ETV Bharat / state

ಗಂಗಾವತಿ: ಮದುವೆ ಮಂಟಪದಲ್ಲೂ ಬಿಜೆಪಿ ಸದಸ್ವತ್ಯ ಅಭಿಯಾನ - BJP Membership Campaign

ಗಂಗಾವತಿಯಲ್ಲಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರನ್ನು ಆಶೀರ್ವದಿಸಲು ಆಗಮಿಸಿದ್ದ ಬಿಜೆಪಿ ನಾಯಕರು, ಅವರಿಂದ ಸದಸ್ಯತ್ವ ಮಾಡಿಸಿ ಗಮನ ಸೆಳೆದರು.

author img

By ETV Bharat Karnataka Team

Published : Sep 16, 2024, 10:28 AM IST

ಮದುವೆ ಮಂಟಪದಲ್ಲೆ ವಧು-ವರರಿಂದ ಸದಸ್ಯತ್ವ
ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಸಂಗಾಪುರ ಗ್ರಾಮದ ಜೋಡಿಯ ಮದುವೆ ಕಾರ್ಯಕ್ರಮ (ETV Bharat)

ಗಂಗಾವತಿ: ರಾಷ್ಟ್ರದೆಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚೆಚ್ಚು ಜನರನ್ನು ಪಕ್ಷದ ಪ್ರಾಥಮಿಕ ಸದಸ್ಯರನ್ನಾಗಿಸುವುದು ಇದರ ಉದ್ದೇಶ. ಈ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿಯಲ್ಲೂ ಪಕ್ಷದ ನಾಯಕರು ಸದಸ್ಯತ್ವ ಅಭಿಯಾನ ನಡೆಸುತ್ತಿದ್ದಾರೆ. ಭಾನುವಾರ ಮದುವೆ ಮಂಟಪದಲ್ಲಿ ವಧು-ವರರ ಸದಸ್ಯತ್ವ ಮಾಡಿಸಿಕೊಂಡಿದ್ದು ಕುತೂಹಲ ಕೆರಳಿಸಿತು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರು ಮದುವೆ ಆಮಂತ್ರಣದ ಹಿನ್ನೆಲೆಯಲ್ಲಿ ನಗರದ ನೀಲಕಂಠೇಶ್ವರ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಅಲ್ಲಿ ತಾಲ್ಲೂಕಿನ ಸಂಗಾಪುರ ಗ್ರಾಮದ ಜೋಡಿಯ ಮದುವೆ ನಡೆಯುತ್ತಿತ್ತು. ನೂತನ ವಧು-ವರರಿಗೆ ಆಶೀರ್ವದಿಸಿದ ನಾಯಕರು, ಬಿಜೆಪಿ ಸದಸ್ಯತ್ವ ಅಭಿಯಾನದ ಬಗ್ಗೆ ತಿಳಿಸಿ ಸ್ವಯಂಪ್ರೇರಿತ ಸದಸ್ಯತ್ವ ಪಡೆಯಲು ಮನವಿ ಮಾಡಿದರು.

ಮದುವೆ ಮಂಟಪದಲ್ಲೆ ವಧು-ವರರಿಂದ ಸದಸ್ಯತ್ವ
ಮದುವೆ ಮಂಟಪದಲ್ಲಿ ವಧು-ವರರಿಂದ ಸದಸ್ಯತ್ವ ಪಡೆದ ಬಿಜೆಪಿ ನಾಯಕರು (ETV Bharat)

"ಮೊಬೈಲ್ ಮೂಲಕ ಮಿಸ್​ ಕಾಲ್ ಮಾಡಿ ಸದಸ್ಯತ್ವ ಪಡೆದುಕೊಳ್ಳುವಂತೆ ತಿಳಿಸಿದ್ದ ನಮ್ಮ ಮನವಿಗೆ ಸ್ಪಂದಿಸಿದ ನೂತನ ವಧು-ವರರು ಆರತಕ್ಷತೆ ಕಾರ್ಯಕ್ರಮದಲ್ಲೇ ಸದಸ್ಯತ್ವ ಪಡೆದುಕೊಂಡರು" ಎಂದು ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ: 10 ಕೋಟಿ ನೋಂದಣಿ ಗುರಿ - BJPs membership drive

ETV Bharat Logo

Copyright © 2024 Ushodaya Enterprises Pvt. Ltd., All Rights Reserved.