ETV Bharat / state

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯಿಂದ ರಾಜ್ಯ ಸರ್ಕಾರ ಸಂಗ್ರಹಿಸುತ್ತಿರುವ ಆದಾಯ ಎಷ್ಟು? - REVENUE FROM PETROL AND DIESEL

ಪಂಚ ಗ್ಯಾರಂಟಿ ಹೊರೆಯಲ್ಲಿರುವ ರಾಜ್ಯ ಸರ್ಕಾರಕ್ಕೆ ಪೆಟ್ರೋಲ್​ ಹಾಗೂ ಡೀಸೆಲ್​ ಮೇಲಿನ ಮಾರಾಟ ತೆರಿಗೆಯಿಂದ ಲಾಭವಿದೆಯಾ? ತೈಲದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತಿದೆ ಎಂಬುದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

INFORMATION ON REVENUE GENERATED BY THE STATE GOVERNMENT FROM PETROL AND DIESEL
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯಿಂದ ರಾಜ್ಯ ಸರ್ಕಾರ ಸಂಗ್ರಹಿಸುತ್ತಿರುವ ಆದಾಯ ಏನು? (ETV Bharat)
author img

By ETV Bharat Karnataka Team

Published : April 3, 2025 at 8:01 AM IST

3 Min Read

ಬೆಂಗಳೂರು: ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.‌ ಪಂಚ ಗ್ಯಾರಂಟಿ ಹೊರೆಯಲ್ಲಿರುವ ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸಲು ಪೆಟ್ರೋಲ್​ ಹಾಗೂ ಡೀಸೆಲ್​ ಮೇಲಿನ ಮಾರಾಟ ತೆರಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಅಷ್ಟಕ್ಕೂ ತೈಲ ಬೆಲೆ ಮೇಲಿನ‌ ಮಾರಾಟ ತೆರಿಗೆ ಮೂಲಕ ರಾಜ್ಯ ಎಷ್ಟು ಆದಾಯ ಸಂಗ್ರಹ ಮಾಡುತ್ತಿದೆ ಎಂಬ ಸಮಗ್ರ ವರದಿ ಇಲ್ಲಿದೆ.‌

ರಾಜ್ಯ ಸರ್ಕಾರ ಡೀಸೆಲ್ ಬೆಲೆ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.‌ ಡೀಸೆಲ್ ಬೆಲೆ ಮೇಲಿನ ಮಾರಾಟ ತೆರಿಗೆಯನ್ನು 18.44% ದಿಂದ 21.17% ಗೆ ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ 2 ರೂ. ಏರಿಕೆ ಮಾಡಿದೆ. ಅದರಂತೆ ರಾಜ್ಯದಲ್ಲಿ ಡೀಸೆಲ್​ ದರ 91.02 ರೂ. ಆಗಲಿದೆ. ಡೀಸೆಲ್​ ಬೆಲೆ ಮೇಲಿನ ಮಾರಾಟ ತೆರಿಗೆ ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಆದಾಯ ಹೆಚ್ಚಿಸಲು ಮುಂದಾಗಿದೆ. ಪಂಚ ಗ್ಯಾರಂಟಿ ಹೊರೆ ಮಧ್ಯೆ ಸಂಪನ್ಮೂಲ ಕ್ರೋಢೀಕರಣದ ಕಸರತ್ತು ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮಾರಾಟ ತೆರಿಗೆ ದೊಡ್ಡ ಕೊಡುಗೆ ನೀಡುತ್ತಿದೆ.

ರಾಜ್ಯದ ಸ್ವಂತ ತೆರಿಗೆ ರಾಜಸ್ವದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆ ಆದಾಯದ ಪಾಲು 12-13% ಇದೆ. ಹೀಗಾಗಿ ರಾಜ್ಯದ ಬೊಕ್ಕಸದಲ್ಲಿ ಮಾರಾಟ ತೆರಿಗೆಯ ಪಾಲು ದೊಡ್ಡದಿದೆ. ಆದ್ದರಿಂದ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ಆ ಮೂಲಕ ಡೀಸೆಲ್ ಬೆಲೆಯನ್ನು 2 ರೂ.ಗೆ ಏರಿಕೆ ಮಾಡಿದೆ. ಈ ಮೂಲಕ ವಾರ್ಷಿಕ 1,800-2,000 ಕೋಟಿ ರೂ.‌ ಹೆಚ್ಚುವರಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

