ETV Bharat / state

ಬೆಂಗಳೂರು: ಆನ್​ಲೈನ್​ನಲ್ಲಿ ಸೀರೆ ಬುಕ್​ ಮಾಡಿದ ಮಹಿಳಾ ಐಎಎಸ್ ಅಧಿಕಾರಿಗೆ ವಂಚನೆ, ಪ್ರಕರಣ ದಾಖಲು - ONLINE SAREE FRAUD CASE

ಆನ್​​ಲೈನ್​ನಲ್ಲಿ ಸೀರೆ ಬುಕ್​ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಗೆ ವಂಚನೆ ಮಾಡಿರುವ ಬಗ್ಗೆ ಸಿಇಎನ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

female-ias-officer-cheated-of-saree-and-case-registered-in-bengaluru
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : April 23, 2025 at 10:04 AM IST

1 Min Read

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೋಡಿ ವಸ್ತುಗಳನ್ನು ಕೊಂಡುಕೊಳ್ಳುವ ಮುನ್ನ ಎಚ್ಚರ! ಯುಟ್ಯೂಬ್ ಚಾನಲ್​​ವೊಂದರಲ್ಲಿ ಬಂದ ಜಾಹೀರಾತು ನೋಡಿ ಆನ್​​ಲೈನ್​ನಲ್ಲಿ ಸೀರೆ ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೊಳಗಾಗಿದ್ದಾರೆ.

ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ವಂಚನೆಗೊಳಗಾಗಿರುವ ಅಧಿಕಾರಿ. ಇವರು ನೀಡಿದ ದೂರಿನ ನೀಡಿದ ಮೇರೆಗೆ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸೀರೆ ಕಳಿಸದೇ ವಂಚನೆ: ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಮಾರಾಟದ ಬಗ್ಗೆ ನಗರದ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವಿಡಿಯೋವನ್ನು ಪಲ್ಲವಿ ನೋಡಿದ್ದರು. ಬಳಿಕ ಸೀರೆ ಆಯ್ಕೆ ಮಾಡಿ, ಅದರ ಸ್ಕ್ರೀನ್ ಶಾಟ್ ಜೊತೆಗೆ ಆನ್​ಲೈನ್ ಮೂಲಕ ಮಾರ್ಚ್​​ 10ರಂದು ಗೂಗಲ್ ಪೇ ಮೂಲಕ 850 ರೂಪಾಯಿ ಪಾವತಿಸಿದ್ದರು. ಆದರೆ ಹಲವು ದಿನಗಳು ಕಳೆದರೂ ಮಾರಾಟಗಾರರು ಸೀರೆ ಮನೆ ವಿಳಾಸಕ್ಕೆ ಕಳುಹಿಸಲಿರಲಿಲ್ಲ. ಅಲ್ಲದೆ, ಹಣವನ್ನು ರಿಫಂಡ್ ಮಾಡಿರಲಿಲ್ಲ. ಕರೆ ಹಾಗೂ ಮೇಸೆಜ್ ಮಾಡಿದರೂ ಸ್ಪಂದಿಸದೆ ತನಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ಧಾರೆ.

ವಿಡಿಯೋದಲ್ಲಿ ಬಂದ ಜಾಹೀರಾತಿನಿಂದ ತನಗೆ ಮಾತ್ರವಲ್ಲದೆ, ಹಲವರಿಗೂ ಮೋಸ ಮಾಡಿರುವ ಶಂಕೆಯಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ಆಗ್ರಹಿಸಿದ್ಧಾರೆ.

ಇದನ್ನೂ ಓದಿ: ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿ ಉಗ್ರರ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡ ಶಿವಮೊಗ್ಗ ಉದ್ಯಮಿ! ಕೊನೆಯ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.