ಬೆಂಗಳೂರು: ಐಪಿಎಲ್‌ನಲ್ಲಿ ಗೆದ್ದು ತವರಿಗೆ ಮರಳಿದ ಆರ್‌ಸಿಬಿ ಆಟಗಾರರ ಸಂಭ್ರಮಾಚರಣೆ ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಭಿಮಾನಿಗಳು ಜಮಾಯಿಸಿದಾಗ ಉಂಟಾದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಕಾಲ್ತುಳಿತದಲ್ಲಿ ಮೃತಪಟ್ಟವರ ವಿವರ
ಬೌರಿಂಗ್ ಆಸ್ಪತ್ರೆ:
- ದಿವ್ಯಾಂಶಿ, 14 ವರ್ಷ ಯಲಹಂಕದ ಕಟ್ಟಿಗೇನಹಳ್ಳಿ ನಿವಾಸಿ
- ಅಕ್ಷತಾ ಪೈ, 26 ವರ್ಷ, ಉತ್ತರ ಕನ್ನಡ ಜಿಲ್ಲೆಯ ರವೀಂದ್ರ ನಗರ
- ಮನೋಜ್ ಕುಮಾರ್, 20 ವರ್ಷ, ತುಮಕೂರಿನ ನಾಗಸಂದ್ರ ಗ್ರಾಮ
- ಶ್ರವಣ್.ಕೆ.ಟಿ, 20 ವರ್ಷ, ಚಿಕ್ಕಬಳ್ಳಾಪುರದ ಕುರಟಹಳ್ಳಿ ಗ್ರಾಮ
- ಶಿವಲಿಂಗ, 17 ವರ್ಷ, ಯಾದಗಿರಿ ಜಿಲ್ಲೆಯ ಹೊನಿಗೇರಿ ಗ್ರಾಮ
- ಕಾಮಾಕ್ಷಿದೇವಿ, 29 ವರ್ಷ, ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಉಡುಮಲಪೇಟ್
ವೈದೇಹಿ ಆಸ್ಪತ್ರೆ
- ಭೂಮಿಕ್, 20 ವರ್ಷ, ಎಂ.ಎಸ್.ರಾಮಯ್ಯ ಬಡಾವಣೆ, ಬೆಂಗಳೂರು
- ಸಹನಾ 23 ವರ್ಷ, ಕೋಲಾರ ಜಿಲ್ಲೆಯ ಎಸ್.ವಿ.ಲೇಔಟ್
- ಪೂರ್ಣಚಂದ್ರ, 20 ವರ್ಷ, ಮಂಡ್ಯ ಜಿಲ್ಲೆಯ ರಾಯಸಮುದ್ರ
- ಪ್ರಜ್ವಲ್, 22 ವರ್ಷ, ಯಲಹಂಕ ನ್ಯೂ ಟೌನ್
ಮಣಿಪಾಲ್ ಆಸ್ಪತ್ರೆ
- ಚಿನ್ಮಯಿ ಶೆಟ್ಟಿ, 19 ವರ್ಷ, ನಾರಾಯಣ ನಗರ ದೊಡ್ಡಕಲ್ಲಸಂದ್ರ
ಮೃತರ ಪೋಷಕರು, ಸಂಬಂಧಿಕರು ನೀಡಿರುವ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ 194 (ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ನಡುವೆ ಉಂಟಾದ ಗಲಭೆ) ಯಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಹಾಸನದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು