ETV Bharat / state

ನ್ಯಾ.ಕೆ.ಸೋಮಶೇಖರ್ ಅವರನ್ನು ಮಣಿಪುರ ಹೈಕೋರ್ಟ್ ಸಿಜೆಯಾಗಿ ನೇಮಿಸಿದ ಕೇಂದ್ರ - JUSTICE KEMPAIAH SOMASHEKAR

ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್ ಅವರನ್ನು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.

ನ್ಯಾ ಕೆ.ಸೋಮಶೇಖರ್
ನ್ಯಾ.ಕೆ.ಸೋಮಶೇಖರ್ (ETV Bharat)
author img

By ETV Bharat Karnataka Team

Published : May 20, 2025 at 9:47 PM IST

1 Min Read

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರನ್ನು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಸಂವಿಧಾನದ 217ನೇ ವಿಧಿಯಡಿ ಪ್ರದತ್ತವಾದ ಅಧಿಕಾರ ಬಳಸಿ ರಾಷ್ಟ್ರಪತಿ ನ್ಯಾ.ಕೆ.ಸೋಮಶೇಖರ್ ಅವರನ್ನು ಮಣಿಪುರ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿದ್ದಾರೆ. ನ್ಯಾ.ಸೋಮಶೇಖರ್ ಅವರು ಅಧಿಕಾರ ಸ್ವೀಕರಿಸುವ ದಿನದಿಂದ ಅಧಿಸೂಚನೆ ಜಾರಿಗೆ ಬರಲಿದೆ ಎಂದು ಕೇಂದ್ರ ಕಾನೂನು ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಅವರು ಮೇ 21ರಂದು ನಿವೃತ್ತಿ ಹೊಂದುವ ಹಿನ್ನೆಲೆಯಲ್ಲಿ ನ್ಯಾ.ಕೆ.ಸೋಮಶೇಖರ್ ಅವರನ್ನು ಆ ಹುದ್ದೆಗೆ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಿಂ ಮೇ 15ರಂದು ನಡೆದ ಸಭೆಯಲ್ಲಿ ನಿರ್ಧರಿಸಿ, ಶಿಫಾರಸು ಮಾಡಿತ್ತು.

ನ್ಯಾ.ಸೋಮಶೇಖರ್ ಅವರು 1990ರ ಜನವರಿ 27ರಂದು ವಕೀಲರಾಗಿ ನೋಂದಾಯಿಸಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ವಿಭಾಗದಲ್ಲಿ ಪ್ರಾಕ್ಟೀಸ್ ನಡೆಸಿದ್ದರು. 1998ರ ಜೂನ್ 17ರಂದು ನೇರವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ವಿಜಯಪುರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ, ಆ ನಂತರ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲೂ ಸೇವೆ ಸಲ್ಲಿಸಿದ್ದಾರೆ.

ಹೈಕೋರ್ಟ್ ನ ನ್ಯಾಯಾಂಗ ಮತ್ತು ವಿಚಕ್ಷಣಾ ರಿಜಿಸ್ಟ್ರಾರ್ ಆಗಿಯೂ ಕೆಲಸ ಮಾಡಿರುವ ನ್ಯಾ. ಸೋಮಶೇಖರ್, 2016ರ ನವೆಂಬರ್ 14ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು, 2018ರ ನವೆಂಬರ್ 3ರಲ್ಲಿ ಖಾಯಂಗೊಂಡಿದ್ದರು.

ಇದನ್ನೂ ಓದಿ: ಹರೀಶ್​ ಪೂಂಜಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ: ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದ ಹೈಕೋರ್ಟ್​ - HARISH POONJA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.