ETV Bharat / state

ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತ: ರಾತ್ರಿ ಇಡೀ ಕತ್ತಲಲ್ಲಿ ಕಾಲ ಕಳೆದ ರೋಗಿಗಳು!

ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತವಾಗಿ ರೋಗಿಗಳು ಪರದಾಡಿದ ಘಟನೆ ನಡೆದಿದೆ.

ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತ:
ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತ: (ETV Bharat)
author img

By ETV Bharat Karnataka Team

Published : Oct 12, 2024, 3:57 PM IST

ದಾವಣಗೆರೆ: ವಿದ್ಯುತ್ ಕಡಿತದಿಂದಾಗಿ ರೋಗಿಗಳು ತೊಂದರೆ ಅನುಭವಿಸಿದ ಘಟನೆ ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಕರೆಂಟ್​ ಇಲ್ಲದೇ ರೋಗಿಗಳು ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ‌. ರೋಗಿಗಳಿಗೆ ಸಂಬಂಧಿಕರು ಟವೆಲ್​ನಲ್ಲಿ ಗಾಳಿ ಬೀಸುತ್ತಿರುವುದು ಕಂಡುಬಂತು. ಇನ್ನು ವೈದ್ಯಕೀಯ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಔಷಧಿ ಚೀಟಿ ಬರೆದುಕೊಟ್ಟಿದ್ದಾರೆ.

ವಿದ್ಯುತ್​ ಕಡಿತದ ಜೊತೆಗೆ ಜನರೇಟರ್ ಕೈಕೊಟ್ಟ ಹಿನ್ನೆಲೆ ರೋಗಿಗಳು ಪರದಾಡಿದರು. ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಡಿಹೆಚ್ಒ ಡಾ. ಷಣ್ಮುಖಪ್ಪ ಈಟಿವಿ ಭಾರತ ಜೊತೆ ಮಾತನಾಡಿ, "ಶುಕ್ರವಾರ ರಾತ್ರಿ ಕರೆಂಟ್​ ಇಲ್ಲದೇ ಸಮಸ್ಯೆ ಆಗಿತ್ತು. ಜನರೇಟರ್​ ಸೇರಿದಂತೆ ಆಸ್ಪತ್ರೆಯ ಒಂದು ಭಾಗದಲ್ಲಿ ಯುಪಿಎಸ್ ವ್ಯವಸ್ಥೆ ಮಾಡಿದ್ದೇವೆ. ಜನರೇಟರ್ ಏನು ಕೆಟ್ಟಿಲ್ಲ, ಸರಿ ಇದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಊಟ ಮಾಡುತ್ತಿರುವಾಗ ಮಳೆಗೆ ಕುಸಿದ ಮನೆ ಗೋಡೆ: ಮಗು ಸೇರಿದಂತೆ ‌ಐವರು ಪ್ರಾಣಪಾಯದಿಂದ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.