ETV Bharat / state

'ಮನೋಬಿಂಬ-ಬೆಂಗಳೂರಿಗರ ಮನದಾಳದ ಮಾತು': ಬಿಬಿಎಂಪಿಯಿಂದ ಹೊಸ YouTube ಪಾಡ್​ಕಾಸ್ಟ್​ ಆರಂಭ - Manobimba BBMP YouTube Podcast

ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ನೇತೃತ್ವದಲ್ಲಿ ಆರಂಭಿಸಿರುವ ಹೊಸ ಯೂಟ್ಯೂಬ್​ ಪಾಡ್​​ಕಾಸ್ಟ್​ನಲ್ಲಿ ಪ್ರತೀ ವಾರ ಅಥವಾ ಎರಡು ವಾರಕ್ಕೊಮ್ಮೆ ಉಚಿತವಾಗಿ ತಜ್ಞರಿಂದ ಆರೋಗ್ಯ ಸಲಹೆಗಳನ್ನು ಪಡೆಯಬಹುದು.

author img

By ETV Bharat Karnataka Team

Published : Sep 8, 2024, 7:27 PM IST

Updated : Sep 8, 2024, 7:56 PM IST

Manobimba BBPM Youtube Podcast
ಬಿಬಿಎಂಪಿಯಿಂದ ಹೊಸ ಯೂಟ್ಯೂಬ್ ಪಾಡ್​ಕಾಸ್ಟ್​ (ETV Bharat)

ಬೆಂಗಳೂರು: ನಗರದ ಜನರ ಮಾನಸಿಕ ಖಿನ್ನತೆ, ಆರೋಗ್ಯ ಕಾಳಜಿ, ಔಷಧ ನಿರ್ವಹಣೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞರು ಸಲಹೆ-ಸೂಚನೆಗಳನ್ನು ನೀಡುವ 'ಮನೋಬಿಂಬ' ಯೂಟ್ಯೂಬ್ ಚಾನಲ್ ಅನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಆರೋಗ್ಯ ವಿಭಾಗ ಆರಂಭಿಸಿದೆ.

ಜಯನಗರ 4ನೇ ಬ್ಲಾಕ್‌ನಲ್ಲಿರುವ ಪಾಲಿಕೆಯ ಸಂಕೀರ್ಣ ಕಟ್ಟಡದಲ್ಲಿ ಮನೋಬಿಂಬ ಸ್ಟುಡಿಯೋ ಅರಂಭವಾಗಿದೆ. ಸಿಲಿಕಾನ್ ಸಿಟಿಯ ವ್ಯಾಪ್ತಿಯ ಜನರ ಆರೋಗ್ಯ ರಕ್ಷಣೆ ಹಾಗೂ ವಾತಾವರಣದಲ್ಲಿನ ಏರುಪೇರಿನಿಂದ ಬರುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕೂನ್ ಗುನ್ಯಾ, ವೈರಲ್ ಜ್ವರಗಳು, ಮಕ್ಕಳನ್ನು ಕಾಡುವ ಸಾಂಕ್ರಾಮಿಕ ರೋಗಗಳೂ ಸೇರಿದಂತೆ ಮಹಿಳೆಯರು, ಮಕ್ಕಳು, ವೃದ್ಧರ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜನರಿಗೆ ಅಗತ್ಯ ಮಾಹಿತಿ ನೀಡುವುದು, ಆರೋಗ್ಯ ಸಮಸ್ಯೆ, ಮಾನಸಿಕ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರ ಮನೆ ಮನೆಗೂ ತಲುಪುವ ಉದ್ದೇಶ ಹಾಗೂ ಅರಿವು ಮೂಡಿಸುವ ಸಲುವಾಗಿ 'ಮನೋಬಿಂಬ-ಬೆಂಗಳೂರಿಗರ ಮನದಾಳದ ಮಾತು' ಎಂಬ ಪಾಡ್​ಕಾಸ್ಟ್​ ಚಾನಲ್ ಅನ್ನು ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ನೇತೃತ್ವದಲ್ಲಿ ಆರಂಭಿಸಿರುವುದು ಹೊಸ ಹೆಜ್ಜೆಯಾಗಿದೆ. ಈಗಾಗಲೇ ಈ ಚಾನೆಲ್​ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

