ETV Bharat / state

ವಿಶ್ವ ಆನೆ ದಿನವಾದ ಆ.12 ರಂದು ಅಂತಾರಾಷ್ಟ್ರೀಯ ಸಮ್ಮೇಳನ: ಸಂಶೋಧನಾ ಲೇಖನ ಆಹ್ವಾನ - International conference

author img

By ETV Bharat Karnataka Team

Published : Aug 10, 2024, 10:30 PM IST

ವಿಶ್ವ ಆನೆ ದಿನ ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆಯು ಮಾನವ - ಆನೆ ಸಂಘರ್ಷ ನಿರ್ವಹಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆ.12ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿದೆ.

ವಿಶ್ವ ಆನೆ ದಿನವಾದ ಆ.12 ರಂದು ಅಂತಾರಾಷ್ಟ್ರೀಯ ಸಮ್ಮೇಳನ
ವಿಶ್ವ ಆನೆ ದಿನವಾದ ಆ.12 ರಂದು ಅಂತಾರಾಷ್ಟ್ರೀಯ ಸಮ್ಮೇಳನ (PTI)

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯು ಮಾನವ - ಆನೆ ಸಂಘರ್ಷ ನಿರ್ವಹಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆ.12ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಆಯೋಜಿಸಿದೆ.

ವಿಶ್ವ ಆನೆ ದಿನವಾದ ಆ.12ರಂದೇ ಕರ್ನಾಟಕ ಅರಣ್ಯ ಇಲಾಖೆಯು ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಈ ಸಮ್ಮೇಳನದ ಪ್ರಾಥಮಿಕ ಗುರಿಯು ಜ್ಞಾನ-ಹಂಚಿಕೆ, ಉತ್ತಮ-ಕಲಿಕೆಯ ಅವಕಾಶಗಳನ್ನು ಪೋಷಿಸುವುದು, ಮಾನವ ಮತ್ತು ಆನೆಗಳ ನಡುವೆ ಸಹಬಾಳ್ವೆಯನ್ನು ಬೆಳೆಸಲು ಅಂತರ್ಗತ ವಿಧಾನಗಳನ್ನು ಪ್ರತಿಪಾದಿಸುವುದು. ಮಾನವ ಹಾಗೂ ಆನೆಗಳ ನಡುವಿನ ನಕಾರಾತ್ಮಕ ಸಂವಹನವನ್ನು ನಿರ್ವಹಿಸುವ ಪರಿಹಾರ/ವಿಧಾನಗಳನ್ನು ಗುರುತಿಸಲು ವಿಶ್ವದಾದ್ಯಂತ ಅರಣ್ಯಇಲಾಖೆ ಅಧಿಕಾರಿಗಳು, ಶೈಕ್ಷಣಿಕ ಸಂಶೋಧಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳನ್ನು ಒಳಗೊಳ್ಳುವ ಮೂಲಕ ಏಷ್ಯನ್ ಆನೆಗಳ ಬಗ್ಗೆ ಪರಿಣತಿಯನ್ನು ಒಟ್ಟುಗೂಡಿಸುವ ಗುರಿಯನ್ನು ಈ ಸಮ್ಮೇಳನವು ಹೊಂದಿದೆ.

ಈ ಸಮ್ಮೇಳನವು ಸಂವಾದಾತ್ಮಕ ಚರ್ಚೆಗಳು ಮತ್ತು ವೈಜ್ಞಾನಿಕ ಉಪನ್ಯಾಸಗಳನ್ನು ಒಳಗೊಂಡಿದ್ದು, ಆನೆಗಳನ್ನು ಸಂರಕ್ಷಿಸಲು ಮತ್ತು ಮಾನವ-ಆನೆಗಳ ಪರಸ್ಪರ ಸಂಘರ್ಷಣ ಕ್ರಿಯೆಯನ್ನು ಪರಿಹರಿಸಲು, ರಚನಾತ್ಮಕ ಸಂವಾದಗಳನ್ನು ಆಯೋಜಿಸಲಾಗುತ್ತದೆ. ಮಾನವ ಮತ್ತು ಆನೆಗಳು ಹಂಚಿಕೊಳ್ಳುವ ಭೂಭಾಗಗಳಲ್ಲಿ ಸಾಮರಸ್ಯದ ಸಹಬಾಳ್ವೆಯನ್ನು ಪ್ರೋತ್ಸಾಹಿಸಲು ರಾಜ್ಯ ಅರಣ್ಯ ಇಲಾಖೆಯು, ಸ್ಥಳೀಯ ಸಮುದಾಯಗಳು, ಸಂರಕ್ಷಣಾ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಅಳವಡಿಸಿಕೊಳ್ಳಬಹುದಾದ ವಿಧಾನಗಳು ಮತ್ತು ಉತ್ತಮ ಅಭ್ಯಾಸಗಳನ್ನು ಗುರುತಿಸುವುದು ಮೂಲ ಉದ್ದೇಶವಾಗಿದೆ.

