ಮೈಸೂರು: ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಯೊಬ್ಬರ ಗಾಲ್ಬ್ಲಾಡರ್ನಿಂದ 861 ಕಲ್ಲುಗಳನ್ನು ಹೊರ ತೆಗೆಯಲಾಗಿದೆ. ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಜಾಂಡೀಸ್ನೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ತಪಾಸಣೆಯ ಬಳಿಕ, ಅವರ ಗಾಲ್‍ಬ್ಲಾಡರ್ ಹಾಗೂ ಬೈಲ್ಡಕ್ಟ್ ಎರಡರಲ್ಲಿ ಕೂಡ ಕಲ್ಲುಗಳು ಇರುವುದು ದೃಢಪಟ್ಟಿತು.
ಗ್ಯಾಸ್ಟ್ರೋಎಂಟರೋಲಾಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೋಸ್ಕೋಪಿಕ್ ಸೀನಿಯರ್ ಸರ್ಜನ್ ಡಾ. ಆರ್.ಎಂ. ಡಾ.ಅರವಿಂದ್ ಅವರ ನೇತೃತ್ವದಲ್ಲಿ ಎಂಡೋಸ್ಕೋಪಿಕ್ ರೆಟ್ರೋಗ್ರೇಡ್ಕೊಲೆಂಜಿಯೊಪ್ಯಾಂಕ್ರಿಯಾಟೋಗ್ರಫಿ (ERCP) ವಿಧಾನದಿಂದ ಬೈಲ್ ಡಕ್ಟ್‌ನಲ್ಲಿದ್ದ ಕಲ್ಲುಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ಮರುದಿನ ಲ್ಯಾಪರೋಸ್ಕೋಪಿಕ್ ಗಾಲ್‌ಬ್ಲಾಡರ್ ಶಸ್ತ್ರಚಿಕಿತ್ಸೆ ನಡೆಯಿತು.
ಆಪರೇಷನ್ ಸಮಯದಲ್ಲಿ ತೀವ್ರ ಆಶ್ಚರ್ಯ ಮೂಡಿಸುವಂತ ರೀತಿಯಲ್ಲಿ 861 ಕಲ್ಲುಗಳು ಗಾಲ್ಬ್ಲಾಡರ್ನಿಂದ ತೆಗೆದುಹಾಕಲಾಯಿತು. ಶಸ್ತ್ರಚಿಕಿತ್ಸೆ ಕಿರಿಯ ಆಕ್ರಮಣ ತಂತ್ರದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು. ವೈದ್ಯರ ಶ್ರೇಷ್ಠ ನಿರ್ವಹಣೆಯಿಂದ ರೋಗಿ ಶೀಘ್ರ ಗುಣಮುಖಳಾಗಿ ಮರು ದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಹೀಮೋಫೀಲಿಯಾ ಬಾಧಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ತಾಯಿ ಮಗುವಿನ ಪ್ರಾಣರಕ್ಷಣೆ
ಇದನ್ನೂ ಓದಿ: ಶ್ವಾಸನಾಳದ ಗಡ್ಡೆ: ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಬಾಲಕ ಸೇರಿ ಮೂವರಿಗೆ ಚಿಕಿತ್ಸೆ ಯಶಸ್ವಿ