ETV Bharat / state

ಚಾಮರಾಜನಗರ: ಚಾಕು ಇರಿದು ಪತ್ನಿಯನ್ನು ಕೊಂದ ಪತಿ - HUSBAND KILLS WIFE

ಕೌಟುಂಬಿಕ ಕಲಹ ತೀವ್ರ ಸ್ವರೂಪ ಪಡೆದು ಪತಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹನೂರಿನಲ್ಲಿ ನಡೆದಿದೆ.

HUSBAND MURDERED WIFE
ಚಾಕು ಇರಿದು ಪತಿಯಿಂದ ಪತ್ನಿ ಕೊಲೆ (ETV Bharat)
author img

By ETV Bharat Karnataka Team

Published : May 21, 2025 at 8:41 PM IST

1 Min Read

ಚಾಮರಾಜನಗರ: ಪತಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹನೂರು ತಾಲೂಕಿನ ಗುಳ್ಯದ ಬಯಲು ಗ್ರಾಮದಲ್ಲಿ ಬುಧವಾರ ನಡೆದಿದೆ. ಮಹಾದೇವಿ(28) ಕೊಲೆಯಾದವರು. ಭದ್ರ ಕೊಲೆ ಮಾಡಿದ ಪತಿ. ಹನೂರು ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಹಾವು ಕಚ್ಚಿ ವ್ಯಕ್ತಿ ಸಾವು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ‌ ಗ್ರಾಮದ‌ಲ್ಲಿ ನಡೆದಿದೆ. ಹಸಗೂಲಿ‌ ಗ್ರಾಮದ ಉಮೇಶ್ (37) ಮೃತರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ವಿಷ ದೇಹದ ತುಂಬೆಲ್ಲಾ ಹರಡಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಎಂದು ದೃಢಪಡಿಸಿದರು. ನಂತರ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಣಿ ಮನೆಗಳ್ಳತನ: ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಬುಧವಾರ ಐದು ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ. ಕುಮಾರ್, ರವಿ, ರೇಷ್ಮಾ, ನಾಗರಾಜ್ ಹಾಗೂ ಪುಟ್ಟದೇವಮ್ಮ ಎಂಬವರ ಮನೆಗಳ ಬೀಗ ಒಡೆದ ಕಳ್ಳರು, ನಗದು ಹಾಗೂ ಚಿನ್ನಾಭರಣ ಕದ್ದೊಯ್ದಿದ್ದಾರೆ.

ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕೃತ್ಯ ಎಸಗಿದ್ದಾರೆ. ಕುಮಾರ್ ಎಂಬವರ ಮನೆಯಲ್ಲಿ ಒಂದೂವರೆ ಲಕ್ಷ ನಗದು, 10 ಗ್ರಾಂ ಚಿನ್ನ ಕಳವಾಗಿದೆ. ತೆರಕಣಾಂಬಿ ಪೊಲೀಸರು ಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಆನೇಕಲ್: ಸೂಟ್​ಕೇಸ್​ನಲ್ಲಿ ಯುವತಿ ಶವ ಪತ್ತೆ, ಬೆಚ್ಚಿಬಿದ್ದ ಜನರು

ಇದನ್ನೂ ಓದಿ: ಆನೇಕಲ್: ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಕುಖ್ಯಾತ ರೌಡಿಶೀಟರ್ ಗಾಂಜಾ ಮನೋಜ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.