ETV Bharat / state

ಹಲ್ಲೆ ಆರೋಪ ಮಾಡಿದ್ದ ವಿಂಗ್ ಕಮಾಂಡರ್ ನಾಪತ್ತೆ: ಜಾಮೀನಿನ ಮೇಲೆ ಹೊರಬಂದ ಬೈಕ್ ಸವಾರ ಹೇಳಿದ್ದೇನು? - BENGALURU ROAD RAGE CASE

ತಮ್ಮ ಮೇಲೆ ಹಲ್ಲೆ ಆಗಿರುವುದಾಗಿ ದೂರು ನೀಡಿದ್ದ ವಿಂಗ್ ಕಮಾಂಡರ್ ನಾಪತ್ತೆಯಾಗಿದ್ದಾರೆ. ಪೊಲೀಸ್​ ವಶದಲ್ಲಿದ್ದ ಬೈಕ್​ ಸವಾರ ಠಾಣಾ ಜಾಮೀನಿನ ಮೇರೆಗೆ ಹೊರಬಂದು, ವಿಡಿಯೋ ಮೂಲಕ ಸ್ಷಷ್ಟನೆ ನೀಡಿದ್ದಾರೆ.

bengaluru-road-rage-case-what-did-biker-said-after-released-on-bail-from-police-station
ವಿಂಗ್ ಕಮಾಂಡರ್ ಶೀಲಾದಿತ್ಯ, ಬೈಕ್​ ಸವಾರ ವಿಕಾಸ್ (ETV Bharat)
author img

By ETV Bharat Karnataka Team

Published : April 23, 2025 at 8:00 AM IST

2 Min Read

ಬೆಂಗಳೂರು: ವಾಯುಪಡೆ ವಿಂಗ್ ಕಮಾಂಡರ್ ಹಾಗೂ ವ್ಯಕ್ತಿ ನಡುವೆ ನಡೆದಿದ್ದ ಬೀದಿ ಕಾಳಗ ಸಂಬಂಧ ದೂರು, ಪ್ರತಿದೂರು ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಅಧಿಕಾರಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಭಾಷೆ ವಿಚಾರಕ್ಕಾಗಿ ತಮ್ಮ ಕಾರನ್ನು ಅಡ್ಡಗಟ್ಟಿ ಬೈಕ್​ ಸವಾರ ವಿಕಾಸ್ ಕುಮಾರ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ ವಿಂಗ್ ಕಮಾಂಡರ್ ಶೀಲಾದಿತ್ಯ, ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್ ಮಾಡಿದ್ದರು. ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಶೀಲಾದಿತ್ಯ ಅವರು ಪತ್ನಿ ಮೂಲಕ ಠಾಣೆಗೆ ದೂರು ನೀಡಿದ್ದರು.

ಬೈಕ್​ ಸವಾರ ವಿಕಾಸ್ (ETV Bharat)

ಹಲ್ಲೆ ಸಂಬಂಧ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕಾಸ್ ಕುಮಾರ್​ ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದರು. ಕೃತ್ಯ ನಡೆದ ಸ್ಥಳದ ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿ ಮೇಲೆಯೇ ವಿಂಗ್ ಕಮಾಂಡರ್ ತೀವ್ರ ರೀತಿಯಲ್ಲಿ ಹಲ್ಲೆ ಮಾಡಿರುವುದು ಕಂಡುಬಂದಿತ್ತು. ಅಲ್ಲದೆ, ವಿಕಾಸ್ ಕುಮಾರ್​​ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ತನ್ನ ಬೈಕಿಗೆ ಟಚ್ ಮಾಡುವುದಲ್ಲದೆ, ಅಡ್ಡಗಟ್ಟಿ ತಮ್ಮ ಮೇಲೆ ಸುಳ್ಳು ದೂರು ನೀಡಿದ್ದಾರೆ ಎಂದು ವಿಕಾಸ್ ಹೇಳಿಕೆ ನೀಡಿದ್ದರು. ಈ ಸಂಬಂಧ ಪ್ರತಿದೂರು ದಾಖಲಿಸಿಕೊಂಡಿರುವ ಪೊಲೀಸರು ವಿಂಗ್ ಕಮಾಂಡರ್​​ಗಾಗಿ ಶೋಧ ನಡೆಸುತ್ತಿದ್ದಾರೆ.

