ETV Bharat / state

ಸೂಕ್ತ ದಾಖಲಾತಿ ನೀಡುವಂತೆ EDಯಿಂದ ಮುಡಾ ಆಯುಕ್ತರಿಗೆ ಪತ್ರ - MUDA CASE

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಮುಡಾ ಆಯುಕ್ತರಿಗೆ ಇಡಿ ಪತ್ರ ಬರೆದಿದೆ.

Letter from ED to Muda Commissioner seeking registration
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : May 14, 2025 at 5:14 PM IST

1 Min Read

ಮೈಸೂರು: ಮುಡಾ ಪ್ರಕರಣದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಸಂಬಂಧ ನಡೆದಿದೆ ಎನ್ನಲಾದ ಹಣ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಹೆಚ್ಚು ದಾಖಲೆಗಳನ್ನು ನೀಡುವಂತೆ ಮುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಮುಡಾ ಹಗರಣದಲ್ಲಿ 50:50 ಅನುಪಾತದಲ್ಲಿ ಹಿಂದಿನ ಆಯುಕ್ತರು ಕಾನೂನು ಉಲ್ಲಂಘನೆ ಮಾಡಿ ಹಂಚಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಇಡಿ ತನಿಖೆಗೆ ಮತ್ತಷ್ಟು ದಾಖಲೆ ನೀಡುವಂತೆ ಮೇ 9 ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದೆ.

ಶೇ.50:50 ಅನುಪಾತದಡಿ ಅಭಿವೃದ್ಧಿಗೊಂಡಿರುವ ಬಡಾವಣೆಗಳಲ್ಲಿ ಅನಧಿಕೃತವಾಗಿ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನಗಳನ್ನು ಮಂಜೂರು ಮಾಡಿರುವ ಆರೋಪ ಎದುರಿಸುತ್ತಿರುವ ಮುಡಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಹೆಚ್ಚುವರಿ ಮಾಹಿತಿ ನೀಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳಿಗೆ ಸೂಚಿಸಿದೆ.

ಈ ಸಂಬಂಧ ಮೇ 9 ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ವಿ.ಮುರಳಿ ಕಣ್ಣನ್‌ ದೇವನೂರು ಗ್ರಾಮದ ಸರ್ವೆ ನಂಬರೆ 81/2 ರಲ್ಲಿ 2 ಎಕರೆ 22 ಗುಂಟೆ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಸಂಬಂಧ ಭೂಮಾಲೀಕರಿಗೆ ನೀಡಿರುವ ಪರಿಹಾರದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಭೂಸ್ವಾದೀನಕ್ಕೆ ಅಧಿಸೂಚನೆ ಹೊರಡಿಸಿರುವ ಪ್ರತಿ, ಆ ಭೂಮಿಯ ಮಾಲೀಕರು ಯಾರು?. ಈ ಪ್ರಕರಣದಲ್ಲಿ ಹಂಚಿಕೆ ಮಾಡಲಾದ ಕಡತ ಸಲ್ಲಿಸುವಂತೆ ಇಡಿ ತಿಳಿಸಿದೆ.

ಹೆಬ್ಬಾಳು ಗ್ರಾಮದ ಸರ್ವೆ ನಂ.88/2ರ 2ಎಕರೆ ಭೂಮಿಗೆ ಪರಿಹಾರ ನೀಡಿದ ಬಗ್ಗೆ ನೋಟಿಫಿಕೇಷನ್‌ ಮಾಡಿದ್ದರೆ ಅದರ ಪ್ರತಿ ಅದರ ಮಾಲೀಕರು ಯಾರು ಹಂಚಿಕೆ ಕಡತವನ್ನು ಸಲ್ಲಿಸುವಂತೆಯೂ ಜಾರಿ ನಿರ್ದೇಶನಾಲಯವು ಮುಡಾ ಆಯುಕ್ತರಿಗೆ ಸೂಚನೆ ನೀಡಿದೆ. ದಟ್ಟಗಳ್ಳಿ ಸರ್ವೆ ನಂಬರ್‌ 168,169, 176 ಮತ್ತು 183/1ರ ಭೂಮಿಗೆ ಪರಿಹಾರವಾಗಿ 28 ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು ನಗರ ಯೋಜನಾ ಶಾಖೆಯ ಇಂಜಿನಿಯರಿಂಗ್‌ ಶಾಖೆಗಳಿಂದ ವರದಿ ಅಭಿಪ್ರಾಯ ಪಡೆಯಲಾಗಿತ್ತೇ, ಪಡೆದಿದ್ದರೆ ಅದರ ಪ್ರತಿಯನ್ನೂ ಸಲ್ಲಿಸುವಂತೆಯೂ ಇಡಿ ಅಧಿಕಾರಿಗಳು ಪತ್ರದಲ್ಲಿ ಸೂಚಿಸಿದ್ದಾರೆ.

ಇದನ್ನು ಓದಿ:ದೇಶದಲ್ಲೇ ಅತ್ಯಂತ ಸುರಕ್ಷಿತ ನಗರ ಬೆಂಗಳೂರು: ಯೂನಿವರ್ಸಿಟಿ ಆಫ್ ಹೈದರಾಬಾದ್ ಸಮೀಕ್ಷೆಯಲ್ಲಿ ಬಹಿರಂಗ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.