7 ವರ್ಷದಲ್ಲಿ ಮಾರಾಟ ತೆರಿಗೆ ಹೆಚ್ಚಳ ಕಡಿತ ಏನು? 2018 ಜುಲೈನಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 30%ರಿಂದ 32%ಗೆ ಏರಿಕೆ ಮಾಡಿತ್ತು. ಡೀಸೆಲ್ ಮೇಲಿನ‌ ಮಾರಾಟ ಟ್ಯಾಕ್ಸ್​ಅನ್ನು 19% ರಿಂದ 21%ಗೆ ಏರಿಸಿತ್ತು. ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆ 28.75%ಗೆ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 17.73%ಗೆ ಇಳಿಕೆ ಮಾಡಲಾಗಿತ್ತು.

2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿ‌ನ ಮಾರಾಟ ತೆರಿಗೆಯನ್ನು ಮತ್ತೆ ಹೆಚ್ಚಳ ಮಾಡಿತ್ತು. ಅಂದು ಮಾರಾಟ ತೆರಿಗೆಯನ್ನು 28.75% ರಿಂದ 32%ಗೆ ಏರಿಕೆ ಮಾಡಿದ್ದರೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 17.73% ದಿಂದ 21%ಗೆ ಏರಿಕೆ ಮಾಡಿತ್ತು. 2020-2021ರಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 32% ದಿಂದ 35%ಗೆ ಏರಿಸಿದ್ದರೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 21%ರಿಂದ 24%ಗೆ ಏರಿಕೆ ಮಾಡಲಾಗಿತ್ತು.

2021ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 25.92%ಗೆ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 14.34%ಗೆ ಇಳಿಕೆ ಮಾಡಿತ್ತು. ಬಳಿಕ 2024ರ ಜೂನ್ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 29.84%ಗೆ ಏರಿಕೆ ಮಾಡಿದ್ದರೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44%ಗೆ ಏರಿಕೆ ಮಾಡಿತ್ತು.

ಆರು ವರ್ಷಗಳಲ್ಲಿ ಮಾರಾಟ ತೆರಿಗೆ ಸಂಗ್ರಹ ಏನಿದೆ? ವಾಣಿಜ್ಯ ಇಲಾಖೆ ನೀಡಿದ ಅಂಕಿಅಂಶದಂತೆ 2019-20ರಲ್ಲಿ ತೈಲ ಮೇಲಿನ ಮಾರಾಟ ತೆರಿಗೆ ಮೂಲಕ ರಾಜ್ಯ ಸರ್ಕಾರ 15,981 ಕೋಟಿ ರೂ. ಆದಾಯ ಸಂಗ್ರಹ ಮಾಡಿತ್ತು. 2020-21 ಸಾಲಿನಲ್ಲಿ ಮಾರಾಟ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರ 15,860 ಕೋಟಿ ರೂ. ಆದಾಯ ಸಂಗ್ರಹ ಮಾಡಿತ್ತು.

2021-22 ಸಾಲಿನಲ್ಲಿ ಮಾರಾಟ ತೆರಿಗೆ ಸಂಗ್ರಹ ಮೂಲಕ ರಾಜ್ಯ ಸರ್ಕಾರ 19,042 ಕೋಟಿ ರೂ. ಸಂಗ್ರಹ ಮಾಡಿತ್ತು. 2022-23 ಸಾಲಿನಲ್ಲಿ ಮಾರಾಟ ತೆರಿಗೆ ಸಂಗ್ರಹ ಮೂಲಕ 19,092 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. 2023-24 ಸಾಲಿನಲ್ಲಿ ಮಾರಾಟ ತೆರಿಗೆ ಸಂಗ್ರಹದ ಮೂಲಕ 20,578 ಕೋಟಿ ರೂ. ಆದಾಯ ಸಂಗ್ರಹ ಮಾಡಿತ್ತು. 2024-25 ಸಾಲಿನಲ್ಲಿ ಮಾರಾಟ ತೆರಿಗೆ ಸಂಗ್ರಹ ಮೂಲಕ ಸುಮಾರು 23,800 ಕೋಟಿ ರೂ. ಆದಾಯ ಸಂಗ್ರಹ ಮಾಡಿತ್ತು.

ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಮುಂದುವರೆದ ಬಿಜೆಪಿ ಅಹೋರಾತ್ರಿ ಧರಣಿ: ಬಿಎಸ್​ವೈ ಸೇರಿ ಹಿರಿಯ ನಾಯಕರು ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.