ETV Bharat / state

ರಂಜಾನ್​​ ಹಬ್ಬಕ್ಕೆ ಅತ್ತರ್ ಪರಿಮಳ: ಮುಸ್ಲಿಮರು ಈದ್​ಗೆ ಹಚ್ಚುವ ಸುವಾಸಿತ ದ್ರವ್ಯಕ್ಕೆ ಹೆಚ್ಚಿದ ಬೇಡಿಕೆ - ATTAR FOR EID FESTIVAL

ಅತ್ತರ್​​ ಎಂದರೆ ಸುಗಂಧ ದ್ರವ್ಯ. ಒಂದು ತಿಂಗಳು ರಂಜಾನ್ ಉಪವಾಸದ ನಂತರ ಆಚರಿಸುವ ಈದ್ ಹಬ್ಬದಂದು ಮುಸ್ಲಿಮರು ಇದನ್ನು ಹಚ್ಚಿ ಸಂಭ್ರಮಿಸುತ್ತಾರೆ.

MUSLIMS USE ATTAR PERFUME FOR EID AL-FITR AFTER COMPLETE THEIR FASTING
ರಂಜಾನ್​​ ಹಬ್ಬಕ್ಕೆ ಅತ್ತರ್​ ಪರಿಮಳ (ETV Bharat)
author img

By ETV Bharat Karnataka Team

Published : March 28, 2025 at 1:15 PM IST

Updated : March 28, 2025 at 2:44 PM IST

2 Min Read

ವರದಿ:ವಿನೋದ್​ ಪುದು

ಮಂಗಳೂರು: ರಂಜಾನ್ ಮಾಸದಲ್ಲಿ ಉಪವಾಸ ಆಚರಿಸಿ ಈದ್‌ ಹಬ್ಬಕ್ಕೆ ಸಜ್ಜಾಗಿರುವ ಮುಸ್ಲಿಮರಿಗೆ ಅತ್ತರ್​ನ ಪರಿಮಳ ಬೇಕೇ ಬೇಕು. ಪ್ರತಿಯೊಬ್ಬ ಮುಸ್ಲಿಮನೂ ಹಬ್ಬಕ್ಕೆ ಹೊಸ ಬಟ್ಟೆಗೆ ಹಚ್ಚಿಕೊಳ್ಳುವ ಅತ್ತರ್ ನಿಮಗೆ ಗೊತ್ತೇ?.

ಏನಿದು ಅತ್ತರ್?: ಈದ್ ಹಬ್ಬಕ್ಕೆ ಸಂಭ್ರಮದಲ್ಲಿರುವ ಮುಸ್ಲಿಮರು ಅತ್ತರ್​ನ ಖರೀದಿಯಲ್ಲಿ ತೊಡಗಿದ್ದಾರೆ. ಅತ್ತರ್​ ಎಂಬುದು ಸೆಂಟ್​ ಅಥವಾ ಪರ್ಪ್ಯೂಮ್​ನ ಮತ್ತೊಂದು ರೂಪ. ಸಾಧಾರಣವಾಗಿ ಸೆಂಟ್​ನಲ್ಲಿ ಅಲ್ಕೋಹಾಲ್​, ರಾಸಾಯನಿಕ ಮಿಶ್ರಿತವಾಗಿರುತ್ತದೆ. ಆದರೆ ಅತ್ತರ್ ಸುವಾಸಿತ ದ್ರವ್ಯವಾಗಿದ್ದರೂ ಇದಕ್ಕೆ ಅಲ್ಕೋಹಾಲ್, ರಾಸಾಯನಿಕ ಬಳಕೆಯಾಗುವುದಿಲ್ಲ. ಇದನ್ನು ದೇಹ ಅಥವಾ ಬಟ್ಟೆಗಳಿಗೆ ಹಚ್ಚಿಕೊಂಡರೆ ಸುವಾಸನೆ ಇರುತ್ತದೆ.

