ETV Bharat / state

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಬೇಕು : ಹೆಚ್.ಎಂ.ರೇವಣ್ಣ, ಉಮಾಶ್ರೀ ಸೇರಿ ಹಲವು ಕಾಂಗ್ರೆಸ್ ನಾಯಕರ ಆಗ್ರಹ - SOCIO EDUCATIONAL SURVEY REPORT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಗೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ಜೋರಾಗಿವೆ. ವರದಿ ಬಿಡುಗಡೆಗೆ ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್​ ನಾಯಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Congress OBC leaders insist to implement socio educational survey report
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಜಾರಿಗೆ ಕಾಂಗ್ರೆಸ್​ ನಾಯಕರ ಒತ್ತಾಯ (ETV Bharat)
author img

By ETV Bharat Karnataka Team

Published : April 16, 2025 at 5:06 PM IST

4 Min Read

ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ (ಜಾತಿ ಗಣತಿ ಎಂದು ಕರೆಯಲ್ಪಡುವ ) ಸಮೀಕ್ಷೆ ವರದಿಯನ್ನು ಜಾರಿ ಮಾಡಲೇಬೇಕೆಂದು ಹಿಂದುಳಿದ ವರ್ಗದ ಕಾಂಗ್ರೆಸ್ ನಾಯಕರು ಒಕ್ಕೋರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಒಕ್ಕಲಿಗರ ಸಂಘ ಮಂಗಳವಾರ ಮಾಧ್ಯಮಗೋಷ್ಟಿ ಕರೆದು ವರದಿಗೆ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಇಂದು ಹಿಂದುಳಿದ ವರ್ಗದ ಕಾಂಗ್ರೆಸ್ ನಾಯಕರು ವರದಿ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಹೆಚ್.ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಎಂ.ಆರ್. ಸೀತಾರಾಂ, ಉಮಾಶ್ರೀ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮತ್ತಿತರ ನಾಯಕರು ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಯಾವುದೇ ಗೊಂದಲಗಳು ಆಗಬಾರದು, ರಾಜ್ಯದ ಜನರಿಗೆ ಒಳ್ಳೆಯದಾಗಬೇಕು. ಹಾಗಾಗಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಕೂಡಲೇ ಜಾರಿಗೆ ತರಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, 2013ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ 2014ನೇ ಸಾಲಿನಲ್ಲಿ ತೀರ್ಮಾನಿಸಿ ಆದೇಶ ನೀಡಿತ್ತು. ಇದು ಸರ್ವ ಜನಾಂಗವನ್ನು ಒಳಗೊಂಡಂತೆ ರಾಜ್ಯದಲ್ಲಿ ಮನೆ ಮನೆಗೆ ಭೇಟಿ ನೀಡಿ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಹಾಗೂ ಇತರೆ ಕ್ಷೇತ್ರಗಳಿಗೆ ಅನ್ವಯಿಸುವ ಸಮೀಕ್ಷೆಯಾಗಿದೆ. ಈ ಕ್ಷೇತ್ರಗಳಿಗೆ ಮಾಹಿತಿ ಪಡೆಯುವ ಪ್ರಯತ್ನದಲ್ಲಿ ಜಾತಿಯೂ ಒಂದು ಅಂಶವಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎಲ್ಲ ವರ್ಗದವರಿಗೆ ಎಲ್ಲಾ ಕಾಲದಲ್ಲಿಯೂ ನೀಡುವುದು ಕಾಂಗ್ರೆಸ್ ಸರ್ಕಾರದ ಅತಿ ದೊಡ್ಡ ಆಕಾಂಕ್ಷೆಯಾಗಿದೆ ಎಂದು ಹೇಳಿದರು.

ಈ ಹಿಂದೆ ಮಿಲ್ಲರ್ ವರದಿಯಲ್ಲೂ ನೀಡಲಾಗಿದೆ. ಚಿನ್ನಪ್ಪರೆಡ್ಡಿ ವರದಿ ಸ್ಯಾಂಪಲ್ ಅಷ್ಟೇ. ನ್ಯಾ. ಕಾಂತರಾಜು ವರದಿ ಉತ್ತಮ ಸಮೀಕ್ಷೆ. ಪ್ರತಿ ಮನೆ ಮನೆಗೆ ಹೋಗಿ ತಯಾರಿಸಲಾಗಿದೆ. ಇಂದಿರಾ ಸಹಾನಿ ಕೇಸ್ ನಿಂದ ಒಬಿಸಿ ಆಯೋಗ ಬಂತು. ಹಲವರು ರಿಪೋರ್ಟ್ ಕೊಟ್ಟಿದ್ದಾರೆ. ವರದಿ ಸೋರಿಕೆಯಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದು ಒಂದು ಜನಾಂಗಕ್ಕೆ ಸೀಮಿತವಲ್ಲ. ಎಲ್ಲರ ಅಭ್ಯುದಯಕ್ಕೆ ಮಾಡಿರುವ ವರದಿ. ವ್ಯವಸ್ಥಿತವಾಗಿ ನಡೆದಿರುವ ವರದಿಯಾಗಿದ್ದು, ಶೇ.98 ರಷ್ಟು ಜನರನ್ನು ಸಂದರ್ಶಿಸಲಾಗಿದೆ. ವರದಿ ಬಗ್ಗೆ ವಿರೋಧ ಮಾಡುವುದು ಸರಿಯಲ್ಲ. ಇದರ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ ಎಂದರು.

