ಹಾವೇರಿ : ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಧಾರಾಕಾರ ಮಳೆಯಾಗಿದೆ. ಬಿರುಗಾಳಿ, ಗುಡುಗು, ಸಿಡಿಲು ಸಮೇತ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಭಾರಿ ಗಾಳಿಗೆ ಗಿಡಮರಗಳ ಟೊಂಗೆಗಳು ಮುರಿದುಬಿದ್ದಿವೆ.
ಸುಮಾರು ಅರ್ಧ ಗಂಟೆಯಿಂದ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ಮಳೆನೀರು ನುಗ್ಗಿದೆ. ರಸ್ತೆಗಳಲ್ಲಿ ಹೂಳು ತುಂಬಿದ ಕಾರಣ ಮಳೆನೀರು ರಸ್ತೆ ಮೇಲೆ ಹರಿದಿದೆ. ಇದರಿಂದಾಗಿ ಪಾದಚಾರಿಗಳು ಪರದಾಡಿದ್ದಾರೆ.
ರೈಲ್ವೆ ಕೆಳಸೇತುವೆ ಗೂಗಿಕಟ್ಟೆಗಳು ಹಳ್ಳಕೊಳ್ಳದಂತಾಗಿದ್ದವು. ಮಳೆರಾಯನ ಆರ್ಭಟ ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಜನರಿಗೆ ಮುದ ನೀಡಿದೆ. ಹಿಂಗಾರು ಫಸಲಿನ ನಿರೀಕ್ಷೆಯಲ್ಲಿರುವ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾವೇರಿ ತಾಲೂಕಿನ ಕಳ್ಳಿಹಾಳದಲ್ಲಿ ಮನೆಯ ಮೇಲಿನ ತಗಡುಗಳು ಹಾರಿಹೋಗಿವೆ. ವಿದ್ಯುತ್ ತಂತಿಗಳ ಮೇಲೆ ತಗಡುಗಳು ಬಿದ್ದಿವೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಭಾರಿ ಮಳೆ: ಮರ ಬಿದ್ದು ಕಾರು ಜಖಂ, ಧರೆಗುರುಳಿದ ವಿದ್ಯುತ್ ಕಂಬಗಳು - RAIN IN SHIVAMOGGA