ಹುಬ್ಬಳ್ಳಿ: ದೇಶ ಸಂಕಷ್ಟ ಮತ್ತು ಸಾಧನೆ ಸಮಯದಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಮಾತನಾಡುತ್ತದೆ. ಅಧಿಕಾರದಲ್ಲಿದ್ದಾಗ ಸೈನ್ಯವನ್ನು ಗಟ್ಟಿ ಮಾಡೋ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ಎಚ್ಎಎಲ್ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಕಡಿಮೆ ಹಣ ನೀಡಿತ್ತು. ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಸೈನ್ಯ ಇಂದು ಸ್ವಾವಲಂಬಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಇಂದು ಅನಾವಶ್ಯಕ ಆರೋಪಗಳನ್ನು ಮಾಡುತ್ತಿದೆ. ಸಿದ್ದರಾಮಯ್ಯ ಯುದ್ದ ಯಾಕೆ ಬೇಕು ಅಂತ ಕೇಳಿದ್ದರು. ಈ ಮಾತುಗಳು ನಿಮ್ಮ ಹೈಕಮಾಂಡ ಸೂಚನೆ ಮೇರಿಗೆ ಮಾತನಾಡ್ತಿದ್ದೀರಾ..? ಕಾಂಗ್ರೆಸ್ ನುಗ್ಗಿ ಹೊಡೆದವರಿಗೆ ಅಪಮಾನ ಮಾಡುತ್ತಿದೆ. ಕಾಂಗ್ರೆಸ್ ಯಾವಾಗಲು ದೇಶದ ಪರ ನಿಂತಿಲ್ಲ. ಅವರ ಆಳ್ವಿಕೆ ಸಮಯದಲ್ಲಿ ಭಾರತದ ಭೂಮಿಯನ್ನು ಬಿಟ್ಟುಕೊಡಲಾಯಿತು. ಚೀನಾ, ಬಾಂಗ್ಲಾ, ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದೆ ಎಂದು ಆರೋಪಿಸಿದರು.
ನಾವು ದೇಶದ ಒಂದಿಚ್ಚೂ ಭೂಮಿಯನ್ನು ಬಿಟ್ಟುಕೊಡಲ್ಲ: ಚೀನಾದ ಅನೇಕ ವಸ್ತುಗಳನ್ನು ಕೂಡ ಬ್ಯಾನ್ ಮಾಡಲಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಒಮ್ಮೆಲೇ ಮುರಿದು ಹಾಕಲು ಆಗಲ್ಲ. ಭಾರತದ ಒಂದಿಂಚು ನೆಲವನ್ನು ಯಾರು ಅತಿಕ್ರಮಣ ಮಾಡಲು ಬಿಡಲ್ಲಾ. ಸದ್ಯ ಇರೋದು ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮೀರ್ ಅಹ್ಮದ್ ಖಾನ್ ನನಗೆ ಬಾಂಬ್ ಕಟ್ಟಿ ಅಂತಾರೆ, ಮತ್ತೊಬ್ಬ ಶಾಸಕ ಮತ್ತೊಂದು ಮಾತನಾಡುತ್ತಿದ್ದಾರೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಕಾಂಗ್ರೆಸ್ ನಾಯಕರು ಹೀಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುವುದನ್ನು ತಿರುಗಿ ನೋಡಬೇಕು. ನಮ್ಮ ಸೈನಿಕರ ಬಗ್ಗೆ ನಮಗೆ ಹೆಮ್ಮೆಯಿದೆ. ಪಾಕ್ಗೆ ನುಗ್ಗಿ ಉಗ್ರರನ್ನು ಹೊಡೆದಿರುವುದು ನಮ್ಮ ಆತ್ಮ ನಿರ್ಭರ ಭಾರತ ಎಂದರು.
ಇದನ್ನು ಓದಿ: ಸೇನೆ ವಿರುದ್ಧ ಮಾತನಾಡಿದ್ದರೆ ತಪ್ಪು; ಆರ್ಮಿ ಗೌರವಿಸುವುದು ನಮ್ಮ ಕರ್ತವ್ಯ: ದೇಶಪಾಂಡೆ