ಮಂಗಳೂರು: ವಿಷ ರಹಿತ ಹಾವೆಂದು ತಪ್ಪಾಗಿ ಭಾವಿಸಿದ ವ್ಯಕ್ತಿಯೊಬ್ಬರು ಕನ್ನಡಿ ಹಾವನ್ನು ಹಿಡಿಯಲೆತ್ನಿಸಿ ಅದೇ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಬಜ್ಪೆಯಲ್ಲಿ ನಡೆದಿದೆ. ಬಜ್ಪೆಯ ರಾಮಚಂದ್ರ ಪೂಜಾರಿ (55) ಸಾವನ್ನಪ್ಪಿದ ವ್ಯಕ್ತಿ. ವಿಷದ ಹಾವು ಕಚ್ಚಿ ಸಾವು ಸಂಭವಿಸಿರುವ ಬಗ್ಗೆ ಎಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಬಜ್ಪೆಯ ಮನೆಯೊಂದರ ಪರಿಸರದಲ್ಲಿ ಕನ್ನಡಿ ಹಾವು ಕಾಣಿಸಿಕೊಂಡಿತ್ತು. ಇದನ್ನು ರಾಮಚಂದ್ರ ಪೂಜಾರಿಯವರು ವಿಷರಹಿತ ಹಾವೆಂದು ತಪ್ಪಾಗಿ ಭಾವಿಸಿ ಕೈಯಲ್ಲಿ ಹಿಡಿದಿದ್ದರು. ಆಗ ಹಾವು ಅವರ ಕೈಗೆ ಕಚ್ಚಿದೆ. ಅವರು ಹಾವನ್ನು ಹಿಡಿಯುತ್ತಿರುವ ವಿಡಿಯೋ ಸೆರೆಹಿಡಿಯಲಾಗಿದ್ದು, ವೈರಲ್ ಆಗಿತ್ತು.
ಬಳಿಕ ರಾಮಚಂದ್ರ ಅವರು ಇದೊಂದು ವಿಷ ರಹಿತ ಹಾವೆಂದು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಅವರು ಆಸ್ಪತ್ರೆಗೆ ತೆರಳದೆ ಮನೆಗೆ ತೆರಳಿದ್ದರು. ಸಂಜೆಯಾಗುತ್ತಲೇ ರಾಮಚಂದ್ರ ಪೂಜಾರಿಯವರಿಗೆ ತಲೆ ತಿರುಗಲಾರಂಭಿಸಿದೆ. ಆರೋಗ್ಯ ಏರುಪೇರಾಗಿದೆ. ತಕ್ಷಣ ಅವರನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಶುಕ್ರವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಷದ ಹಾವು ಕಚ್ಚಿ ಸಾವು ಸಂಭವಿಸಿದೆ ಎಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಒದಿ: ಬೆಂಗಳೂರು: ಪ್ರೀತಿಗೆ ಅಡ್ಡಿಯಾದ ತಾಯಿಯ ಹತ್ಯೆ ಆರೋಪ: ಮಗಳು, ಪ್ರಿಯಕರ ಬಂಧನ - Mother Murder Case