ವರದಿ: ಶ್ರೀನಿವಾಸ ಎಂ.ಜೆ
ಗಂಗಾವತಿ/ಕೊಪ್ಪಳ: ಒಂದೇ ವೃತ್ತಿಯಲ್ಲಿ ತೊಡಗಿದ್ದ ಇಬ್ಬರು ಸಮಾನ ಮನಸ್ಕರರಲ್ಲಿ ಬಾಂಧವ್ಯ ಬೆಳೆದು ಬೆಸುಗೆಯಾಗಿ ಜೋಡಿಯನ್ನಾಗಿಸಿದೆ. ಹೌದು, ಎಲ್ಲೋ ದೂರದ ಲಂಡನ್ ಎಂಬ ಮಹಾನಗರದ ಹುಡುಗಿಯನ್ನು ಗಂಗಾವತಿಯ ಹುಡುಗನೊಬ್ಬ ವರಿಸಿದ ದೃಷ್ಟಾಂತವಿದು.
India weds London; ಮದುವೆ ಎನ್ನುವುದು ಏಳೇಳು ಜನ್ಮದ ಮೈತ್ರಿ ಎಂದು ಕರೆಯುತ್ತಾರೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ, ಭೂ ಲೋಕದಲ್ಲಿ ನಡೆಯುತ್ತದೆ ಎನ್ನವವರೂ ಇದ್ದಾರೆ. ಎಲ್ಲೋ ಸಮುದ್ರದ ತಟದಲ್ಲಿನ ಕಪ್ಪೆ ಚಿಪ್ಪನ್ನು ಇನ್ನೆಲ್ಲಿಂದಲೋ ಬಂದ ಸೂರ್ಯ ರಶ್ಮಿ ಸೋಕಿದಾಗ ಮುತ್ತಾಗುವ ಹಾಗೆ ಈ ಮದುವೆ.

ವಿರುಪಾಪುರ ಗಡ್ಡೆಯ ಯುವಕ- ಲಂಡನ್ ಯುವತಿ: ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯ ನಿವಾಸಿ ಮುರಳಿ ಎಂಬ ಯುವಕ, ವೃತ್ತಿಯಲ್ಲಿ ಪ್ರವಾಸಿ ಮಾರ್ಗದರ್ಶಕ, ಗೆಸ್ಟ್ಹೌಸ್ ಮಾಲಿಕ. ಇದೀಗ ಈತ ಸಿನಿಮಾ ರಂಗ ಕಲೆಯಲ್ಲಿ ಕಥೆ ಬರೆಯುವ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಬ ಲಂಡನ್ ಯುವತಿಯ ಕೈ ಹಿಡಿದಿದ್ದಾರೆ.
ನೋಂದಣಿ ಕಚೇರಿಯಲ್ಲಿ ಅಧಿಕೃತ ವಿವಾಹ: ಗಂಗಾವತಿಯ ವಿವಾಹ ನೋಂದಣಿ ಕಚೇರಿಯಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡ ಈ ಇಬ್ಬರು ತಮ್ಮ ಮದುವೆಗೆ ಸರ್ಕಾರದ ಮುದ್ರೆ ಒತ್ತಿಸಿಕೊಂಡಿದ್ದಾರೆ. ಬಿಳಿ ಸೀರೆಯಲ್ಲಿ ಥೇಟ್ ಭಾರತೀಯ ನಾರಿಯಂತೆ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಕಂಗೊಳಿಸುತ್ತಿದ್ದರು.

ಇತ್ತ ಮುರಳಿ, ತಮ್ಮ ಆಪ್ತರೊಂದಿಗೆ ಸಾದಾ ಸೀದಾ ವಸ್ತ್ರದಲ್ಲಿ ರಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ವಿವಾಹ ನೋಂದಣಿ ಮಾಡಿಸಿಕೊಂಡರು. ಬಳಿಕ ಅಲ್ಲಿದ್ದ ಜನರಿಗೆ ಧಾರವಾಡದ ಪೇಡಾ, ಕಾಜು ಬಪರ್ಿ ಹಂಚಿ ಸಂತಸ ಹಂಚಿಕೊಂಡರು.
ಬಾಂಧವ್ಯ ಬೆಸೆದ ವೃತ್ತಿ: ಮುರಳಿ ವೃತ್ತಿಯಲ್ಲಿ ಪ್ರವಾಸಿ ಮಾರ್ಗದರ್ಶಕ, ಗೆಸ್ಟ್ ಹೌಸ್ ಮಾಲಿಕ. ಪ್ರವೃತ್ತಿಯಲ್ಲಿ ಸಿನಿಮಾ ನಿರ್ಮಾಣ, ನಿರ್ದೇಶನದ ಕನಸು ಹೊತ್ತವರು. ಅತ್ತ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಕೂಡ ಸಿನಿಮಾಗಳಿಗೆ ಕತೆ ಬರೆಯುವ ಹವ್ಯಾಸ ಉಳ್ಳವರು. ಕಳೆದ ಎರಡು ವರ್ಷದ ಹಿಂದೆ ಈಕೆ ಭಾರತದ ಕರ್ನಾಟಕಕ್ಕೆ ಬಂದಿದ್ದು, ಮುರುಳಿ ನಿರ್ಮಾಣ ಮಾಡುತ್ತಿದ್ದ `ಐ ಲವ್ ಮೈ ಕಂಟ್ರಿ' ಎಂಬ ಕಿರುಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಈ ಜೋಡಿಯ ಮಧ್ಯೆ ಪರಿಚಯವಾಗಿದೆ. ಆ ಪರಿಚಯ ಸ್ನೇಹಕ್ಕೆ ತಿರುಗಿದೆ.