ಆ.12ರಂದು ಬೆಳಗ್ಗೆ 10ಕ್ಕೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ನಡೆಯುವ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್, ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ್​ ಖಂಡ್ರೆ ಅವರು ಭಾಗವಹಿಸಲಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆನೆ ಆವಾಸ ಸ್ಥಾನವಿರುವ ವಿವಿಧ ದೇಶಗಳ ಸಂಶೋಧಕರು ಹಾಗೂ ಪ್ರತಿನಿಧಿಗಳು, ಆನೆ ಆವಾಸಸ್ಥಾನವಿರುವ ಭಾರತದ ವಿವಿಧ ರಾಜ್ಯಗಳ ಅರಣ್ಯಮಂತ್ರಿಗಳು, ಅರಣ್ಯಾಧಿಕಾರಿಗಳು, ಸಂಶೋಧಕರು ಹಾಗೂ ಇತರೆ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಶಿಕ್ಷಣಸಂಸ್ಥೆಗಳು, ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ.

ಸಂಶೋಧನಾ ಲೇಖನ ಆಹ್ವಾನ: ವಿಷಯವಾರು, ಸಂಶೋಧನಾ ಲೇಖನಗಳನ್ನು ಎಲ್ಲೆಡೆಯಿಂದ ಆಹ್ವಾನಿಸಲಾಗಿದೆ ಮತ್ತು ಸಂಶೋಧನಾ ಲೇಖನ ಆಯ್ಕೆ ಸಮಿತಿಯು ಅದನ್ನು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ, ಸಮಿತಿಯು ಪಿಪಿಟಿ ಅಥವಾ ಪೋಸ್ಟ್ ಉಪನ್ಯಾಸ (ಆನ್​ಲೈನ್​ /ಆಫ್​ಲೈನ್​) ಮೂಲಕ ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಬಹುದಾದ 20 ಸಂಶೋಧಕರ ಪಟ್ಟಿಯನ್ನು ಆಯ್ಕೆಮಾಡುತ್ತದೆ.

ಪಿಪಿಟಿ ಉಪನ್ಯಾಸಗಳಿಗಾಗಿ ಆಯ್ಕೆ ಮಾಡಲಾದ ಸಂಶೋಧನಾ ಲೇಖನಗಳನ್ನು ಸಂಕಲನದ ಭಾಗವಾಗಿ ಪ್ರಕಟಿಸಿದ ಲೇಖನಗಳನ್ನು ಆಯ್ಕೆ ಮಾಡಲು ಮತ್ತಷ್ಟು ಪರಿಶೀಲಿಸಲಾಗುತ್ತದೆ ಮತ್ತು ಮೂರು "ಅತ್ಯುತ್ತಮ ಸಂಶೋಧನಾ ಲೇಖನಗಳನ್ನು ಪುರಸ್ಕರಿಸಲಾಗುವುದು.

ಅತ್ಯುತ್ತಮ ಅಭ್ಯಾಸಗಳು" ಕುರಿತ ಲೇಖನ ಆಹ್ವಾನ : "ಅತ್ಯುತ್ತಮಅಭ್ಯಾಸಗಳು" ಕ್ಷೇತ್ರದಲ್ಲಿ ಅಳವಡಿಸಲಾಗಿರುವ /ಪ್ರಯೋಗಿಸಲಾದ ಅಭ್ಯಾಸ ಕುರಿತ ಲೇಖನಗಳನ್ನು ಆಹ್ವಾನಿಸಲಾಗುತ್ತದೆ ಮತ್ತು ಅದನ್ನು ಅತ್ಯುತ್ತಮ ಅಭ್ಯಾಸಗಳ ಆಯ್ಕೆ ಸಮಿತಿಯು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ, ಸಮಿತಿಯು ಪ್ರತಿಥೀಮ್​ಗೆ 3 “ಅತ್ಯುತ್ತಮ ಅಭ್ಯಾಸ”ಗಳ ಪಟ್ಟಿಯನ್ನು ಆಯ್ಕೆ ಮಾಡುತ್ತದೆ. ಇದನ್ನು ಸಮ್ಮೇಳನ ದಿನದಂದು ಆಯಾ ಧ್ಯೇಯದ ಲೇಖನದ ಪ್ರಸ್ತುತಿಗಳ ಭಾಗವಾಗಿ ಪ್ರಸ್ತುತಪಡಿಸಲಾಗುತ್ತದೆ.

