ETV Bharat / state

ಹುಬ್ಬಳ್ಳಿಯಲ್ಲಿ ಬಾಲಕಿಯ ಅಪಹರಿಸಿ ಕೊಲೆ: ಆರೋಪಿಯ ಎನ್​​ಕೌಂಟರ್ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ಹೀಗಿದೆ - HUBBALLI GIRL MURDER CASE

ಐದು ವರ್ಷದ ಬಾಲಕಿಯನ್ನು ಅಪಹರಿಸಿ ಬಳಿಕ ಕೊಲೆ ಮಾಡಿದ್ದ ಆರೋಪಿಯ ಎನ್​ಕೌಂಟರ್ ಆಗಿದೆ. ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿ ತಿರುಗಿಬಿದ್ದಾಗ ಈ ಘಟನೆ ನಡೆದಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ ₹10 ಲಕ್ಷ ಘೋಷಿಸಿದೆ.

hubballi-girl-murder-case-police-commissioner-n-shashikumar-reaction-on-encounter-government-announces-an-ex-gratia-for-victim-family-s
ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ (ETV Bharat)
author img

By ETV Bharat Karnataka Team

Published : April 13, 2025 at 11:00 PM IST

Updated : April 13, 2025 at 11:07 PM IST

2 Min Read

ಹುಬ್ಬಳ್ಳಿ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಾಗ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ತಾರಿಹಾಳದ ಕೇಳಸೇತುವೆ ಬಳಿ ಭಾನುವಾರ (ಏಪ್ರಿಲ್​ 13) ನಡೆದಿದೆ. ಬಿಹಾರ ರಾಜ್ಯದ ಪಾಟ್ನಾದ ರಿತೇಶಕುಮಾರ (35) ಪೊಲೀಸರ ಎನ್​​​ಕೌಂಟರ್​ನಲ್ಲಿ ಸಾವನ್ನಪ್ಪಿದ ಆರೋಪಿ.

ಈ ಕುರಿತಂತೆ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ''ಆರೋಪಿ ವಶಕ್ಕೆ ಪಡೆದು ಆತನು ವಾಸಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಮಹಿಳಾ ಪಿಎಸ್​​​ಐ ಅನ್ನಪೂರ್ಣ ಅವರು ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೂ ಸಹ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ನಂತರ ಗುಂಡು ಹಾರಿಸಿದಾಗ ಆತನ ಬೆನ್ನಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಚಿಕಿತ್ಸೆಗೆಂದು ಕೆಎಂಸಿಆರ್​​​ಐ ಆಸ್ಪತ್ರೆಗೆ ಕರೆತಂದಿದ್ದಾಗ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ'' ಎಂದು ಮಾಹಿತಿ ನೀಡಿದರು.

ಪಾಟ್ನಾದ ನಿವಾಸಿಯಾದ ಆರೋಪಿ ರಿತೀಶಕುಮಾರ ಭಾನುವಾರ ಬೆಳಗ್ಗೆ 11.40ರ ಸುಮಾರು ಬಾಲಕಿ ಇದ್ದ ಸ್ಥಳದಲ್ಲಿ ಹೋಗಿ ತಿಂಡಿ ತಿನಿಸು ನೀಡುವುದಾಗಿ ಪುಸಲಾಯಿಸಿ ಕರೆದಿದ್ದಾನೆ. ನಂತರ ಅವಳನ್ನು ಎತ್ತಿಹಾಕಿಕೊಂಡು ಎದುರಿನ ಮೆನೆಯಲ್ಲಿರುವ ಶೆಡ್​​​ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಹಿಡಿದು ಅಶೋಕನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ (ETV Bharat)

ಬಾಲಕಿ ಕೊಲೆ ಖಂಡಿಸಿ ಪ್ರತಿಭಟನೆ: ಬಾಲಕಿ ಕೊಲೆ ಮಾಡಿರುವ ಆರೋಪಿಯನ್ನು ತಮ್ಮ ವಶಕ್ಕೆ ನೀಡಿ ಹಾಗೂ ಗುಂಡು ಹಾರಿಸಿ ಹತ್ಯೆ ಮಾಡಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ‌ ಅಶೋಕ‌ ನಗರದ ಪೊಲೀಸ್ ಠಾಣೆ ಎದುರು ಸೇರಿದಂತೆ ವಿವಿಧೆಡೆ ತೀವ್ರ ಪ್ರತಿಭಟನೆ ನಡೆಸಿದರು.

ನಗರದ ರಾಣಿ ಚೆನ್ನಮ್ಮ ವೃತ್ತ, ಕೆಎಂಸಿಆರ್​​​ಐ ಶವಾಗಾರ, ಕೆಎಂಸಿಆರ್​​ಐ ಮುಖ್ಯ ದ್ವಾರ ಬಳಿ ಹು-ಧಾ ಮುಖ್ಯ ರಸ್ತೆ ಬಂದ್ ಮಾಡಿ, ಟೈಯರ್​​​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಆಯುಕ್ತರಿಗೆ ಜಯಘೋಷ: ಬಾಲಕಿ ಕೊಲೆ ಆರೋಪಿ ಪೊಲೀಸರ ಎನ್​​​ಕೌಂಟರ್​​​ನಿಂದ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕೆಎಂಸಿಆರ್​​ಐ ಆಸ್ಪತ್ರೆ ಎದುರು ಸೇರಿದ್ದ ಜನಸ್ತೋಮ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ಪರವಾಗಿ ಜಯಘೋಷ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಕೆಎಂಸಿಆರ್​​ಐ ಆಸ್ಪತ್ರೆಗೆ ವಿಧಾನಪರಿಷತ್ ಮುಖ್ಯ ಸಂಚೇತಕ ಸಲೀಂ ಅಹ್ಮದ್​, ಶಾಸಕ ಪ್ರಸಾದ್​ ಪ್ರಸಾದ ಅಬ್ಬಯ್ಯ ಹಾಗೂ ಇತರ ಮುಖಂಡರು ಭೇಟಿ ನೀಡಿ, ಆಯುಕ್ತರನ್ನು ಭೇಟಿ ಮಾಡಿ ವಿಚಾರಿಸಿದರು.

ಪರಿಹಾರ ಘೋಷಣೆ ಬಗ್ಗೆ ಸಲೀಂ ಅಹ್ಮದ್​ ಮಾಹಿತಿ (ETV Bharat)

ಸರ್ಕಾರದಿಂದ 10 ಲಕ್ಷ ಪರಿಹಾರ ಘೋಷಣೆ: ಮೃತ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ ಎಂದು ವಿಧಾನ‌ಪರಿಷತ್ ಮುಖ್ಯ ಸಚೇತಕ ಸಲೀಂ‌ ಅಹ್ಮದ್ ಹೇಳಿದರು.

ಸಿಎಂ ನಿರ್ದೇಶನದ‌ ಮೇರೆಗೆ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಘೋಷಣೆ ಮಾಡಲು ಸಿಎಂ ಅವರು ಹೇಳಿದ್ದಾರೆ.

ಜೊತೆಗೆ ಸ್ಲಂ ಬೋರ್ಡ್​​​ನಿಂದ ಬಾಲಕಿಯ ಕುಟುಂಬಕ್ಕೆ ಒಂದು ಮನೆ ಹಸ್ತಾಂತರಕ್ಕೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸ್ಲಂ‌ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಘೋಷಣೆ ಮಾಡಿದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಅಪಹರಿಸಿ, ಕೊಲೆ: ಪೊಲೀಸ್‌ ಗುಂಡೇಟಿಗೆ ಆರೋಪಿ ಸಾವು

Last Updated : April 13, 2025 at 11:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.