ETV Bharat / state

ಕೊಪ್ಪಳದಲ್ಲಿ ಬಿರುಗಾಳಿ ಸಹಿತ ಮಳೆ: ಸಿಡಿಲು ಬಡಿದು ಇಬ್ಬರು ಸಾವು - TWO KILLED IN LIGHTNING STRIKE

ಮುದ್ದಾಬಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ರೈತನ ಒಂದು ಎತ್ತು ಹಾಗೂ ಒಂದು ಹಸು ಬಲಿಯಾಗಿದೆ.

heavy-rains-in-koppal-two-killed-in-lightning-strike
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : April 11, 2025 at 9:46 AM IST

Updated : April 11, 2025 at 1:35 PM IST

1 Min Read

ಕೊಪ್ಪಳ: ತಾಲೂಕಿನ ಹಲವೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಚುಕ್ಕನಕಲ್ ಬಳಿ ತೋಟದ ಮನೆಯಲ್ಲಿ ಜರುಗಿದೆ.

ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ (62) ಸಾವನ್ನಪ್ಪಿದ ದುರ್ದೈವಿಗಳು. ಮಳೆ ಬರುವ ಸಂದರ್ಭದಲ್ಲಿ ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಪ್ಪಳದಲ್ಲಿ ಬಿರುಗಾಳಿ ಸಹಿತ ಮಳೆ (ETV Bharat)

ಮುದ್ದಾಬಳ್ಳಿಯಲ್ಲಿ ಸಿಡಿಲಿಗೆ ಎತ್ತು, ಹಸು ಬಲಿ- ಬೆಳೆ ಹಾನಿ: ಮುದ್ದಾಬಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ರೈತನ ಒಂದು ಎತ್ತು ಹಾಗೂ ಒಂದು ಹಸು ಬಲಿಯಾಗಿದೆ. ರೈತ ಕಣ್ಣೀರಿಡುವಂತಾಗಿದೆ.

ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಹನುಮಪ್ಪ ಹಳೆಮನಿ ಎಂಬ ರೈತನಿಗೆ ಸೇರಿದ ಜಾನುವಾರುಗಳು ಇವಾಗಿವೆ. ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿ ಮಧ್ಯಾಹ್ನ ತಮ್ಮ ಜಮೀನಿನ ಮನೆಯ ಮುಂದಿನ ಗಿಡದ ಕೆಳಗೆ ಎತ್ತು ಹಾಗೂ ಹಸುವನ್ನು ಕಟ್ಟಿ ಹಾಕಿದ್ದರು. ಎತ್ತುಗಳನ್ನೇ ನಂಬಿ ಕೃಷಿ ಜೀವನ ನಡೆಸುತ್ತಿದ್ದ ಹನುಮಪ್ಪ ಹಳೆಮನಿ ಅವರು ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಇಂದಿನ ದಿನಮಾನದಲ್ಲಿ ಎತ್ತು ಹಾಗೂ ಹಸು ದುಬಾರಿ ಬೆಲೆಯ ಜಾನುವಾರುಗಳಾಗಿದ್ದು, ಸರ್ಕಾರ ಸಿಡಿಲಿಗೆ ಬಲಿಯಾದ ಎತ್ತು ಹಾಗೂ ಹಸುವಿಗೆ ಪರಿಹಾರ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ. ಇದಕ್ಕೆ ಕೊಪ್ಪಳ ತಹಶೀಲ್ದಾರ್​ ವಿಠ್ಠಲ ಚೌಗಲಾ ಸ್ಪಂದಿಸಿದ್ದು, ಪಂಚನಾಮೆ ವರದಿ ಪಡೆಯುವುದಾಗಿ ತಿಳಿಸಿದ್ದಾರೆ.

ಎರಡು ಎಕರೆ ಬಾಳೆ ಬೆಳೆ ಹಾನಿ: ತಾಲೂಕಿನ ಮೆಳ್ಳಿಕೇರಿಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಗಂಗಮ್ಮ ಎಂಬ ರೈತ ಮಹಿಳೆ ಬೆಳೆದಿದ್ದ ಎರಡು ಏಕರೆ ಬಾಳೆ ಗಿಡಗಳು ನೆಲಕಚ್ಚಿವೆ. ಸಾಲ ಮಾಡಿ ಬಾಳೆ ಬೆಳೆದಿದ್ದ ಗಂಗಮ್ಮನಿಗೆ ಅಕಾಲಿಕ ಮಳೆಯಿಂದ ಬರಸಿಡಿಲು ಬಡಿದಂತಾಗಿದೆ.

ತೆಂಗಿನ ಮರಕ್ಕೆ ಬೆಂಕಿ: ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು, ಬೆಂಕಿ ಹೊತ್ತಿಕೊಂಡು ಉರಿಯಿತು.

ಇದನ್ನೂ ಓದಿ: ವಿಜಯನಗರ: ಸಿಡಿಲು ಬಡಿದು ಮನೆ ಮುಂದೆ ನಿಂತಿದ್ದ ಬಾಲಕ ಸಾವು

Last Updated : April 11, 2025 at 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.