ವಿಜಯನಗರ: ಹಳೆ ದ್ವೇಷದ ಹಿನ್ನೆಲೆ ಚೂರಿಯಲ್ಲಿ ಚುಚ್ಚಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೋರ್ವರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೊಸಪೇಟೆಯ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರ 4ನೇ ಕ್ರಾಸ್ನಲ್ಲಿ ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಹೊನ್ನೂರ ಅಲಿಯಾಸ್ ಹೊನ್ನೂರ್ವಸ್ವಾಮಿ (30) ಕೊಲೆಯಾದ ವ್ಯಕ್ತಿ. ಹತ್ಯೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. 6 ವರ್ಷದ ಹಿಂದೆ ಕೂಡ ಮೃತನ ಮೇಲೆ ಕೊಲೆಗೆ ಯತ್ನ ನಡೆದಿತ್ತು. ಮೊದಲು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಲಾಗಿದೆ. ಘಟನಾ ಸ್ಥಳದಲ್ಲಿ ಎರಡು ಚಾಕುಗಳು ತುಂಡಾಗಿ ಬಿದ್ದಿವೆ.
ಕೊಲೆಯಾದ ಹೊನ್ನೂರ ದಾವಣಗೆರೆಯಲ್ಲಿ ಇರುತ್ತಿದ್ದು, ಇಂದು ಜಂಬುನಾಥ ಜಾತ್ರೆ ಹಿನ್ನೆಲೆ ಹೊಸಪೇಟೆಗೆ ಆಗಮಿಸಿದ್ದ. ಘಟನಾ ಸ್ಥಳಕ್ಕೆ ಹೊಸಪೇಟೆ ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ್, ಸಿಪಿಐ ಹುಲುಗಪ್ಪ ಸೇರಿದಂತೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿಜಯನಗರ ಎಸ್ಪಿ ಡಾ. ಶ್ರೀಹರಿಬಾಬು ಬಿಎಲ್ ಕೂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ; ಪತಿಯ ವಿರುದ್ಧ ಪೋಷಕರ ಆರೋಪ