ರಾಮನಗರ: ನಗರದಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆ ಆಗಿದೆ. ಬಿರುಗಾಳಿ ಸಮೇತ ಸುರಿದ ಮಳೆಯಿಂದ ಜಿಲ್ಲೆಯ ಬಿಡದಿ ಬಳಿಯ ಹೆದ್ದಾರಿ ಪ್ರಾಧಿಕಾರದ ಬೃಹತ್ ಜಾಹೀರಾತು ಕಮಾನು ಧರೆಗೆ ಉರುಳಿದೆ.
ತಾಲೂಕಿನ ಹಳೆ ಬೆಂಗಳೂರು ಮೈಸೂರು ಹೆದ್ದಾರಿ ಸಮೀಪದ ಬಿಡದಿಯ ಅವ್ವೇರಹಳ್ಳಿ ಗ್ರಾಮದ ಬಳಿ ರಾತ್ರಿ ಸುರಿದ ಬಿರುಗಾಳಿ ಸಮೇತದ ಮಳೆಯಿಂದ ಹೆದ್ದಾರಿಯಲ್ಲಿ ಹಾಕಿದ್ದ ಬೃಹತ್ ಗಾತ್ರದ ಜಾಹೀರಾತು ಫಲಕ ರಸ್ತೆಗೆ ಬಿದ್ದಿದೆ. ಇತ್ತೀಗಷ್ಟೆ ಈ ಫಲಕವನ್ನು ಹೆದ್ದಾರಿಗೆ ಅಳವಡಿಸಲಾಗಿತ್ತು.

ಅದೃಷ್ಟವಶಾತ್ ಈ ಜಾಹೀರಾತು ಕಮಾನು ಬೀಳುವ ಸಂದರ್ಭದಲ್ಲಿ ಯಾವ ವಾಹನ ಸಂಚಾರ ಕೂಡ ಈ ಫಲಕದ ಕೆಳಗೆ ಹೋಗುತ್ತಿರಲಿಲ್ಲ. ಒಂದು ವೇಳೆ ಈ ಫಲಕ ವಾಹನ ಸವಾರ ಮೇಲೆ ಬಿದ್ದಿದ್ದರೆ ಭಾರಿ ಅನಾಹುತ ಆಗುವ ಸಾಧ್ಯತೆಗಳಿತ್ತು. ಕಳಪೆ ಕಾಮಗಾರಿಯಿಂದಲೇ ಜಾಹೀರಾತು ಫಲಕ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ.
ಹೆದ್ದಾರಿಗೆ ಈ ಬೃಹತ್ ಗಾತ್ರದ ಜಾಹೀರಾತು ಫಲಕ ಬಿದ್ದ ಪರಿಣಾಮ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.
ಇದನ್ನೂ ಓದಿ: ಗದಗ: ಮಳೆಗೆ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ ಪತ್ತೆ
ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ: ವಿವಿಧೆಡೆ ಸಿಡಿಲಿಗೆ ಹಲವರು ಬಲಿ