ETV Bharat / state

ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ನಾಳೆ ಮಧ್ಯಾಹ್ನದವರೆಗೂ ಅವಕಾಶ - KEA seat cancellation is allowed

ಶುಕ್ರವಾರ ಮಧ್ಯಾಹ್ನ 2 ಗಂಟೆಯೊಳಗೆ ಕೆಇಎ‌ ಮೂಲಕ ಹಂಚಿಕೆ ಆಗಿರುವ ವೈದ್ಯಕೀಯ ಸೀಟನ್ನು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

author img

By ETV Bharat Karnataka Team

Published : Sep 19, 2024, 10:30 PM IST

Keeping the MCC seat, KEA seat cancellation is allowed till tomorrow afternoon.
ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ನಾಳೆ ಮಧ್ಯಾಹ್ನದವರೆಗೂ ಅವಕಾಶ..! (ETV Bharat)

ಬೆಂಗಳೂರು: ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (ಎಂಸಿಸಿ) ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಅಲ್ಲಿ ಸೀಟು ಸಿಕ್ಕಿ, ಅದನ್ನೇ ಉಳಿಸಿಕೊಳ್ಳಲು ಇಚ್ಛಿಸುವವರು ಶುಕ್ರವಾರ (ಸೆ.20) ಮಧ್ಯಾಹ್ನ 2 ಗಂಟೆಯೊಳಗೆ ಕೆಇಎ‌ ಮೂಲಕ ಹಂಚಿಕೆ ಆಗಿರುವ ವೈದ್ಯಕೀಯ ಸೀಟನ್ನು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಅಂತಹವರು, ನಾಳೆ ಕೆಇಎ ಕಚೇರಿಗೆ ಖುದ್ದಾಗಿ ಬಂದು ರದ್ದುಪಡಿಸಿಕೊಳ್ಳಬೇಕು. ₹10,000 ದಂಡ ವಿಧಿಸಿ, ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಸೀಟು ರದ್ದುಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸೆಲಿಂಗ್​ ನಲ್ಲಿ ಹಂಚಿಕೆಯಾದ ಸೀಟುಗಳ ವಿವರವನ್ನೂ ಸಲ್ಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ಈ ಪ್ರಕ್ರಿಯೆ ನಂತರ ಕೆಇಎದಲ್ಲಿ ರದ್ದಾದ ಎಲ್ಲ ಸೀಟುಗಳನ್ನು ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ ಆಪ್ಷನ್ಸ್ ಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು 'ರೀ ರನ್' ಮಾಡಿ, ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಹಂತದಲ್ಲಿ ಆಪ್ಷನ್ಸ್ ಗಳ ಆದ್ಯತೆಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತರ ಅಭ್ಯರ್ಥಿಗಳಿಗೆ ದಂಡವಿಲ್ಲದೇ ಯಾವುದೇ ಸೀಟನ್ನು ರದ್ದುಪಡಿಸುವುದಿಲ್ಲ. ಮುಂದಿನ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಸನ್ನ ವಿವರಿಸಿದ್ದಾರೆ.

ಇದನ್ನು ಓದಿ: ಭಾವೈಕ್ಯತೆ: ಗಣೇಶೋತ್ಸವ ಸಮಿತಿಗೆ ಮುಸ್ಲಿಂ, ಈದ್ ಮಿಲಾದ್ ಸಮಿತಿಗೆ ಹಿಂದೂಗಳೇ ಅಧ್ಯಕ್ಷರು, ಉಪಾಧ್ಯಕ್ಷರು - Hindu Muslim Harmony

ETV Bharat Logo

Copyright © 2024 Ushodaya Enterprises Pvt. Ltd., All Rights Reserved.