ಸಮ್ಮೇಳನದ ವೇಳಾಪಟ್ಟಿ : ಸಮ್ಮೇಳನವನ್ನು 2 ದಿನಗಳಲ್ಲಿ ಆನ್​ಲೈನ್​ ಮತ್ತು ಆಫ್​ಲೈನ್ ಮಾದರಿಗಳಲ್ಲಿ ನಡೆಸಲು ಯೋಜಿಸಲಾಗಿದೆ.

ಧ್ಯೇಯಗಳು:

  • ಮಾನವ-ಆನೆ ಸಂಘರ್ಷದ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಪರಿಹರಿಸುವುದು.
  • ಮಾನವ-ಆನೆ ಸಂಘರ್ಷ ನಿರ್ವಹಣೆಯಲ್ಲಿ ವಿವಿಧ-ವಲಯದ ಸಹಯೋಗ ಮತ್ತು ಸಮುದಾಯದ ಭಾಗವಹಿಸುವಿಕೆ.
  • ಸಂಘರ್ಷ ತಗ್ಗಿಸುವಿಕೆ ಮತ್ತು ಸಹಬಾಳ್ವೆಗಾಗಿ ತಂತ್ರಜ್ಞಾನದ ಬಳಕೆ.
  • ಸಂಘರ್ಷಣೆಯ ಸಮಯದಲ್ಲಿ ಆನೆಗಳು ಮತ್ತು ಮನುಷ್ಯರಿಗೆ ಸುರಕ್ಷಿತ ನಿರ್ವಹಣೆ ಶಿಷ್ಟಾಚಾರಗಳು.
  • ಮಾನವ- ಆನೆ ಸಂಘರ್ಷ ನಿರ್ವಹಣೆಯಲ್ಲಿ ಪರಿಣಾಮಕಾರಿ ಸಂವಹನದ ಪಾತ್ರ.

ಧ್ಯೇಯವಾರು ಮಳಿಗೆಗಳು: ವಿಷಯವಾರು ಹೊಸ ಆವಿಷ್ಕಾರಗಳು, ಉಪಕರಣಗಳು, ಸಲಕರಣೆಗಳು, ಸಾಧನೆಗಳು ಮತ್ತು ಇತರೆ ವಸ್ತುಗಳನ್ನು ಪ್ರದರ್ಶಿಸಲು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಮಾನವ-ಆನೆ ಸಂಘರ್ಷವನ್ನು ತಗ್ಗಿಸುವ ಆವಿಷ್ಕಾರಗಳನ್ನು ಪ್ರದರ್ಶಿಸುವ ಸಂಸ್ಥೆಗಳ ಹಾಗೂ ಕ್ಷೇತ್ರಮಟ್ಟದ ಕಾರ್ಯನಿರ್ವಾಹಕರ ನಡುವೆ ಈ ಸಮ್ಮೇಳನವು ಸೇತುವೆಯಾಗಿ ಕಾರ್ಯನಿರ್ವಹಿಸುವ ವೇದಿಕೆಯಾಗಿದೆ.

ಇದನ್ನೂ ಓದಿ: ನದಿ ನಿಯಂತ್ರಣಾ ವಲಯ ಗುರುತಿಸಿ, ವಾಣಿಜ್ಯ ಚಟುವಟಿಕೆ ನಿಯಂತ್ರಿಸಲು ಪರಿಸರವಾದಿಗಳಿಂದ ನಿರ್ಣಯ ಮಂಡನೆ - Gadgil Report

ETV Bharat Logo

Copyright © 2024 Ushodaya Enterprises Pvt. Ltd., All Rights Reserved.