ETV Bharat / state

ಕೊಲೆ ಯತ್ನ, ಸಾರ್ವಜನಿಕ ಆಸ್ತಿ ನಾಶ ಪ್ರಕರಣ: ಮಹಾನಗರ ಪಾಲಿಕೆ ಸದಸ್ಯೆ ಸೇರಿ 11 ಮಂದಿಗೆ ಜೈಲು ಶಿಕ್ಷೆ - COURT GAVE SENTENCE TO ACCUSED

ಕೊಲೆ ಯತ್ನ, ಸಾರ್ವಜನಿಕ ಆಸ್ತಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸದಸ್ಯೆ ಸೇರಿ 11 ಮಂದಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

court
ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ETV Bharat)
author img

By ETV Bharat Karnataka Team

Published : April 10, 2025 at 1:16 PM IST

2 Min Read

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕಿ ಹಾಗೂ ಹಾಲಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಸೇರಿದಂತೆ ಒಟ್ಟು 11 ಆರೋಪಿಗಳ ವಿರುದ್ಧ ಕೊಲೆ ಯತ್ನ, ಸಾರ್ವಜನಿಕ ಆಸ್ತಿ ನಾಶಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ 2010ರ ಆಗಸ್ಟ್ 21 ರಂದು ಕೇಶ್ವಾಪುರದ ಗಾಂಧಿವಾಡದ ಶಂಷಾದ್ ಮುನಗೇಟಿ, ರೀನಾ ಲಾಜರಸ ದಮ್ಮು, ರುತ್ ಲಾಜರಸ ದಮ್ಮು, ಸ್ಯಾಮುಲೇಟ್ ಮುನಿಗೇಟಿ, ಪ್ರವೀಣಕುಮಾರ ವೇಲಂ, ಚಂದ್ರಕಲಾ ಮುನಿಗೇಟಿ, ದಿವ್ಯಾಕುಮಾರಿ ಮುನಗೇಟಿ, ದೇವರಾಜ ಮುನಿಗೇಟಿ, ದೇವಕುಮಾರಿ ಕಲ್ಲಕುಂಟ್ಲ, ಜಾಸ್ಮಿನ್ ಮುನಿಗೇಟಿ ಅವರ ಮನೆಗೆ ರಾತ್ರಿ ಏಕಾಏಕಿ ನುಗ್ಗಿ ಮಚ್ಚು, ರಾಡ್, ಬಡಿಗೆಯಿಂದ ಹಲ್ಲೆ ಮಾಡಲಾಗಿತ್ತು.

ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿತ್ತು. ಉದ್ದೇಶಪೂರ್ವಕವಾಗಿ ದೊಂಬಿ ಎಬ್ಬಿಸಲು ಗುಂಪು ಸಾಗುವ ಹಾದಿಯಲ್ಲಿನ ಬೀದಿದೀಪಗಳನ್ನು ಒಡೆದು ಹಾಕಲಾಗಿತ್ತು. ಈ ಘಟನೆ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಅಂದಿನ ಪೊಲೀಸ್ ಇನ್​ಸ್ಪೆಕ್ಟರ್​​ಗಳಾದ ಬಿ.ಟಿ. ಬದ್ನಿ, ಅಬ್ದುಲ್ ರಹಮಾನ್, ಬಿ. ಎನ್. ಅಂಬಿಗೇರ ಸಮಗ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಿದ್ದರು.

ಇದೀಗ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ಅದರಲ್ಲಿ ಸುವರ್ಣ ಕಲ್ಲಕುಂಟ್ಲ, ಲಾಜರಸ್ ಲುಂಜಾಲ, ಸ್ಯಾಮಸಂಗ್ ಲುಂಜಾಲ, ಶಶಿಧರ ರಾಥೋಡ, ಸುಶಾ ಅಲಿಯಾಸ್ ಸುಶೆರಾಜ, ಮೆರಿಯಮ್ಮ ಲುಂಜಾಲ, ನಿರ್ಮಲಾ ಜಂಗಮ, ಯೋಗರಾಜ್ ಪೂಜಾರ, ರಾಜು ಕೊಂಡಯ್ಯ ಆರ್ಯ ಶಿಕ್ಷೆಗೆ ಗುರಿಯಾಗಿದ್ದಾರೆ.

ಇವರಿಗೆಲ್ಲ ಐಪಿಸಿ 307ರ ಅಡಿ 3 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, 326ರಡಿ 2 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, 324ರಡಿ 2 ವರ್ಷ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ, 323ರಡಿ 6 ತಿಂಗಳು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ, 448ರಡಿ 6 ತಿಂಗಳು ಶಿಕ್ಷೆ ಹಾಗೂ 500 ರೂ. ದಂಡ, 506ರಡಿ 2 ವರ್ಷ ಶಿಕ್ಷೆ ಹಾಗೂ ಸಾವಿರ ರೂ. ದಂಡ, 143ರಡಿ 6 ತಿಂಗಳು ಶಿಕ್ಷೆ ಹಾಗೂ ದಂಡ ವಿಧಿಸಿದೆ. ತಂಡ ದಂಡ ತುಂಬಲು ತಪ್ಪಿದ್ದಲ್ಲಿ ಸಾದಾ ಶಿಕ್ಷೆಯನ್ನೂ ಕೋರ್ಟ್ ವಿಧಿಸಿದೆ.

ಇಬ್ಬರು ಅಪರಾಧಿಗಳಾದ ಅಬ್ರಾಹಂ ಲುಂಜಾಲ ಹಾಗೂ ಶ್ರೀಧರ ರಾಥೋಡ್​ ಮೃತಪಟ್ಟಿದ್ದು, ಶಬ್ಬಿರ ಶೇಖ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ದಂಡದ ಮೊತ್ತದ ಪೈಕಿ 50 ಸಾವಿರ ರೂ. ನಗದನ್ನ ಪ್ರಮುಖ ಗಾಯಾಳುಗಳಿಗೆ ಹಾಗೂ ತಲಾ 25 ಸಾವಿರ ರೂ. ಉಳಿದ ಗಾಯಾಳುಗಳಿಗೆ ನೀಡಬೇಕು. ಹೆಚ್ಚಿನ ಪರಿಹಾರಕ್ಕಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿ ನ್ಯಾಯಾಧೀಶ ಬಿ. ಪರಮೇಶ್ವರ ಪ್ರಸನ್ನ ಅವರು ತೀರ್ಪು ಕೊಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಅಭಿಯೋಜಕಿಯಾಗಿದ್ದ ಗಿರಿಜಾ ತಮ್ಮಿನಾಳ ಭಾಗಶಃ ವಾದ ಮಾಡಿದ್ದರು. ಈಗಿನ ಸರ್ಕಾರಿ ಅಭಿಯೋಜಕ ಬಿ. ವಿ. ಪಾಟೀಲ ವಾದ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ : ಮಂಡ್ಯ ವಸತಿ ಶಾಲೆ ವಿಷಾಹಾರ ಸೇವನೆ ಪ್ರಕರಣ: ಮೇಘಾಲಯದ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲು ಸರ್ಕಾರದ ಕ್ರಮ - HIGH COURT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.