ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ಕೋಟಿಗಟ್ಟಲೆ ಹಣ ರಿಲೀಸ್ ಮಾಡಿದರೂ ನಗರದ ರಸ್ತೆ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಇದೀಗ ಮತ್ತೆ ಪಾಲಿಕೆ ಅಧಿಕಾರಿಗಳು ರಸ್ತೆ ಗುಂಡಿಗಳಿಗೆ ಮುಕ್ತಿ ನೀಡುತ್ತೇವೆ ಎಂದು ಸುಮಾರು 700 ಕೋಟಿ ರೂ.ಗಳ ಹೊಸ ಟೆಂಡರ್ ಕರೆಯಲು ಮುಂದಾಗಿದ್ದಾರೆ.
ವಲಯವಾರು ಟೆಂಡರ್ ಪ್ರಕ್ರಿಯೆ ಇದಾಗಿದ್ದು, ಟೆಂಡರ್ ಸಲ್ಲಿಸಲು ಡಿಸೆಂಬರ್ 25ಕ್ಕೆ ಮುಕ್ತಾಯದ ಅವಧಿ ನೀಡಲಾಗಿದೆ. ಬಿಬಿಎಂಪಿ ಅನುದಾನದಲ್ಲೇ 389 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. 5 ತಿಂಗಳೊಳಗೆ ರಸ್ತೆಗಳ ಅಭಿವೃದ್ಧಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ತಿಳಿಸಿದರು.
ಟೆಂಡರ್ ವಿವರ:
ಸಂಖ್ಯೆ | ವಲಯ | ರಸ್ತೆಗಳ ಸಂಖ್ಯೆ | ಕಿ.ಮೀ | ಟೆಂಡರ್ ಮೊತ್ತ |
1. | ಮಹದೇವಪುರ ವಲಯ | 30 ರಸ್ತೆಗಳು | 82 ಕಿ.ಮೀ | 140 ಕೋಟಿ ರೂ. |
2. | ಯಲಹಂಕ | 36 ರಸ್ತೆಗಳು | 69.45 ಕಿ.ಮೀ | 97.50 ಕೋಟಿ ರೂ. |
3. | ಪೂರ್ವ ವಲಯ | 51 ರಸ್ತೆಗಳು | 76.85 ಕಿ.ಮೀ | 95 ಕೋಟಿ ರೂ. |
4. | ದಕ್ಷಿಣ ವಲಯ | 30 ರಸ್ತೆಗಳು | 34.90 ಕಿ.ಮೀ | 95 ಕೋಟಿ ರೂ. |
5. | ಆರ್.ಆರ್. ನಗರ | 16 ರಸ್ತೆಗಳು | 34.83 ಕಿ.ಮೀ | 95 ಕೋಟಿ ರೂ. |
6. | ಪಶ್ಚಿಮ | 19 ರಸ್ತೆಗಳು | 23.40 ಕಿ.ಮೀ | 71.50 ಕೋಟಿ ರೂ. |
7. | ಬೊಮ್ಮನಹಳ್ಳಿ ವಲಯ | 22 ರಸ್ತೆಗಳು | 34.60 ಕಿ.ಮೀ | 34.60 ಕೋಟಿ ರೂ. |
8. | ಕೆ.ಆರ್ ಪುರ ವಲಯ | 8 ರಸ್ತೆಗಳು | 19.55 ಕಿ.ಮೀ | 35 ಕೋಟಿ ರೂ. |
9. | ದಾಸರಹಳ್ಳಿ | 6 ರಸ್ತೆಗಳು | 14.10 ಕಿ.ಮೀ | 20 ಕೋಟಿ ರೂ. |
ಒಟ್ಟು | 218 ರಸ್ತೆಗಳು | 389.68 ಕಿ.ಮೀ | 694 ಕೋಟಿ ರೂ. |
ಇದನ್ನೂ ಓದಿ: ಹೊಸ ನಕ್ಷೆ ಮಂಜೂರಾತಿಗೆ ಬಿಬಿಎಂಪಿಯಿಂದ 17 ಲಕ್ಷ ರೂ ಶುಲ್ಕ: ಹಿರಿಯ ವಕೀಲರಿಂದ ಹೈಕೋರ್ಟ್ ಮೊರೆ, ಸರ್ಕಾರಕ್ಕೆ ನೋಟಿಸ್