ETV Bharat / state

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: ನೈರುತ್ಯ ರೈಲ್ವೆ ವಲಯದ ವಿಶೇಷ ರೈಲುಗಳ ಓಡಾಟ ಮುಂದುವರಿಕೆ - Special Trains for Onam

ಓಣಂ ಹಬ್ಬದ ದಟ್ಟಣೆ ತಪ್ಪಿಸಲು ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಓಡಾಟವನ್ನು ಮುಂದುವರೆಸುವುದಾಗಿ ಪ್ರಕಟಣೆ ಮೂಲಕ ತಿಳಿಸಿದೆ.

author img

By ETV Bharat Karnataka Team

Published : Sep 11, 2024, 9:28 PM IST

Continuation of Special Trains of South Western Railway Zone
ಓಣಂ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ಹೆಚ್ಚುವರಿ ರೈಲು (ETV Bharat)

ಹುಬ್ಬಳ್ಳಿ: ಓಣಂ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ರೈಲು ಸಂಖ್ಯೆ 06101/06102 ಎರ್ನಾಕುಲಂ-ಯಲಹಂಕ-ಎರ್ನಾಕುಲಂ ಗರೀಬ್ ರಥ ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಈಗಿರುವ ನಿಲುಗಡೆಗಳು, ಸಮಯಗಳು ಮತ್ತು ಬೋಗಿ ಸಂಯೋಜನೆಗಳೊಂದಿಗೆ ಮುಂದುವರಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.

1. ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ್ 8 ರಿಂದ 18, 2024 ವರೆಗೆ (ಈ ರೈಲು ಭಾನುವಾರ, ಬುಧವಾರ ಮತ್ತು ಶುಕ್ರವಾರದಂದು ಕಾರ್ಯನಿರ್ವಹಿಸುತ್ತದೆ) ಐದು ಟ್ರಿಪ್‌ಗಳಿಗೆ ವಿಸ್ತರಿಸಲಾಗಿದೆ.

2. ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಸೆಪ್ಟೆಂಬರ್ 9 ರಿಂದ 19, 2024 ವರೆಗೆ (ಸೋಮವಾರ, ಗುರುವಾರ ಮತ್ತು ಶನಿವಾರದಂದು ಕಾರ್ಯನಿರ್ವಹಿಸುತ್ತದೆ) ವಿಸ್ತರಿಸಲಾಗಿದೆ. ಇದು ಕೂಡ ಐದು ಟ್ರಿಪ್ ಇರುತ್ತದೆ.

ವಿಶೇಷ ಸೂಚನೆ: ಸೆಪ್ಟೆಂಬರ್ 11, 2024 ರಿಂದ ಎರ್ನಾಕುಲಂನಿಂದ ಪ್ರಾರಂಭವಾಗುವ ರೈಲಿನಲ್ಲಿ ಹವಾ ನಿಯಂತ್ರಿತ ಬೋಗಿಗಳಲ್ಲಿ ಬೆಡ್ ಶೀಟು (ಲಿನಿನ್) ಗಳ ಸೌಲಭ್ಯ ಕೂಡಾ ಇರುತ್ತದೆ ಎಂದು ರೈಲ್ವೆ ತಿಳಿಸಿದೆ.

ವಿಶೇಷ ರೈಲು ಸೇವೆಗಳ ವಿಸ್ತರಣೆ: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ-ಹೊಸಪೇಟೆ ನಿಲ್ದಾಣಗಳ ನಡುವೆ ಬಳ್ಳಾರಿ ಬೈಪಾಸ್ ಮಾರ್ಗದ ಮೂಲಕ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಅಸ್ತಿತ್ವದಲ್ಲಿರುವ ಸಮಯ, ನಿಲುಗಡೆಗಳು ಮತ್ತು ಕೋಚ್ ಸಂಯೋಜನೆಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ.

1. ರೈಲು ಸಂಖ್ಯೆ 06243 ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ಹಿಂದೆ ಸೆಪ್ಟೆಂಬರ್ 13 2024 ರವರೆಗೆ ಓಡಿಸಲಾಗುತ್ತದೆ ಎಂದು ಸೂಚಿಸಲಾಗಿತ್ತು, ಇದೀಗ ಮುಂದಿನ ಆದೇಶ ಬರುವವರೆಗೆ ಸೆಪ್ಟೆಂಬರ್ 14, 2024 ರಿಂದ ವಿಸ್ತರಿಸಲಾಗುವುದು.
2. ರೈಲು ಸಂಖ್ಯೆ. 06244 ಹೊಸಪೇಟೆ - ಕೆಎಸ್‌ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ಹಿಂದೆ ಸೆಪ್ಟೆಂಬರ್ ಸೆಪ್ಟೆಂಬರ್ 14, 2024 ರವರೆಗೆ ಚಲಿಸುವಂತೆ ಸೂಚಿಸಲಾಗಿತ್ತು, ಇದೀಗ ಮುಂದಿನ ಸಲಹೆ ಬರುವವರೆಗೆ ಸೆಪ್ಟೆಂಬರ್ 15, 2024 ರಿಂದ ವಿಸ್ತರಿಸಲಾಗುವುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.‌ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ರಾಜ್ಯದಲ್ಲಿ ಇಳಿಕೆಯಾಯ್ತು ರಸ್ತೆ ಅಪಘಾತದಲ್ಲಿ ಸಾಯುವವರ ಪ್ರಮಾಣ: ಇಲ್ಲಿದೆ ಅಂಕಿ- ಅಂಶಗಳು - road accidents deaths

ETV Bharat Logo

Copyright © 2024 Ushodaya Enterprises Pvt. Ltd., All Rights Reserved.