ಬೀದರ್ : ಔರಾದ್ ತಾಲೂಕಿನ ವಿಜಯನಗರ ತಾಂಡಾದ ಸರ್ವೇ ನಂಬರ್ 74 ರ ಹೊಲದ ತೊಗರಿಯ ಹೊಟ್ಟಿನಲ್ಲಿ ಮುಚ್ಚಿಡಲಾದ ಗಾಂಜಾವನ್ನು ಬೀದರ್ ಶ್ವಾನ ದಳದ ಕ್ರಿಯಾಶೀಲ ದೀಪ ಶ್ವಾನದ ನೆರವು ಪಡೆದು, ₹ 7.60 ಲಕ್ಷ ಮೌಲ್ಯದ 7 ಕೆಜಿ 500 ಗ್ರಾಂ ಗಾಂಜಾ ಹಾಗೂ ಆರೋಪಿಯನ್ನು ಬಂಧಿಸುವಲ್ಲಿ ಸಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ವಿಜಯನಗರದ ಅಂಬಾಜಿ ಕೊಂಡಿಬಾ ಚವ್ಹಾಣ್ (60) ಎಂದು ಗುರುತಿಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಶನಿವಾರ ಮಧ್ಯಾಹ್ನ 3:30ಕ್ಕೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ತನ್ನ ಹೊಲದಲ್ಲಿ ಪುಟ್ಟ ಗುಡಿಸಲಿನಲ್ಲಿ ಇದ್ದುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಹೆಚ್ಚಿನ ತಪಾಸಣೆಗಾಗಿ ಬೀದರ್ನ ದೀಪ ಎನ್ನುವ ಶ್ವಾನವನ್ನು ಕರೆಸಿ, ತಪಾಸಣೆ ಮಾಡಿದಾಗ ತೊಗರಿ ಹೊಟ್ಟಿನಲ್ಲಿ ಗಾಂಜಾ ಮುಚ್ಚಿಟ್ಟಿರುವುದು ಸಾಬೀತಾಗಿದೆ. ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಪಿಎಸ್ಐ ನಂದ ಕುಮಾರ್ ಮೂಳೆ, ಅಶೋಕ, ಸುನಿಲಕುಮಾರ್ ಕೋರೆ, ಏಕನಾತ್, ಕೊಟ್ರೇಶ್, ರಾಮರೆಡ್ಡಿ, ಸುಭಾಷ್, ಸಿದ್ದಣ್ಣ ಇದ್ದರು.
ಇದನ್ನೂ ಓದಿ : ಅಕ್ರಮ ಗಾಂಜಾ ಸಾಗಾಟ: 14 ಲಕ್ಷ ರೂ. ಮೌಲ್ಯದ ಗಾಂಜಾ ಸಹಿತ ಆರೋಪಿ ಬಂಧನ - ILLEGAL GANJA TRAFFICKING