ಸ್ನೇಹ ಪ್ರೀತಿಗೆ ತಿರುಗಿದೆ. ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸಮಾನ ಮನಸ್ಕರನ್ನು ವೃತ್ತಿ ಎಂಬ ವೇದಿಕೆ ಬಾಂಧವ್ಯಕ್ಕೆ ಮುನ್ನುಡಿ ಬರೆದಿದೆ. ಸದ್ಯಕ್ಕೆ ಈ ಜೋಡಿ ಗಂಗಾವತಿಯಲ್ಲಿ ಮದುವೆಯಾಗಿದ್ದು, ಮೇ 9ರಂದು ಲಂಡನ್ನಲ್ಲಿ ಅಲ್ಲಿನ ಸಂಪ್ರದಾಯದಂತೆ ಆರತಕ್ಷತೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದೆ.
ವೃತ್ತಿ ಬದುಕಿನ ಪಯಣ: ಮತ್ತೊಂದೊ ವಿಶೇಷ ಅಂದರೆ, ಅದೇ ದಿನ ಅಂದರೆ ಆರತಕ್ಷತೆಯ ದಿನ ಮೇ.9ರಂದು `ಇಂಡಿಯಾ ವೆಡ್ಸ್ ಲಂಡನ್' ಎಂಬ ಕಿರು ಚಿತ್ರವನ್ನು ಈ ಜೋಡಿ ಬಿಡುಗಡೆ ಮಾಡಲಿದೆ. ಈ ಇಬ್ಬರು, ಲೊಟ್ಟಿ ಫಿಂಕ್ಲರ್ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆಯೊಂದನ್ನು ಮಾಡಿಕೊಂಡಿದ್ದಾರೆ.

ಸಿಂಗರೇಣಿ ಜಂಗ್ ಸೈರನ್: ಕಳೆದ ವರ್ಷ ಈ ಇಬ್ಬರು ಸೇರಿ, `ಡ್ರೀಮ್ ಸ್ಪೇಸ್' ಎನ್ನುವ ಕಿರು ಚಿತ್ರ ತೆಗೆದಿದ್ದರು. ಇದಕ್ಕೆ ಮೂರು ಪ್ರಶಸ್ತಿ ಸಿಕ್ಕಿವೆ. ಹಾಗೂ ಇವರಿಬ್ಬರು ಹೈದರಾಬಾದಿನಲ್ಲಿ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಾಗಿರುವ ಜೀವನರೆಡ್ಡಿ ಎಂಬುವವರ ಬಳಿ ಸದ್ಯಕ್ಕೆ ಕೆಲಸ ಮಾಡುತ್ತಿದ್ದಾರೆ.
ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಪ್ರಸ್ತುತ `ಸಿಂಗರೇಣಿ ಜಂಗ್ ಸೈರನ್; ಎಂಬ ತೆಲುಗು ಚಿತ್ರಕ್ಕೆ ಕತೆ ಬರೆಯುತ್ತಿದ್ದಾರೆ. ಇಂಗ್ಲಿಷ್ನಲ್ಲಿ ಬರೆದ ಕತೆಯನ್ನು ಮುರಳಿ ತೆಲುಗಿಗೆ ಅನುವಾದಿಸಿ ಕೊಡುತ್ತಿದ್ದಾರೆ. ತಮ್ಮದೇ ಸ್ವಂತ ಬ್ಯಾನರ್ನಲ್ಲಿ ಸಿನಿಮಾ ಮಾಡು ಗುರಿ ಈ ಇಬ್ಬರಿಗೆ ಇದೆ
ಇದನ್ನು ಓದಿ: ಆಪರೇಷನ್ ಚೀತಾ ಕೊನೆಗೂ ಸಕ್ಸಸ್! ಮನೆಗೆ ನುಗ್ಗಿದ್ದ ಚಿರತೆ ಸೆರೆ