ಶಿವಮೊಗ್ಗ: ಹೊರವಲಯ ಅಬ್ಬಲಗೆರೆ ಸಮೀಪದ ಇಂಡಿಯಾ ಐರನ್ ಕಾಸ್ಟಿಂಗ್ ಕಾರ್ಖಾನೆಯಲ್ಲಿ ಕಾಸ್ಟಿಂಗ್ ಮಾಡುವಾಗ ಯಂತ್ರ ಸಿಡಿದು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಕಾರ್ಮಿಕರು ಐರನ್ ಕಾಸ್ಟಿಂಗ್ ಮಾಡುವಾಗ ಐರನ್ ಹಾಕುವ ಯಂತ್ರವು ಸಿಡಿದಿದೆ. ಪರಿಣಾಮ ಕೆಲಸದಲ್ಲಿ ತೊಡಗಿಕೊಂಡಿದ್ದ ನಾಲ್ವರ ಮೇಲೆ ಬಿದ್ದಿದೆ. ಇದರಿಂದಾಗಿ ನಾಲ್ವರ ಕಾಲು ಸೇರಿದಂತೆ ಎದೆಯ ಮೇಲೂ ಸುಟ್ಟಿದೆ. ತಕ್ಷಣ ಇವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಾರ್ಮಿಕರಾದ ಗಂಗಾಧರ ನಾಯ್ಕ, ಶ್ರೀನಿವಾಸ್, ಷಣ್ಮುಗಪ್ಪ ಹಾಗೂ ಶಿವಲಿಂಗಪ್ಪ ಎಂಬುವರು ಗಾಯಗೊಂಡಿದ್ದಾರೆ. ಸದ್ಯ ಎಲ್ಲರೂ ಅಪಾಯದಿಂದ ಪರಾಗಿದ್ದಾರೆಂದು ಇಂಡಿಯಾ ಪಿಸ್ಟನ್ ಲಿಮಿಟೆಡ್ ನ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಸ್ತೆ ವಿಚಾರಕ್ಕೆ ಗಲಾಟೆ: ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಗ್ರಾಮ ಪಂಚಾಯತಿ ಉಪಾಧ್ಯಕ್ಷ