ETV Bharat / state

ಗೋಹತ್ಯೆ ಪ್ರಕರಣ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿದ್ದು, ಕ್ರಮಕ್ಕೆ ಸೂಚನೆ ನೀಡಲಾಗಿದೆ: ಸಚಿವ ಜಿ.ಪರಮೇಶ್ವರ್ - COW ATTACK CASE

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯದಲ್ಲಿ ಹೆಚ್ಚಾದ ಗೋಹತ್ಯೆ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ.

PARAMESHWARA REACT ON ROBBERY CASE
ಗೃಹ ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Jan 20, 2025, 1:31 PM IST

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ಪ್ರಕರಣ ಹೆಚ್ಚಳವನ್ನು ಗಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ಪ್ರಕರಣ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿ, ಇದಕ್ಕೆ ಏನಾದ್ರೂ ಉಪಾಯ ಕಂಡು ಹಿಡಿಯಬೇಕಿದೆ. ಇಂತ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಮನಸ್ಥಿತಿ ಇರುವವರನ್ನು ಗುರುತಿಸಬೇಕು. ಯಾವುದಾದರೂ ಸಂಘಟನೆ ಇದ್ಯಾ, ಇಂಡುವಿಶ್ಯುಲ್ ಇದ್ದಾರಾ ನೋಡಬೇಕು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಈ ಕುರಿತಂತೆ ಸೂಚನೆ ನೀಡಿರುವೆ ಎಂದರು.

ಗೃಹ ಸಚಿವ ಜಿ.ಪರಮೇಶ್ವರ್ (ETV Bharat)

ಮೈಕ್ರೋ ಫೈನಾನ್ಸ್ ದೋಖಾ ವಿಚಾರವಾಗಿ ಪ್ರತಿಕ್ರಿಯಿಸಿ, ಹಣಕಾಸು ಇಲಾಖೆ ಇದಕ್ಕೆ ದಾರಿ ಹುಡುಕಬೇಕು‌. ನಾವು ಮಾಡುವುದಕ್ಕೆ ಬರಲ್ಲ. ಇನ್ನು ಬೀದರ್, ಮಂಗಳೂರು ದರೋಡೆ ಪ್ರಕರಣದ ಮಾಹಿತಿ ಕಲೆಹಾಕಲಾಗಿದೆ. ಶೀಘ್ರವಾಗಿ ಸೆಕ್ಯೂರ್ ಮಾಡುತ್ತೇವೆ. ಅವರು ಬೇರೆ ರಾಜ್ಯದವರು ಅಂತ ಮಾಹಿತಿ ಇದೆ ಎಂದು ಪರಮೇಶ್ವರ್ ಹೇಳಿದರು.

ಸಭಾಪತಿ ಹೊರಟ್ಟಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾವ ಹಂತದಲ್ಲಿ ಚರ್ಚೆಯಾಗಿದೆ ಗೊತ್ತಿಲ್ಲ. ಬಿಜೆಪಿ ನಮಗೆ ಒಡೆದ ಮನೆ ಅಂತಿದ್ರು. ಅವರ ಮನೆಗೆ ಎಷ್ಟು ಬಾಗಿಲು ಹೇಳಬೇಕಲ್ಲ?. ನಮಗೆ ಹೇಳ್ತಿದ್ರಲ್ವಾ?. ಈಗ ಏನು ಮಾಡ್ತೀರಾ ಅಂತ ಕೇಳ್ತೇನೆ ಎಂದರು.

ಸೆಂಟ್ರಲ್ ಜೈಲ್ ವಿಭಜನೆ ವಿಚಾರವಾಗಿ ಮಾತನಾಡಿ, ಜೈಲಿನ ಸೆಕ್ಯೂರಿಟಿ ಟೈಟ್ ಆಗಬೇಕು. ಜೈಲ್ ಸಿಬ್ಬಂದಿ ರಿಕ್ರೂಟ್ ಆಗಬೇಕು. ಜೈಲ್ ಡಿವೈಡ್ ಸದ್ಯಕ್ಕೆ ಪ್ರಪೋಸಲ್ ಇಲ್ಲ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಅಪರಾಧಕ್ಕೂ ಮುನ್ನವೇ ಗೊತ್ತಾದರೆ ಆಗಲು ಬಿಡಲ್ಲ: ಜಿ.ಪರಮೇಶ್ವರ್ - G PARAMESHWARA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.