ETV Bharat / state

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ - Assault On Youth

author img

By ETV Bharat Karnataka Team

Published : Aug 14, 2024, 6:50 PM IST

ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ASSAULT ON YOUTH
ಸುಬ್ರಹ್ಮಣ್ಯಪುರ ಪೊಲೀಸ್​ ಠಾಣೆ (ETV Bharat)

ಬೆಂಗಳೂರು: ಹೇಳದೇ ಕೇಳದೆ ಕೆಲಸ ಬಿಟ್ಟನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನ ಮೇಲೆ ಬೆತ್ತದಿಂದ ಮನಸೋ ಇಚ್ಛೆ ಹೊಡೆದಿರುವ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ನಡೆದಿದೆ. ಜು. 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆಂಧ್ರ ಮೂಲದ ಷರೀಫ್ ಎಂಬಾತನ ಮೇಲೆ ಶೆಕ್ಷಾವಾಲಾ ಎಂಬಾತ ಹಲ್ಲೆ ಮಾಡಿದ್ದಾನೆ.

ಉತ್ತರಹಳ್ಳಿಯಲ್ಲಿ ಹಾಸಿಗೆ ವ್ಯಾಪಾರ ಮಾಡುತ್ತಿದ್ದ ಶೆಕ್ಷಾವಾಲನ ಸಂಬಂಧಿಯಾದ ಷರೀಫ್, ಮೂರು ತಿಂಗಳಿನಿಂದ ಆತನೊಂದಿಗೆ ಕೆಲಸ ಮಾಡುತ್ತಿದ್ದ. ನಂತರ ಆತನಿಗೆ ಹೇಳದೇ ಕೆಲಸ ಬಿಟ್ಟು ಮತ್ತೋರ್ವನ ಬಳಿ ಕೆಲಸಕ್ಕೆ ಸೇರಿದ್ದಾನೆ. ವಿಚಾರ ತಿಳಿದ ಶೇಕ್ಷಾವಾಲ, ಷರೀಫ್​ಗೆ ಕರೆ ಮಾಡಿ ಮಾತನಾಡಲು ಕರೆಸಿಕೊಂಡಿದ್ದ. ಈ ವೇಳೆ ಕೆಲಸ ಬಿಟ್ಟಿರುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದಾಗ, ಶೇಕ್ಷವಾಲನ ತಾಯಿ ಬಗ್ಗೆ ಷರೀಫ್ ನಿಂದಿಸಿದ್ದ. ಇದರಿಂದ ಸಿಟ್ಟಿಗೆದ್ದ ಶೇಕ್ಷಾವಾಲ, ಬೆತ್ತದಿಂದ ಷರೀಫ್ ಮೇಲೆ ಹಲ್ಲೆ ನಡೆಸಿದ್ದ.

ಘಟನೆಯ ಕುರಿತ ವಿಡಿಯೋವೊಂದು ಇತ್ತೀಚಿಗೆ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತ ಪೊಲೀಸರು, ಷರೀಫನನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆತನಿಂದ ದೂರು ಪಡೆದು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ತಿಳಿಸಿದ್ದಾರೆ.

ಇದನ್ನೂ ಓದಿ: ಶಿಸ್ತಿನಲ್ಲಿರಿಸಲು ಬಾಲಕಿಗೆ ಗೃಹ ಬಂಧನ: ಅಜ್ಜಿ, ತಾತನ ಮನವೊಲಿಸಿ ಪರೀಕ್ಷೆಗೆ ಹಾಜರಾಗಲು ಹೊಯ್ಸಳ ಪೊಲೀಸರ ನೆರವು - Hoysala police helped the girl

ETV Bharat Logo

Copyright © 2024 Ushodaya Enterprises Pvt. Ltd., All Rights Reserved.