ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಮಾವ ಅಳಿಯನನ್ನು ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಸೊರಬ ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ನಡೆದಿದೆ. ರವೀಂದ್ರ (26) ಕೊಲೆಯಾದ ಅಳಿಯ. ಉಮೇಶ್ (46) ಕೊಲೆ ಮಾಡಿದ ಮಾವ.
ಇಬ್ಬರು ಆನವಟ್ಟಿ ಪಟ್ಟಣದವರೇ ಆಗಿದ್ದು, ಗುರುವಾರ ಸಂಜೆ ಆನವಟ್ಟಿಯ ಮದ್ಯದಂಗಡಿಯಲ್ಲಿ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ನಂತರ ಸಮೀಪದ ಹೋಟೆಲ್ನಲ್ಲಿ ಊಟಕ್ಕೆ ಹೋದಾಗ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಉಮೇಶ್ ಹೋಟೆಲ್ನಲ್ಲಿದ್ದ ಕತ್ತರಿಯಿಂದ ಅಳಿಯ ರವೀಂದ್ರನ ಎದೆಗೆ ಚುಚ್ಚಿ, ಪರಾರಿಯಾಗಿದ್ದ.
ತೀವ್ರವಾಗಿ ಗಾಯಗೊಂಡಿದ್ದ ರವೀಂದ್ರನಿಗೆ ಸೊರಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ರವೀಂದ್ರ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಉಮೇಶ್ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಪೊಲೀಸ್ ಠಾಣೆ ಸಮೀಪವೇ ಪತ್ನಿ ಕೊಂದು ಪತಿ ಪರಾರಿ!
ಇದನ್ನೂ ಓದಿ: ಅರಸೀಕೆರೆಯಲ್ಲಿ ಚಿನ್ನಾಭರಣಕ್ಕಾಗಿ ಕೆಲಸ ಕೊಟ್ಟ ಮೇಸ್ತ್ರಿಯ ಕೊಲೆ: ಉಂಗುರ ತೆಗೆಯಲಾಗದೇ ಬೆರಳನ್ನೇ ಕಟ್ ಮಾಡಿಕೊಂಡು ಹೋದ್ರು!