ETV Bharat / state

TCS ವರ್ಲ್ಡ್ 10K ಮ್ಯಾರಥಾನ್: ಅಖಾಡಕ್ಕಿಳಿಯುವ ಟಾಪ್ ಇಂಡಿಯನ್ ರನ್ನರ್ಸ್ ಇವರು - TCS WORLD 10K RUN

TCS ವರ್ಲ್ಡ್ 10K ಮ್ಯಾರಥಾನ್​ಗೆ ರಾಜಧಾನಿ ಬೆಂಗಳೂರು ಸಜ್ಜುಗೊಂಡಿದೆ. ದೇಶ, ವಿದೇಶಗಳ ಪ್ರಖ್ಯಾತ ಓಟಗಾರರು ಭಾಗವಹಿಸಲಿದ್ದಾರೆ.

Bengaluru ready for 17th edition of TCS World 10K run on sunday
ಪೂಲನ್ ಪಾಲ್, ಅಭಿಷೇಕ್ ಪಾಲ್, ಜೋಶುವಾ ಚೆಪ್ಟೆಗಿ, ಕಿರಣ್ ಮ್ಹಾತ್ರೆ, ಸಾವನ್ ಬರ್ವಾಲ್, ಸಂಜೀವನಿ ಜಾಧವ್ (ETV Bharat)
author img

By ETV Bharat Karnataka Team

Published : April 26, 2025 at 8:53 PM IST

2 Min Read

ಬೆಂಗಳೂರು: TCS ವರ್ಲ್ಡ್ 10K ಮ್ಯಾರಥಾನ್‌ಗಾಗಿ ಸಿಲಿಕಾನ್ ಸಿಟಿ ಬೆಂಗಳೂರು ಸಿದ್ಧಗೊಂಡಿದೆ. ವಿಶ್ವದ ಪ್ರಮುಖ 10K ಮ್ಯಾರಥಾನ್‌ಗಳಲ್ಲಿ ಒಂದೆನಿಸಿರುವ TCS ವರ್ಲ್ಡ್ ಮ್ಯಾರಥಾನ್‌ಗಾಗಿ ದೇಶ ವಿದೇಶಗಳ ಖ್ಯಾತನಾಮ ರನ್ನರ್ಸ್ ಜೊತೆಗೆ ಭಾರತೀಯ ರನ್ನರ್ಸ್ ಸಹ ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಪರೇಡ್ ಮೈದಾನದ ಮುಂಭಾಗದಿಂದ ಆರಂಭವಾಗಲಿರುವ ಮ್ಯಾರಥಾನ್‌ಗೆ‌ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಲಿದ್ದಾರೆ.

ಟಾಪ್ ಇಂಡಿಯನ್ ರನ್ನರ್ಸ್ ಯಾರು? TCS ವರ್ಲ್ಡ್ 10K ಆರಂಭಿಕ ಮ್ಯಾರಥಾನ್ ಹಾಲಿ ಚಾಂಪಿಯನ್‌ಗಳಾದ ಕಿರಣ್ ಮ್ಹಾತ್ರೆ ಮತ್ತು ಸಂಜೀವನಿ ಜಾಧವ್ ಅವರ ವೇಗದ ಓಟಕ್ಕೆ ವೇದಿಕೆಯಾಗಲಿದೆ. ಕಳೆದ ಆವೃತ್ತಿಯಲ್ಲಿ 29:32 ಸೆಕೆಂಡುಗಳಲ್ಲಿ (ಆ ಸಮಯದಲ್ಲಿ ಅವರ ವೈಯಕ್ತಿಕ ಅತ್ಯುತ್ತಮ) ಪುರುಷರ ಈವೆಂಟ್ ದಾಖಲೆಯನ್ನು ದಾಖಲಿಸಿದ್ದರು. ಈ ಬಾರಿ ಹೊಸ ದಾಖಲೆಯ ಮೇಲೆ ಕಣ್ಣಿಟ್ಟಿರುವ ಮ್ಹಾತ್ರೆ, ರೇಸ್‌ನಲ್ಲಿರುವ ಪ್ರಮುಖ ರನ್ನರ್ ಆಗಿದ್ದರು.

Bengaluru ready for 17th edition of TCS World 10K run on sunday
ಪೂಲನ್ ಪಾಲ್, ಅಭಿಷೇಕ್ ಪಾಲ್, ಜೋಶುವಾ ಚೆಪ್ಟೆಗಿ, ಕಿರಣ್ ಮ್ಹಾತ್ರೆ, ಸಾವನ್ ಬರ್ವಾಲ್, ಸಂಜೀವನಿ ಜಾಧವ್ (ETV Bharat)

23 ವರ್ಷದ ಮ್ಹಾತ್ರೆ ಇತ್ತೀಚೆಗೆ ಕೊಚ್ಚಿಯಲ್ಲಿ ಮುಕ್ತಾಯಗೊಂಡ ಫೆಡರೇಶನ್ ಕಪ್ 2025ರಲ್ಲಿ 29:47.62 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಅದೇ ರೀತಿ ಮುಂಬರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ತಮ್ಮ ಸ್ಥಾನ ಕಾಯ್ದಿರಿಸುವ ಹಾದಿಯಲ್ಲಿರುವ ಸಾವನ್ ಬರ್ವಾಲ್ ಮತ್ತು ಅಭಿಷೇಕ್ ಪಾಲ್‌ರವರು ಕಿರಣ್ ಮ್ಹಾತ್ರೆಗೆ ತೀವ್ರ ಸ್ಪರ್ಧೆಯೊಡ್ಡಲಿದ್ದಾರೆ. ಫೆಡರೇಶನ್ ಕಪ್‌ನಲ್ಲಿ ಬರ್ವಾಲ್ 28:57.13 ಸೆಕೆಂಡುಗಳಲ್ಲಿ ಹಾಗೂ ಪಾಲ್ 29:14.86 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