ಸಮೀಕ್ಷಾ ವರದಿಯಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಇದ್ದರೂ ಸರಿಪಡಿಸಬಹುದು. ಈ ವರದಿಯನ್ನು ತರಲೇಬೇಕು ಎಂದು ರೇವಣ್ಣ ಒತ್ತಾಯಿಸಿದರು. ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕಾಂತರಾಜು ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆಯನ್ನು ನಡೆಸಿ ವರದಿ ನೀಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅದಕ್ಕೆ ಬೇಕಾದ ಸುಮಾರು ರೂ.165 ಕೋಟಿ ರೂ.ಗಳ ಖರ್ಚನ್ನು ರಾಜ್ಯ ಸರ್ಕಾರದಿಂದ ಭರಿಸಲಾಗಿತ್ತು. ಉದ್ದೇಶದಂತೆ ಕಾಂತರಾಜು ಆಯೋಗ 2015ರಲ್ಲಿ ರಾಜ್ಯಾದ್ಯಂತ ಎಲ್ಲಾ ಸಮುದಾಯಗಳನ್ನೊಳಗೊಂಡಂತೆ ಅವಶ್ಯ ಅಂಶಗಳನ್ನು ಪಡೆಯಲು ಒಟ್ಟು 55 ಪ್ರಶ್ನಾವಳಿಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗೆ ನುರಿತಂತಹ ಉಪಾಧ್ಯಾಯರುಗಳನ್ನೇ ಗಣತಿದಾರರನ್ನಾಗಿ ನೇಮಕ ಮಾಡಿ ಮಾಹಿತಿ ಪಡೆಯಲಾಗಿದೆ. ಮಾಹಿತಿ ನೀಡಿದವರ ಸಹಿಯನ್ನು ಪಡೆಯಲಾಗಿದೆ. ದೇಶದಲ್ಲೇ ಪ್ರಪ್ರಥಮ ಪ್ರಯೋಗವಿದು. 1931ರ ನಂತರ ಸಮೀಕ್ಷೆ ವೇಳೆಯಲ್ಲಿ ಸಮೀಕ್ಷೆಗೆ ಯಾವುದೇ ಕಾರಣಕ್ಕಾದರೂ ಒಳಪಡದವರಿಗೆ, ಆಯೋಗದ ಗಮನಕ್ಕೆ ನಿಗದಿತ ಅವಧಿಯ ಒಳಗೆ ಮಾಹಿತಿ ನೀಡುವ ಅವಕಾಶವನ್ನೂ ಮಾಧ್ಯಮಗಳ ಮೂಲಕ ನೀಡಲಾಗಿತ್ತು. ಈ ದಿಸೆಯಲ್ಲಿ ಆಯೋಗ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿ ಮಾಹಿತಿ ಪಡೆದಿದೆ ಎಂದು ಹೇಳಿದರು.