ಭಾಷೆ ವಿಚಾರಕ್ಕೆ ಗಲಾಟೆಯಾಗಿಲ್ಲ: ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಠಾಣಾ ಜಾಮೀನಿನ ಮೇರೆಗೆ ಹೊರಬಂದಿರುವ ಬೈಕ್ ಸವಾರ ವಿಕಾಸ್ ಕುಮಾರ್ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಮೊದಲಿಗೆ ತನಗೆ ಬೆಂಬಲ ನೀಡಿದ ಮಾಧ್ಯಮಗಳು, ಕನ್ನಡ ಸಂಘಟನೆಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದ್ಧಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ IAF ವಿಂಗ್ ಕಮಾಂಡರ್ ಮೇಲೆ ಹಲ್ಲೆ ಆರೋಪ: ಆರೋಪಿ ಬಂಧನ

''ಭಾಷೆ ವಿಚಾರಕ್ಕಾಗಿ ಗಲಾಟೆಯಾಗಿಲ್ಲ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವನು. ಇಲ್ಲಿ ಬದುಕಬೇಕು ಎಂದರೆ ಹಲವು ಭಾಷೆಗಳನ್ನು ಕಲಿತಿರಬೇಕು. ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಹಾಗೂ ಹಿಂದಿ ಮಾತನಾಡುತ್ತೇವೆ. ನಿನ್ನೆ ನಡೆದ ಗಲಾಟೆಯಿಂದ ನನ್ನ ಕೆಲಸಕ್ಕೆ ಕುತ್ತು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಪೊಲೀಸ್ ಆಯುಕ್ತರು ನ್ಯಾಯ ಕೊಡಿಸುವ ಭರವಸೆ ನೀಡಿದ್ಧಾರೆ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ನಾನು ಇಲ್ಲಿಗೆ ಬಿಡುವುದಿಲ್ಲ'' ವಿಕಾಸ್ ಹೇಳಿದ್ದಾರೆ.

ವಿಕಾಸ್ ನೀಡಿದ ಪ್ರತಿದೂರಿನಲ್ಲಿ ಏನಿದೆ? ಸೋಮವಾರ ಬೆಳಗ್ಗೆ ನಾಗವಾರಪಾಳ್ಯ ಬಳಿ ಘಟನೆ ನಡೆದಿದೆ. ಸ್ನೇಹಿತನ ಬೈಕ್ ವಾಪಸ್ ನೀಡಲು ಹೋಗುವಾಗ ವಿಂಗ್ ಕಮಾಂಡರ್ ಇದ್ದ ಕಾರು ನನ್ನ ಬೈಕಿಗೆ ಟಚ್ ಆಗಿದೆ. ನಂತರ ಮುಂದೆ ಬಂದು ನನ್ನ ಬೈಕ್​ ಅಡ್ಡಗಟ್ಟಿ ಕಾರಿಗೆ ಯಾಕೆ ಟಚ್ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಾನು ಟಚ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದೆ. ಆದರೂ ಕಾರಿನಿಂದ ಇಳಿದು ನನ್ನನ್ನು ತಳ್ಳಿ ಬೀಳಿಸಿದ್ಧಾರೆ. ನಾನು ಏರ್​​ಪೋರ್ಸ್​​ನಲ್ಲಿ ಇರುವವನು. ನನ್ನ ಜೊತೆ ಆಟವಾಡಬೇಡ ಎಂದು ಬೈದಿದ್ದಾರೆ. ಸ್ನೇಹಿತನಿಗೆ ಕರೆ ಮಾಡಲು ಕೈಗೆತ್ತಿಕೊಂಡ ಮೊಬೈಲ್ ಕಸಿದು ಕೆಳಗೆ ಬೀಳಿಸಿದ್ದಾರೆ, ಸಾಯಿಸುವ ಉದ್ದೇಶದಿಂದ ನನ್ನ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ಧಾರೆ ಎಂದು ದೂರಿ​​ನಲ್ಲಿ ವಿಕಾಸ್ ಆರೋಪಿಸಿದ್ದಾರೆ. ಈ ಬಗ್ಗೆ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ವಿಂಗ್ ಕಮಾಂಡರ್-ಬೈಕರ್ ಜಟಾಪಟಿ: ಪ್ರಕರಣದ ತನಿಖೆ ನಡೆಯುತ್ತಿದೆ- ಪೊಲೀಸ್​ ಕಮಿಷನರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.