ಉಳ್ಳಾಲ, ದಕ್ಷಿಣ ಕನ್ನಡ: ಸ್ಟೇಟ್ ಬ್ಯಾಂಕ್ ನಿಂದ ತೊಕ್ಕೊಟ್ಟು- ಮಂಜುನಾಡಿ ಮಾರ್ಗವಾಗಿ ಹೊರಟಿದ್ದ ಬಸ್ ಬೇರಿಂಗ್ ಕಟ್ಟಾಗಿತ್ತು. ಈ ವೇಳೆ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.
ತೊಕ್ಕೊಟ್ಟು- ಮಂಜುನಾಡಿ ಮಾಗರ್ವವಾಗಿ ಮುಡಿಪು ಸಂಚರಿಸುವ ಉರುಮಣೆಯ ಮೊದಲ ತಿರುವು ದಾಟಿ ಪಟ್ಲ ತಾರಿತೋಟ ಬಳಿಯ ತಿರುವು ಪಡೆದುಕೊಳ್ಳುವುದಕ್ಕೂ ಮುನ್ನ ಬೇರಿಂಗ್ ಕಟ್ಟಾಗಿತ್ತು. ಇದರಿಂದಾಗಿ ಬಸ್ ರಸ್ತೆಯನ್ನು ಬಿಟ್ಟು 6 ಅಡಿ ಕೆಳಗಿನ ಕಮರಿಗೆ ಉರುಳಿ ಬೀಳುತ್ತಿತ್ತು. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದೊಡ್ಡ ಅಪಾಯ ತಪ್ಪಿದೆ.

ವಿಷಯ ತಿಳಿದು ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಸ್ ದುರಸ್ತಿ ಮಾಡಿ ಮೇಲೆತ್ತುವ ಕೆಲಸ ಮಾಡಿದರು. ಇದೇ ಸಮಯದಲ್ಲಿ ದಕ್ಷಿಣ ಕನ್ನಡ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು.
ಸ್ಥಳೀಯ ಕಲ್ಕಟ್ಟ ಬಳಿಯ ಮಂಜನಾಡಿ ಜಾತ್ರೆ ಕಡೆಯ ದಿನ ಆಗಿದ್ದು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು ಬಸ್ನಲ್ಲಿ ಅಂದಾಜು ಸುಮಾರು 80 ಜನರಿದ್ದರು ಎಂದು ತಿಳಿದು ಬಂದಿದೆ. ಇಷ್ಟು ಜನರ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿರುವುದು ಪ್ರಯಾಣಿಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.