ರಂಜಾನ್​​ ಹಬ್ಬಕ್ಕೆ ಅತ್ತರ್ ಪರಿಮಳ (ETV Bharat)

ಈದ್ ಹಬ್ಬಕ್ಕೆ ಬೇಕು ಅತ್ತರ್​: ಒಂದು ತಿಂಗಳು ಉಪವಾಸ ಮಾಡುವ ಮುಸ್ಲಿಮರು ಈದ್​ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಪ್ರತಿಯೊಬ್ಬ ಮುಸ್ಲಿಮರೂ ಅತ್ತರ್ ಹಚ್ಚುತ್ತಾರೆ. ಹೊಸ ಬಟ್ಟೆಗಳನ್ನು ಉಟ್ಟು ಅತ್ತರ್ ಹಚ್ಚಿ, ಮಸೀದಿಗೆ ತೆರಳಿ ನಮಾಜ್​ ಸಲ್ಲಿಸಿ ಹಬ್ಬ ಆಚರಿಸಲಾಗುತ್ತದೆ. ಉಪವಾಸದ ಸಂದರ್ಭದಲ್ಲಿ ಅತ್ತರ್ ದೇಹಕ್ಕೆ ಅಥವಾ ಬಟ್ಟೆಗೆ ಹಚ್ಚುವಂತಿಲ್ಲ. ಒಂದು ತಿಂಗಳ ಉಪವಾಸ ಮುಗಿದು ಆಚರಿಸುವ ಈದ್ ಹಬ್ಬಕ್ಕೆ ಅತ್ತರ್ ಅ​ನ್ನು ಎಲ್ಲರೂ ಬಳಸುತ್ತಾರೆ.

200ಕ್ಕೂ ಅಧಿಕ ಬಗೆಯ ಅತ್ತರ್​: ಮಾರುಕಟ್ಟೆಯಲ್ಲಿ 200ಕ್ಕೂ ಅಧಿಕ ಬಗೆಯ ಅತ್ತರ್ ಇದೆ. ಮಂಗಳೂರಿನ ಅಸ್ಗರ್​ ಅಲಿ ಅತ್ತರ್ ವಾಲ ಅಂಗಡಿಯಲ್ಲಿ 200 ಬಗೆಯ ಅತ್ತರ್ ಸುಗಂಧ ದ್ಯವ್ಯ ಇದೆ. ಖರೀದಿಗೆ ಬರುವವರು ತಮ್ಮ ಮನೆಗೆ ಅಗತ್ಯಕ್ಕೆ ತಕ್ಕಂತೆ ಅತ್ತರ್ ಖರೀದಿಸುತ್ತಾರೆ. ಮೂರು ಎಂಎಲ್​ನಿಂದ ಆರಂಭಿಸಿ ಅತ್ತರ್ ಖರಿದಿ ಮಾಡುತ್ತಾರೆ. 3ML ಅತ್ತರ್​ಗೆ ಕಡಿಮೆ ದರ ರೂ. 30 ಇದ್ದರೆ ಹೆಚ್ಚು ದರ ರೂ 200 ಇದೆ. ಅತ್ತರ್​ನ ಸುವಾಸನೆ, ಬ್ರಾಂಡ್ ಮೇಲೆ ದರ ಭಿನ್ನವಾಗಿರುತ್ತದೆ. ಇಲ್ಲಿಗೆ ಅಸ್ಸಾಮ್​ನಿಂದ ಈ ಅತ್ತರ್​ ತರಿಸಲಾಗುತ್ತದೆ.

