ETV Bharat / state

ಬಹುಕೋಟಿ ಟಿಡಿಆರ್ ಹಗರಣ: 9 ಕಡೆಗಳಲ್ಲಿ ಇ.ಡಿ ಅಧಿಕಾರಿಗಳ ಶೋಧ - ED ATTACK

ಬಹುಕೋಟಿ ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು 9 ಕಡೆಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ (ETV Bharat)
author img

By ETV Bharat Karnataka Team

Published : May 24, 2025 at 10:40 AM IST

1 Min Read

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರ (ಟಿಡಿಆರ್) ಬಹುಕೋಟಿ ಹಗರಣ ಪ್ರಕರಣದಲ್ಲಿ ವಾಲ್‌ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಸೇರಿದಂತೆ 9 ಸ್ಥಳಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.

2009-2015ರವರೆಗಿನ ಅವಧಿಯಲ್ಲಿ ನಗರದ ಹೊರಮಾವು ಮತ್ತು ಟಿ.ಸಿ.ಪಾಳ್ಯವರೆಗಿನ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಜಮೀನು ಮತ್ತು ವಸತಿ ಕಟ್ಟಡಗಳನ್ನ ಬಿಬಿಎಂಪಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅವುಗಳ ಪೈಕಿ ಅನೇಕ ಜಮೀನುಗಳನ್ನ 1989ರಲ್ಲಿಯೇ ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗಿತ್ತು. ಈ ಸಂಗತಿಯನ್ನು ಮರೆಮಾಚಿ, ವಾಲ್‌ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕೆಲ ಮಧ್ಯವರ್ತಿಗಳು ಸೇರಿ ಅಸಲಿ ಜಮೀನಿನ ಮೂಲ ಮಾಲೀಕರಿಂದ ಟಿಡಿಆರ್ ಕೋರಿ ಬಿಬಿಎಂಪಿಗೆ ಅರ್ಜಿ ಹಾಕಿಸಿದ್ದರು.

ಈ ವಿಚಾರ ತಿಳಿದಿದ್ದರೂ ಸಹ ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ಟಿಡಿಆರ್ ಬಿಡುಗಡೆ ಮಾಡುವ ಮೂಲಕ‌ ಬಿಬಿಎಂಪಿ ಅಧಿಕಾರಿಗಳೇ ಹಗರಣದಲ್ಲಿ ಶಾಮೀಲಾಗಿದ್ದರು. ಆ ಮೂಲಕ ಬಿಬಿಎಂಪಿ ಹಾಗೂ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 27.68 ಕೋಟಿ ರೂ ನಷ್ಟವಾಗಿತ್ತು. ಮೂಲ ಮಾಲೀಕರಿಂದ ಟಿಡಿಆರ್‌ನ್ನ ಜಿಪಿಎ ಮಾಡಿಸಿಕೊಂಡಿದ್ದ ವಾಲ್‌ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಕಂಪನಿಯು ಅವುಗಳನ್ನ ಮಧ್ಯವರ್ತಿಗಳ ಮೂಲಕ 12 ಬೇರೆ ಬೇರೆ ಕಂಪನಿಗಳಿಗೆ ಮಾರಾಟ ಮಾಡಿತ್ತು.

ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಸೂಕ್ತ ದಾಖಲಾತಿ ನೀಡುವಂತೆ EDಯಿಂದ ಮುಡಾ ಆಯುಕ್ತರಿಗೆ ಪತ್ರ - MUDA CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.