ಕಾಂತರಾಜು ಆಯೋಗ ಸಮೀಕ್ಷೆ ಮಾಡಿ ತಯಾರಿಸಿದ್ದ ವರದಿಯನ್ನು ರಾಜ್ಯ ಸರ್ಕಾರಕ್ಕೆ ತದನಂತರ ಬಂದ ಜಯಪ್ರಕಾಶ್ ಹೆಗ್ಡೆ ಆಯೋಗ ಒಪ್ಪಿಸಿದೆ. ಜೊತೆಗೆ ಜಯಪ್ರಕಾಶ್ ಹೆಗ್ಡೆ ಆಯೋಗ ಕಾಂತರಾಜು ಆಯೋಗ ಸಮೀಕ್ಷೆ ಮಾಡಿ ತಯಾರಿಸಿದ್ದ ವರದಿಯನ್ನೂ ಆಧರಿಸಿ ಜಯಪ್ರಕಾಶ್ ಹೆಗ್ಡೆ ಆಯೋಗ ತಯಾರಿಸಿದ ನೂತನ ಮೀಸಲಾತಿ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಹಿಂದಿನ 2-3 ದಿನಗಳಲ್ಲಿ ಮಾಧ್ಯಮಗಳ ಮೂಲಕ ಬಂದ ಮಾಹಿತಿ ಪ್ರಕಾರ 1 ಕೋಟಿ 35 ಲಕ್ಷ ಕುಟುಂಬಗಳ ಸಮೀಕ್ಷೆ ನಡೆದಿದ್ದು, 5,98,14,942 ದತ್ತಾಂಶಕ್ಕೆ (ಸಮೀಕ್ಷೆಗೆ) ಒಳಗಾದವರು ಎಂದು ತಿಳಿದು ಬಂದಿದೆ. ವರದಿಯನ್ನು ಸಂಪೂರ್ಣವಾಗಿ ನೋಡಿ ಪರಿಶೀಲಿಸದೆ ವರದಿ ಅವೈಜ್ಞಾನಿಕ ಎನ್ನುವುದು ಸರಿಯಲ್ಲ. ಮೇಲಾಗಿ ಸಣ್ಣ ಪುಟ್ಟ ತಪ್ಪುಗಳು ಬಂದಲ್ಲಿ, ಅವುಗಳನ್ನು ಸರ್ಕಾರ ಸರಿಪಡಿಸುವುದಾಗಿ ಹೇಳಿದೆ. ಸರ್ಕಾರಗಳು ಬದಲಾವಣೆಯಾಗಿ ಮತ್ತು ಇತರೆ ಕಾರಣಗಳಿಗೆ ವರದಿ ಪರಿಗಣಿಸಿ ಜಾರಿ ಕೊಡುವುದು ತಡವಾಗಿರಬಹುದು. ಇಂತಹ ಸಂದರ್ಭಗಳಲ್ಲೂ ಆಯೋಗದ ವರದಿಗಳನ್ನೂ ಜಾರಿ ಮಾಡಿದ ಉದಾಹರಣೆಗಳಿವೆ. ಅಲ್ಲದೆ ಇಂತಹ -ಸಮಗ್ರದ ಸಮೀಕ್ಷೆಗಳನ್ನು ಕಡಿಮೆ ಅವಧಿಗಳಲ್ಲಿ ಮಾಡುವುದು ಸುಲಭವಲ್ಲ ಎಂದರು.

ವಿಧಾನಪರಿಷತ್ ಸದಸ್ಯ ಎಂ.ಆರ್. ಸೀತಾರಾಂ ಮಾತನಾಡಿ, ನಾಳೆ ಕ್ಯಾಬಿನೆಟ್ ಮುಂದೆ ವರದಿ ಚರ್ಚೆಗೆ ಬರಲಿದೆ. ಎಲ್ಲಾ ಸಚಿವರು ಚರ್ಚೆ ಮಾಡಲಿ. ಈ ವರದಿಯನ್ನು ಎಲ್ಲರು ಒಪ್ಪಿಕೊಳ್ಳಬೇಕು. ಕಾಂತರಾಜ ವರದಿ ಸವಿಸ್ತಾರವಾಗಿದೆ. ಸೈಂಟಿಪಿಕ್,ಮೆಥಾಡಿಕಲ್ ಆಗಿ ಮಾಡಿದ್ದಾರೆ. 1.60 ಲಕ್ಷ ಜನ ಸರ್ವೆ ಮಾಡಿದ್ದಾರೆ. ಮೊದಲು ಸ್ಯಾಂಪಲ್ ಸರ್ವೆ ನಡೆಯುತ್ತಿದ್ದವು. ಆದರೆ ಇದು ವಿಸ್ತೃತವಾಗಿ ಸರ್ವೆ ನಡೆದಿದೆ ಎಂದು ಹೇಳಿದರು.

ಇದೊಂದು ಜವಾಬ್ದಾರಿಯುತವಾದ ಸರ್ವೆ. ಒಂದು ತಿಂಗಳಲ್ಲಿ ಜನರಿಗೆ ಡಿಟೇಲ್ಸ್ ಸಿಗಬಹುದು. ಜನರನ್ನು ಉದ್ರೇಕ ಮಾಡುವುದು ಬೇಡ. ಜನರ ಜೀವನಕ್ಕೆ ಹತ್ತಿರವಾದ ವರದಿ. ದೇಶದಲ್ಲಿ ನಾವೇ ಮೊದಲು ಸರ್ವೆ ಮಾಡಿರುವುದು. ಪೂರ್ಣಪ್ರಮಾಣ ಸರ್ವೆ ಮಾಡಿರುವುದು ನಮ್ಮ ರಾಜ್ಯ. ಯಾವ ಸಮುದಾಯವೂ ಆತಂಕ ಪಡಬೇಕಿಲ್ಲ. ರಾಹುಲ್ ಗಾಂಧಿ ಭಾಷಣದಲ್ಲೇ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ ವರದಿಯನ್ನು ಜಾರಿಗೆ ತರುತ್ತೇವೆಂದಿದ್ದರು ಎಂದರು.

ವಿಧಾನಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ವರದಿ ನಮ್ಮೆಲ್ಲರಿಗೆ ಭದ್ರ ಬುನಾದಿಯಾಗಲಿದೆ. ಕಾರ್ಯಕ್ರಮ ರೂಪಿಸಲು ಸಹಾಯಕವಾಗುತ್ತದೆ. ಜನರಿಗೆ ಗುಣಾತ್ಮಕ ಬದುಕು ನೀಡಲು ಸಾಧ್ಯ. ಉತ್ತಮವಾದ ವರದಿಯನ್ನು ನೀಡಲಾಗಿದೆ. ಶಾಶ್ವತವಾಗಿ ಸ್ಥಿರತೆಯನ್ನ ಪಡೆದುಕೊಳ್ಳುತ್ತದೆ. ಮುಂದೆ ಅಪ್ಡೇಟ್ ಮಾಡುವುದಕ್ಕೆ ಅವಕಾಶವಿದೆ. ಇದು ಕೇವಲ ಜನಗಣತಿಯಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವರದಿ. ಭಾವನಾತ್ಮಕವಾಗಿ ಇದರ ಬಗ್ಗೆ ಮಾತನಾಡುವುದು ಬೇಡ, ಜನರನ್ನು ದಾರಿ ತಪ್ಪಿಸುವುದು ಬೇಡ. ಕ್ಯಾಬಿನೆಟ್ ನಲ್ಲಿ ವರದಿ ಒಪ್ಪಲೇಬೇಕು ಎಂದು ಅಭಿಪ್ರಾಯಪಟ್ಟರು.

ಜನರಿಗೆ ಮುಕ್ತವಾಗಿ ಚರ್ಚೆಗೆ ಅವಕಾಶ ಸಿಗಲಿ. ತಪ್ಪಿದ್ದರೆ ಸರಿಪಡಿಸಿಕೊಳ್ಳಬಹುದು. ಬಿಟ್ಟು ಹೋದ ಜಾತಿಗಳನ್ನು ಸೇರಿಸಬೇಕು. ಬಹಳಷ್ಟು ಜನ ಮೇಲೆ ಬರಲಾಗಿಲ್ಲ. ಇನ್ನೂ ಬಡವರಾಗಿಯೇ ಇದ್ದಾರೆ. ಹಾಗಾಗಿ ಈ ವರದಿ ಎಲ್ಲರ ಬದುಕಿಗೆ ಸಹಾಯಕವಾಗಿದೆ. ಜನಸಾಮಾನ್ಯರಿಗೆ ಇದು ಪೂರಕವಾಗಿದೆ. ಕಾಂತರಾಜು ವರದಿಯನ್ನ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಎಂ. ನಾಗರಾಜ್ ಯಾದವ್ ಮಾತನಾಡಿ, ವರದಿಯನ್ನ ನಾವೆಲ್ಲರೂ ಒಪ್ಪುತ್ತೇವೆ. ಇದನ್ನು ನಾಳೆ ಕ್ಯಾಬಿನೆಟ್ ನಲ್ಲಿ ಒಪ್ಪಬೇಕು ಎಂದು ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ವಿಧಾನ ಪರಿಷತ್ ನ ಸಭಾಪತಿ ವಿ.ಆರ್. ಸುದರ್ಶನ್, ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್, ಮಾಜಿ ಮೇಯರ್ ಗಳಾದ ಪಿ.ಆರ್. ರಮೇಶ್, ಡಿ.ವೆಂಕಟೇಶ್ ಮೂರ್ತಿ ಮತ್ತಿತರ ನಾಯಕರು ಹಾಜರಿದ್ದರು.

ಇದನ್ನೂ ಓದಿ : ರಾಜ್ಯದಲ್ಲಿ ಜನಗಣತಿ ಜಾರಿ ಮಾಡಿದ್ರೆ ಸರ್ಕಾರಕ್ಕೇ ಉಲ್ಟಾ ಹೊಡೆಯುತ್ತೆ: ಶಾಮನೂರು ಶಿವಶಂಕರಪ್ಪ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.