ETV Bharat / state

ಕೋರ್ಟ್ ಆದೇಶ ಪಾಲಿಸಬೇಕಾಗುತ್ತದೆ, ರಾಜಕೀಯ ಮಾಡುತ್ತಿದ್ದಾರೆ ಮಾಡಲಿ: ಶಾಸಕ ವಿನಯ್ ಕುಲಕರ್ಣಿ - COURT ORDERS MUST BE FOLLOWED

ಕೋರ್ಟ್​ ಆದೇಶವನ್ನು ಪಾಲಿಸಲೇಬೇಕು. ಆದರೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ವಿನಯ್​ ಕುಲಕರ್ಣಿ ಬೇಸರ ವ್ಯಕ್ತಪಡಿಸಿದ್ದಾರೆ.

MLA_VinayKulkarni
ರಾಜಕೀಯ ಮಾಡುತ್ತಿದ್ದಾರೆ ಮಾಡಲಿ: ಶಾಸಕ ವಿನಯ್ ಕುಲಕರ್ಣಿ (ETV Bharat)
author img

By ETV Bharat Karnataka Team

Published : June 7, 2025 at 4:39 PM IST

1 Min Read

ಬೆಂಗಳೂರು: ಕೋರ್ಟ್ ಆದೇಶ ಕೊಟ್ಟಿದೆ. ಆ ಬಗ್ಗೆ ನಾನು ಮಾತನಾಡುವುದಿಲ್ಲ. ಕೋರ್ಟ್ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಸದಾಶಿವನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಿದ್ದೇನೆ. ನಿನ್ನೆಯ ಘಟನೆ ವಿಚಾರ ತಿಳಿಸಿದ್ದೇನೆ. ಇದರ ಹಿಂದೆ ಹಲವಾರು ಮಂದಿ ಕೈವಾಡ ಇದೆ. ಇದೇನು ಸಮಸ್ಯೆ ಇಲ್ಲ. ಕೋರ್ಟ್ ನಲ್ಲಿ ಸಾಕ್ಷಿ ಬೇಕು. ಸಾಕ್ಷಿ ಮೇಲೆ ಕೋರ್ಟ್ ತೀರ್ಮಾನ ಮಾಡುತ್ತದೆ ಎಂದರು.

ಮುಂದಿನ ಕಾನೂನು ಹೋರಾಟದ ಬಗ್ಗೆ ಮಾತನಾಡಿದ ಅವರು, ಇನ್ನೂ ಕೆಲ ದಿನ ಕಾಲಾವಕಾಶವಿದೆ. ನೋಡಬೇಕು, ಯಾವ ರೀತಿಯ ಕೈವಾಡ ಇಲ್ಲ. ಒಂದು ಸಿಂಗಲ್ ಕಾಲ್ ಕೂಡ ನಾನು ಯಾರಿಗೂ ಮಾಡಿಲ್ಲ. ಅವರು ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ. ದೇವರು ಒಬ್ಬನಿದ್ದಾನೆ. ವಿನಯ್ ಕುಲಕರ್ಣಿ ಅವರನ್ನ ಮತ್ತೆ ಜೈಲಿಗೆ ಕಳಿಸಬೇಕು. ಸಣ್ಣ ಹುಡುಗರಿಗೂ ಕೇಳಿದರೆ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವರೊಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಭಾಗದ ನಾಯಕರ ಕೈವಾಡ ಇದ್ಯಾ ಎಂಬ ಪ್ರಶ್ನೆಗೆ ಇದ್ದಾರೆ, ತುಂಬಾ ಜನ ಇದ್ದಾರೆ ಎಂದರು. ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿನಯ್ ಕುಲಕರ್ಣಿ, ಸುಪ್ರೀಂಕೋರ್ಟ್ ಜಾಮೀನು ಅರ್ಜಿ ವಜಾ ಕುರಿತು ಚರ್ಚೆ ನಡೆಸಿದ್ದಾರೆ. ಒಂದು ವಾರದೊಳಗೆ ಹಾಜರಾಗಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೇಸ್ ನ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಯೋಗೇಶ್​ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್​ ಕುಲಕರ್ಣಿ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್​; 1ವಾರದೊಳಗೆ ಶರಣಾಗುವಂತೆ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.