ETV Bharat / state

ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ ಡ್ರಗ್ಸ್​ ಸೇವನೆ ದೃಢ, ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ - RAVE PARTY CASE

ಬೆಂಗಳೂರಿನ ಜಿ.ಎಂ. ಫಾರ್ಮ್​​ ಹೌಸ್​ನಲ್ಲಿ ನಡೆದಿದ್ದ ರೇವ್​ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಉದ್ಯಮಿಗಳು, ಹಲವರು ಸೇರಿ 79 ಮಂದಿ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ಚಾರ್ಜ್ ಶೀಟ್​​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

author img

By ETV Bharat Karnataka Team

Published : Sep 12, 2024, 11:56 AM IST

ರೇವ್ ಪಾರ್ಟಿಯಲ್ಲಿ ನಟಿ ಹೇಮಾ  ಡ್ರಗ್ಸ್ ಸೇವನೆ ದೃಢ
ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಡ್ರಗ್ಸ್ ಸೇವನೆ ದೃಢ (IANS)

ಬೆಂಗಳೂರು: ಹೆಬ್ಬಗೋಡಿ ಸಮೀಪದ ಜಿ. ಎಂ. ಫಾರ್ಮ್​​ ಹೌಸ್​ನಲ್ಲಿ ಕಳೆದ ಮೂರು ತಿಂಗಳ ಹಿಂದೆ ರೇವ್​ ಪಾರ್ಟಿ ನಡೆಸಿದ್ದ ಸಂಬಂಧ ಸಿಸಿಬಿ ಪೊಲೀಸರು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಮಂಗಳವಾರ ನ್ಯಾಯಾಲಯಕ್ಕೆ 1,086 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಉದ್ಯಮಿಗಳು ಸೇರಿ 79 ಹಲವರು ಡ್ರಗ್ಸ್ ಸೇವನೆ ಮಾಡಿರುವ ಅಂಶವನ್ನು ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ವಿಜಯವಾಡ ಮೂಲದ ಉದ್ಯಮಿ ಎಲ್​. ವಾಸು ಮಾಲೀಕತ್ವದ ವಿಕ್ಟರಿ ಈವೆಂಟ್​​ ಮ್ಯಾನೇಜ್​ಮೆಂಟ್​ ಕಂಪನಿಗೆ ಕಳೆದ ಮೇ 19ಕ್ಕೆ‌ ಒಂದು ವರ್ಷ ಪೂರ್ಣಗೊಂಡಿತ್ತು. ಜತೆಗೆ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡದಾಗಿ ಪಾರ್ಟಿ ಮಾಡುವ ಸಲುವಾಗಿ ಹೆಬ್ಬಗೋಡಿ ಬಳಿ ಜಿಎಂ ಫಾರ್ಮ್ ಹೌಸ್ ಬುಕ್ ಮಾಡಲಾಗಿತ್ತು. ಪಾರ್ಟಿ ಆಯೋಜನೆಗಾಗಿ 10 ಲಕ್ಷ ರೂ. ಖರ್ಚು ಮಾಡಲಾಗಿತ್ತು. ನಟಿ ಹೇಮಾ ಸೇರಿದಂತೆ ಹಲವು ರಂಗದ ತಾರೆಯರು, ಉದ್ಯಮಿಗಳಿಗೆ ಆಹ್ವಾನ ನೀಡಿದ್ದರು. ಪಾರ್ಟಿಯಲ್ಲಿ ಊಟ, ಮೋಜು-ಮಸ್ತಿ ಜೊತೆಗೆ ಡ್ರಗ್ಸ್​ ಪಾರ್ಟಿ ಇರಲಿದೆ ಎಂದು ಮೊದಲೇ ತಿಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿತರು ಬಂದಿದ್ದರು.

ರೇವ್​ ಪಾರ್ಟಿಯಲ್ಲಿ ಆತಿಥ್ಯ ನೀಡಿದ್ದ ವಾಸು, ದಂತವೈದ್ಯ ರಣದೀರ್ ಬಾಬು, ಮೊಹಮ್ಮದ್ ಅಬೂಬಕರ್ ಸಿದ್ದಿಕ್ಕಿ ಅವರು ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಕೊಕೇನ್, ಎಂಡಿಎಂಎ ಹಾಗೂ ಹೈಡ್ರೋಗಾಂಜಾ ನೀಡಿದ್ದರು. ಅಲ್ಲದೆ ಪಾರ್ಟಿಯಲ್ಲಿ ಹೇಮಾ ಸಹ ಮಾದಕವಸ್ತು ಸೇವಿಸಿರುವುದು ದೃಢವಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

ಪಾರ್ಟಿಯಲ್ಲಿ ಇನ್ನಿತರ ನಟಿಯರು ಭಾಗಿಯಾಗಿದ್ದರು. ಆದರೆ ಇವರು ಡ್ರಗ್ಸ್ ಸೇವಿಸರಲಿಲ್ಲ. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಾಗೂ ಜಿಎಂ ಫಾರ್ಮ್ ಹೌಸ್ ಸಿಬ್ಬಂದಿ ಸೇರಿ 82 ಮಂದಿಯನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ.

ಇದನ್ನೂ ಓದಿ: ರೇವ್ ಪಾರ್ಟಿ: ಫಾರ್ಮ್ ಹೌಸ್ ಮಾಲೀಕನ ವಿರುದ್ಧದ ಪ್ರಕರಣ ರದ್ದು - Rave Party Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.