯಲ್ಲಿ ಎಷ್ಟು ದಿನ ಟ್ರೈನಿಂಗ್ ಪಡೆದಿದ್ದೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ಸಿನ ಗೂಂಡಾ ಸಂಸ್ಕೃತಿ ಅನಾವರಣಗೊಂಡಿದೆ : ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಗೂಂಡಾ ಸಂಸ್ಕೃತಿ ಅನಾವರಣಗೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಆಗಿರುವ ಹಕ್ಕುಚ್ಯುತಿ ಕುರಿತು ಸಭಾಪತಿ ಅವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕರಿಗೆ ಮನವಿ ನೀಡಿದ್ದೇವೆ. ಸಭಾಪತಿಯವರ ಜೊತೆ ಫೋನಿನಲ್ಲಿ ಮಾತನಾಡಿದ್ದೇನೆ. ತಕ್ಷಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ವಿವರಿಸಿದರು.

ನಮ್ಮನ್ನು ನಾಯಿಗೆ ಹೋಲಿಸಿದ್ದಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅವರಿಗೆ ಪದ್ಮಶ್ರೀ ಕೊಡಬೇಕಿತ್ತೇ? ಎಂದು ಸಚಿವರು ಕೇಳಿದ್ದಾರೆ. ದಿಗ್ಬಂಧನ ಹಾಕಿದ್ದೂ ಸರಿ; ಮಸಿ ಅಥವಾ ಇಂಕ್ ಚೆಲ್ಲಿದ್ದೂ ಸರಿ; ಮೊಟ್ಟೆ, ಕಲ್ಲುಗಳಲ್ಲಿ ಹೊಡೆದಿದ್ದೂ ಸರಿ; ನಮ್ಮ ಉತ್ತರ ಹೀಗೇ ಇರುತ್ತದೆ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ ಎಂದು ನುಡಿದರು.

ಪ್ರಧಾನಿಯವರು ಸಂಸತ್ತಿನಲ್ಲಿ ಮಾತನಾಡುವಾಗ ಗೌರವಾನ್ವಿತ ಖರ್ಗೆಯವರು ನಿಮ್ಮ ಮನೆಯ ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಸತ್ತಿಲ್ಲ ಎಂದಿದ್ದರು. ಅವರು ನಾಯಿ ಪದ ಬಳಸಿಲ್ಲವೇ? ಈ ದೇಶದ ಪ್ರಧಾನಿಯನ್ನು ವಿಷ ಸರ್ಪ ಎಂದು ಆಪಾದಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದಾಗ ನಾನು ಕೂಡ ಚಡ್ಡಿ ಸುಡುತ್ತೇನೆ ಎಂದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯೂ ಒಂದು ಅಂಗ. ಅದಕ್ಕೆ ವಿರುದ್ಧವಾಗಿ ಉತ್ತರ ಕೊಡುವ ರೀತಿಯಲ್ಲಿ ಅವರಿಗೆ ಎರಡು ಚಡ್ಡಿ ಕೊಟ್ಟಿದ್ದೆ ಎಂದು ಗಮನಕ್ಕೆ ತಂದರು.

ಆಗ ಮನುವಾದಿ ಎಂದು ಟೀಕಿಸಿದ್ದರು. ಮನುವಾದಿ ಎಂದರೆ ಏನು? ಎಂದು ಕೇಳಿದರು. ನಿಮ್ಮ ಉದ್ಧಟತನ, ದರ್ಪ ನಿಮ್ಮಲ್ಲೇ ಇರಲಿ. ನನ್ನನ್ನು ಕೆಣಕಲು ಹೋಗದಿರಿ ಎಂದು ಸವಾಲು ಹಾಕಿದರು.

ಇದು ದಲಿತರ ಪ್ರಶ್ನೆಯೇ ಅಲ್ಲ; ನೀವು ನಮ್ಮನ್ನು ಆ ರೀತಿ ನಿಂದಿಸದಿದ್ದರೆ ನಾವು ನಿಂದಿಸುವ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದು ತಿಳಿಸಿದರು.

ನೀವು ಸಚಿವರು, ನಾನು ವಿಪಕ್ಷ ನಾಯಕ. ನೀವು ನನ್ನ ಬಗ್ಗೆ ಮಾತನಾಡಿದಾಗ ನಾನು ತಮ್ಮ ಬಗ್ಗೆ ಮಾತನಾಡಬಾರದೇ? ಪ್ರಧಾನಿ ಬಗ್ಗೆ ಪ್ರಶ್ನಿಸಿ, ಆದರೆ ನಿಂದನೆಗಳು ಸರಿಯೇ? ಎಂದು ಕೇಳಿದರು. ಆನೆಯೇರಿ ಹೋದಡೆ ಶ್ವಾನ ಬೊಗಳುವುದಲ್ಲದೆ ಕಚ್ಚುವುದೇ? ಎಂದು ಅಣ್ಣ ಬಸವಣ್ಣನವರು ಹೇಳಿದ್ದಾರೆ. ಇದು ವಚನ. ಅಷ್ಟೇ ಏಕೆ ಬಹಳಷ್ಟು ಜನರು ಬಹಳ ವ್ಯಾಖ್ಯಾನ ಮಾಡಿದ್ದಾರೆ. ನಾಯಿ ಎಂದರೆ ಅದೊಂದು ಪ್ರಾಣಿ ಇರಬಹುದು. ನಾಯಿಯೇ ನಾರಾಯಣ ಅನ್ನುತ್ತಾರೆ ಎಂದು ಹೇಳಿದರು. ವಿಷ ಸರ್ಪ ಎಂಬುದು ಕೆಟ್ಟ ಪದ. ನಾಯಿ ಎಂಬುದು ಕೆಟ್ಟ ಪದವಲ್ಲ ಎಂದರು.

ಪದೇ ಪದೇ ಚಡ್ಡಿ ಎನ್ನದಿರಿ. ನೀವು ಚಡ್ಡಿ ಇಲ್ಲದವರೇ? ಎಂದು ಕೇಳಿದರು. ನಿಮ್ಮ ಚಡ್ಡಿ ಭದ್ರ ಮಾಡಿಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ : ಸಭಾಪತಿಗೆ ಹಕ್ಕುಚ್ಯುತಿ ದೂರು: ಪ್ರಿಯಾಂಕ್ ಖರ್ಗೆಯವರೇ ನನ್ನನ್ನು ಕೆಣಕಬೇಡಿ- ಚಲವಾದಿ ನಾರಾಯಣಸ್ವಾಮಿ - CHALAVADI NARAYANASWAMY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.