ಮಂಗಳೂರು: ಉಳ್ಳಾಲದ ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಇಂದು ಹುಸಿ ಬಾಂಬ್ ಕರೆ ಬಂದಿದ್ದು, ಕೆಲ ಹೊತ್ತು ಆತಂಕ ನಿರ್ಮಾಣವಾಯಿತು.
ಬುಧವಾರ ಬೆಳಗ್ಗೆ 8.15ರ ಸಮಯಕ್ಕೆ ಆಸ್ಪತ್ರೆಯ ಪ್ರಸವ ಕೊಠಡಿ(ಲೆಬರ್ ಥಿಯೇಟರ್)ಯ ಫೋನ್‌ಗೆ ದೂರವಾಣಿ ಕರೆಯೊಂದು ಬಂದಿತ್ತು. ಫೋನ್ ಮಾಡಿದವರು ಬೆಳಿಗ್ಗೆ 11 ಗಂಟೆಗೆ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ. ಎಲ್ಲರನ್ನೂ ಆಸ್ಪತ್ರೆಯಿಂದ ಹೊರಕಳುಹಿಸಿ ಎಂದು ಬೆದರಿಕೆ ಹಾಕಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಸಂಪೂರ್ಣ ಆಸ್ಪತ್ರೆ ಹಾಗೂ ಕಾಲೇಜನ್ನು ಪರಿಶೀಲನೆ ನಡೆಸಿದೆ. ಆ ಬಳಿಕ ಇದೊಂದು ಹುಸಿ ಬಾಂಬು ಕರೆ ಎಂಬುದು ಖಾತ್ರಿಯಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ನಂಬರ್ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ, ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ - BOMB THREAT