"ಇಲ್ಲಿ ಜನರು ಉಚಿತವಾಗಿ ತಜ್ಞರ ಸಲಹೆಗಳನ್ನು ಪಡೆಯಬಹುದು. ಪ್ರತೀ ವಾರ ಅಥವಾ ಎರಡು ವಾರಕ್ಕೊಮ್ಮೆ ಆರೋಗ್ಯಕ್ಕೆ ಸಂಬಂಧಪಟ್ಟ ಇಲಾಖೆಗಳ ತಜ್ಞರೊಂದಿಗೆ ಸಂವಾದ ಕೂಡ ನಡೆಸಲಾಗುತ್ತದೆ" ಎಂದು ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

"ರಾಜಧಾನಿ ಬೆಂಗಳೂರಿನಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ, ಅರಿವು ಮೂಡಿಸುವ ಸಲುವಾಗಿ ಆರೋಗ್ಯ ವಿಭಾಗ ದಿಟ್ಟ ಹೆಜ್ಜೆ ಇಟ್ಟಿದೆ. ಇಲ್ಲಿ ಪ್ರತೀ ವಲಯ, ವ್ಯಾಪ್ತಿಯಲ್ಲಿ ಆರೋಗ್ಯ ಸೇವೆಗಳ ಬಗ್ಗೆ ಕೂಡ ಮಾಹಿತಿ ಪಡೆಯಬಹುದು. ಅಲ್ಲದೇ ತಮ್ಮ ಸಮಸ್ಯೆಗಳನ್ನು ನೇರವಾಗಿ ವಿಶೇಷ ತಜ್ಞರ ಜೊತೆ ಸಮಾಲೋಚಿಸಬಹುದು."

"ಸೆಪ್ಟೆಂಬರ್ 5ರಿಂದ ಲೈವ್ ಫೀಡ್ ನೀಡಲಾಗುತ್ತಿದೆ. ಇದು ಬೆಂಗಳೂರಿನ ನಾಗರಿಕರಿಗೆ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಲು ಮತ್ತು ಸಂಬಂಧಿತ ಸಮಸ್ಯೆಗಳನ್ನು ಕೇಂದ್ರೀಕರಿಸಿದೆ. ಯೂಟ್ಯೂಬ್ ಲೈವ್‌ನಲ್ಲಿ ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆ ಮಾಡಬಹುದಾಗಿದೆ. ಇ-ಮೇಲ್ ಮೂಲಕವೂ ಜನರು ತಮ್ಮ ಆರೋಗ್ಯ ಸಮಸ್ಯೆ, ಮನೋ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉಚಿತ ಸಲಹೆಗಳನ್ನು ಪಡೆಯಬಹುದು" ಎಂದು ಅವರು ಮಾಹಿತಿ ನೀಡಿದರು.

"ಮಾನಸಿಕ ಸಮಸ್ಯೆಗಳು, ಖಿನ್ನತೆ, ಮಾನಸಿಕ ಭ್ರಮೆಗಳು, ನಿದ್ರಾಹೀನತೆ ಸಮಸ್ಯೆಗಳು, ಜೂಜು, ಡ್ರಗ್ಸ್, ಆಲ್ಕೋಹಾಲ್, ಆತ್ಮಹತ್ಯೆ ಆಲೋಚನೆಗಳು, ತೀವ್ರ ಒತ್ತಡ, ಚಿಂತೆ, ಆತಂಕ, ಆರೋಗ್ಯ ಸಮಸ್ಯೆಗಳು ಸೇರಿ ಇತರ ಸಮಸ್ಯೆಗಳಿಗೆ ಆರೋಗ್ಯ ತಜ್ಞರು ಪ್ರತಿಕ್ರಿಯಿಸಿ ಸಲಹೆಗಳನ್ನು ನೀಡಲಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: ಬಿಬಿಎಂಪಿ: OTS ಯೋಜನೆ ಅವಧಿ ವಿಸ್ತರಣೆಗೆ ಸುಗ್ರೀವಾಜ್ಞೆ ತರಲು ಸಂಪುಟ ಅಸ್ತು - BBMP Property Tax Arrears

Last Updated : Sep 8, 2024, 7:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.