ಬೆಂಗಳೂರು: ಗ್ಯಾಸ್ ಸಿಲಿಂಡರ್ಗೆ ಆಕಸ್ಮಿಕವಾಗಿ ಹತ್ತಿದ ಬೆಂಕಿಯಿಂದ ಒಂದು ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ಕಳೆದ ರಾತ್ರಿ ವಿವೇಕ ನಗರ ಠಾಣಾ ವ್ಯಾಪ್ತಿಯ ಈಜಿಪುರದಲ್ಲಿ ನಡೆಯಿತು.
ರಸ್ತೆ ಪಕ್ಕದಲ್ಲಿದ್ದ ಕಬಾಬ್ ಅಂಗಡಿ ಮಾಲೀಕ ಸಿಲಿಂಡರ್ ಬದಲಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವೇಳೆ ಗಾಬರಿಗೊಂಡು ಸಿಲಿಂಡರ್ ಅನ್ನು ಪಕ್ಕಕ್ಕೆ ತಳ್ಳಿದ್ದಾರೆ. ಇದರ ಪರಿಣಾಮ ಅಲ್ಲಿಯೇ ನಿಂತಿದ್ದ ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಬೆಂಕಿ ತಗುಲಿತು. ನೋಡುನೋಡುತ್ತಿದ್ದಂತೆ ವಾಹನಗಳೆರಡೂ ಸುಟ್ಟು ಕರಕಲಾದವು.
ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಹಳೆಯ ಮನೆ ಕೆಡವುತ್ತಿದ್ದಾಗ ದುರಂತ: ಮಂಗಳೂರಲ್ಲಿ ಲಿಂಟಲ್ ಸಹಿತ ಗೋಡೆ ಕುಸಿದು ಇಬ್ಬರು ಸಾವು - Old House Wall Collapse