ಭಾನುವಾರ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಮ್ಹಾತ್ರೆ, ''ಅಭಿಷೇಕ್ ಮತ್ತು ಸಾವನ್‌ರಂಥಹ ರನ್ನರ್ಸ್ ಓಡುವುದರಿಂದ ಖಂಡಿತವಾಗಿಯೂ ಒತ್ತಡವಿರುತ್ತದೆ. ಬಲವಾದ ಹೋರಾಟ ನೀಡಲು ನಾನು ಉತ್ಸುಕನಾಗಿದ್ದೇನೆ. ಮತ್ತು ನಮಗೆ ಈ ಸ್ಪರ್ಧೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದರು.

ಮತ್ತೊಂದೆಡೆ ಫೆಡರೇಶನ್ ಕಪ್‌ನಲ್ಲಿ 5K ಹಾಗೂ 10K ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿರುವ ಸಾವನ್ ಬರ್ವಾಲ್ ರೆಡ್‌ ಹಾಟ್ ಫಾರ್ಮ್‌ನಲ್ಲಿಯೇ ಮ್ಯಾರಥಾನ್ ಪ್ರವೇಶಿಸುತ್ತಿದ್ದಾರೆ. ''ನಾನು ತುಂಬಾ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ. ನನ್ನ ತರಬೇತುದಾರರು ಮತ್ತು ತಂಡವು ನನಗೆ ವೇಗವನ್ನು ಪಡೆಯಲು ಮತ್ತು ಗಾಯಗಳಿಂದ ಮುಕ್ತವಾಗಿರಲು ಸಹಾಯ ಮಾಡಿದೆ. ನಾನು ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ಹುಡುಕುತ್ತಿದ್ದೇನೆ ಮತ್ತು ಈವೆಂಟ್ ದಾಖಲೆಯನ್ನು ಮುರಿಯಲು ಪ್ರಯತ್ನಿಸುತ್ತೇನೆ'' ಎಂದು ಬರ್ವಾಲ್ ಹೇಳಿದ್ದಾರೆ.

ಹಾಲಿ ಚಾಂಪಿಯನ್ ಟೈಟಲ್‌ ಇಮೇಜ್ ಉಳಿಸಿಕೊಳ್ಳಲು ಸಿದ್ಧವಾದ ಸಂಜೀವನಿ: ಕಳೆದ ಆವೃತ್ತಿಯಲ್ಲಿ 34:02 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಸಂಜೀವನಿ ಜಾಧವ್ ಈ ಬಾರಿಯೂ ದಾಖಲೆಯ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಫೆಡರೇಶನ್ ಕಪ್ 10K ವಿಭಾಗದಲ್ಲಿ 33:38 ಸೆಕೆಂಡ್‌ಗಳಲ್ಲಿ ಗುರಿ ಸಾಧಿಸಿ ಚಾಂಪಿಯನ್ ಆಗಿರುವ ಸಂಜೀವನಿ, "ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅಭ್ಯಾಸವು ತುಂಬಾ ಚೆನ್ನಾಗಿ ನಡೆಯುತ್ತಿದೆ. ನನ್ನನ್ನು ಹೊಂದಿಸಿಕೊಳ್ಳಲು ರಾಷ್ಟ್ರೀಯ ಕ್ರೀಡಾಕೂಟ, ಫೆಡರೇಶನ್ ಕಪ್ ಮತ್ತು ಟಿಸಿಎಸ್ ವರ್ಲ್ಡ್ 10K ಸಹಕಾರಿಯಾಗಿವೆ'' ಎಂದು ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ 2ನೇ ಬಾರಿಗೆ ಮಹಿಳಾ ಓಟದಲ್ಲಿ ಭಾಗವಹಿಸಲಿರುವ ಫೂಲನ್ ಪಾಲ್ ಈ ಬಾರಿಯ ಅಖಾಡದಲ್ಲಿರುವ ಮತ್ತೋರ್ವ ಪ್ರಮುಖ ರನ್ನರ್. ಪುರುಷರ ವಿಭಾಗದಲ್ಲಿರುವ ಅಭಿಷೇಕ್ ಪಾಲ್ ಅವರ ಸಹೋದರಿಯಾಗಿರುವ ಪೂಲನ್ ಪಾಲ್, "ಇದು ತುಂಬಾ ಸ್ಪರ್ಧಾತ್ಮಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಸಂಜೀವಿನಿ ಜೊತೆಗೆ, ಭಾನುವಾರದಂದು ಅನೇಕ ಭರವಸೆಯ ಓಟಗಾರರು ಇದ್ದಾರೆ. ನಮ್ಮ ಕುಟುಂಬವು ನಮ್ಮನ್ನು ಹುರಿದುಂಬಿಸಲು ಕಾತರವಾಗಿದೆ'' ಎಂದಿದ್ದಾರೆ.

ಇದನ್ನೂ ಓದಿ: DC vs RCB ಹೈವೋಲ್ಟೇಜ್​ ಕದನ: ಸಿಡಿಲಬ್ಬರದ ಬ್ಯಾಟರ್​​ ಕಣಕ್ಕಿಳಿಯಲು ಸಜ್ಜು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.