MUSLIMS USE ATTAR PERFUME FOR EID AL-FITR AFTER COMPLETE THEIR FASTING
ಅತ್ತರ್​ನ ಸುವಾಸನೆ, ಬ್ರಾಂಡ್ ಮೇಲೆ ದರ ಭಿನ್ನ (ETV Bharat)

ಅತ್ತರ್​ನ ವಿಶೇಷತೆ ಬಗ್ಗೆ ಮಾತನಾಡಿದ ಜುಝರ್​ ಇಬ್ರಾಹಿಂ ಕಾಗ್ಝಿ, "ರಂಜಾನ್​ ತಿಂಗಳ ಅಂತ್ಯದಲ್ಲಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಖುತ್ಬಾ ಓದಲು ಹೋಗುವಾಗ ಪರಿಮಳಯುಕ್ತವಾದ ಅತ್ತರ್​ ಬಳಸಿ ಹೋಗುವುದು ರೂಢಿ. ಅದಕ್ಕಾಗಿ ರಂಜಾನ್ ತಿಂಗಳು ಅಂತ್ಯವಾಗುವ ಸಂದರ್ಭದಲ್ಲಿ ಇದನ್ನು ಖರೀದಿಸುತ್ತಾರೆ. ಸ್ಪಿರಿಟ್ ಇದ್ದ ಅತ್ತರನ್ನು ಬಳಸಬಾರದು. ದೇವರ ಬಳಿಗೆ ಹೋಗುವಾಗ ಸುವಾಸನೆ ಭರಿತವಾಗಿರಬೇಕೆಂದು ಹಚ್ಚಲಾಗುತ್ತದೆ. ನಮ್ಮ ಪ್ರವಾದಿಯವರಿಗೆ ಅತ್ತರ್ ಎಂಬುದು ಪ್ರೀತಿಯ ವಸ್ತು. ಅದಕ್ಕೆ ಇದನ್ನು ನಾವು ಬಳಸುತ್ತೇವೆ" ಎಂದರು.

ಉಪವಾಸದ ಸಂದರ್ಭದಲ್ಲಿ ಅತ್ತರ್ ದೇಹಕ್ಕೆ ಅಥವಾ ಬಟ್ಟೆಗೆ ಹಚ್ಚುವಂತಿಲ್ಲ (ETV Bharat)

ಈದ್ ಹಬ್ಬಕ್ಕೆ ಅತ್ತರ್​ ಬಳಕೆ (ETV Bharat)

ಈ ಬಗ್ಗೆ ಮಾತನಾಡಿದ ಅಂಗಡಿ ಮಾಲೀಕರಲ್ಲೊಬ್ಬರಾದ ಅಬ್ಬಾಸ್, "ಅತ್ತರ್​ನಲ್ಲಿ ಆಲ್ಕೋಹಾಲ್​ ಇರುವುದಿಲ್ಲ. ಸೆಂಟ್​ನಲ್ಲಿ ಸ್ಪಿರಿಟ್​, ಆಲ್ಕೋಹಾಲ್ ಇರುವುದರಿಂದ ಅದು ಆಗುವುದಿಲ್ಲ. ಅತ್ತರ್ ಎಂಬುದು ಪವಿತ್ರ. ಅದನ್ನು ನಮಾಜ್​ಗೆ ಹೋಗುವಾಗ ಹಚ್ಚುತ್ತಾರೆ. ಅತ್ತರ್​ನಲ್ಲಿ ಸುಮಾರು 300 ಬಗೆಯ ಅತ್ತರ್ ಇದೆ. ಅರೇಬಿಕ್, ಇಂಡಿಯನ್, ಫ್ರೆಂಚ್​ನ ಅತ್ತರ್​ಗಳು ಸಿಗುತ್ತದೆ. ಅಸ್ಸಾಂ, ಮುಂಬಯಿನಿಂದ ಇದು ಬರುತ್ತದೆ. ನಮ್ಮ ತಾತನ ಕಾಲದಿಂದ 90 ವರ್ಷದಿಂದ ಇದರ ವ್ಯಾಪಾರ ಮಾಡುತ್ತಿದ್ದೇವೆ" ಎಂದರು.

ಇದನ್ನೂ ಓದಿ: ಬಿಜೆಪಿಯಿಂದ ಈದ್ ಮುಬಾರಕ್; 32 ಲಕ್ಷ ಮುಸ್ಲಿಮರಿಗೆ 'ಸೌಗಾತ್-ಎ-ಮೋದಿ' ಕಿಟ್ ವಿತರಣೆ

Last Updated : March 28, 2025 at 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.