ಬೆಂಗಳೂರು: ನ್ಯೂನತೆ ಇದೆ ಅಂತ ಸಂಸದರು ಹೇಳಿದ್ದರಿಂದ ವರ್ತುಲ ರೈಲ್ವೆ ಕುರಿತು ಪೂರ್ವಭಾವಿ ಸಭೆ ಮಾಡಿದ್ದೇವೆ. 271 ಕಿ.ಮೀ ವರ್ತುಲ ರೈಲ್ವೆ ಯೋಜನೆ ಇದಾಗಿದ್ದು, ಇದಕ್ಕೆ ಸಬರ್ಬನ್ ರೈಲು ಜೋಡಿಸಬೇಕು. ಹೇಗೆ ಜೋಡನೆ ಮಾಡಬೇಕೆಂಬುದರ ಬಗ್ಗೆ ಚರ್ಚೆಯಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನ ಕುಮಾರಕೃಪ ಗೆಸ್ಟ್ ಹೌಸ್ನಲ್ಲಿ ಇಂದು ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2,500 ಎಕರೆ ಜಾಗ ಇದಕ್ಕೆ ಬೇಕಾಗುತ್ತದೆ. ರೈಲ್ವೆ ಇಲಾಖೆಯೇ ಸಂಪೂರ್ಣ ಹಣ ಕೊಡುತ್ತದೆ. ಹಳ್ಳಿಗಳ ಮದ್ಯೆ ಹೋಗಬಾರದೆಂಬ ಅಭಿಪ್ರಾಯ ಇದೆ. ಕೆಐಇಡಿಬಿಯನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಇದರ ಬಗ್ಗೆ ಅಧಿಕಾರಿಗಳೆಲ್ಲಾ ಕುಳಿತು ಚರ್ಚೆ ಮಾಡ್ತಾರೆ. ನಂತರ ಡಿಪಿಆರ್ ತಯಾರು ಮಾಡುತ್ತೇವೆ ಎಂದು ಹೇಳಿದರು.

ಗೂಡ್ಸ್, ಪ್ಯಾಸೆಂಜರ್ ಎರಡೂ ಇರುತ್ತೆ: ಟರ್ಮಿನಲ್ ಸಿದ್ಧತೆ ಮಾಡಬೇಕಾಗುತ್ತದೆ. ಗೂಡ್ಸ್, ಪ್ಯಾಸೆಂಜರ್ ಎರಡೂ ರೈಲು ಇರಲಿದೆ. ಮುಂದಿನ 50 ವರ್ಷದ ಯೋಜನೆ ಇದು. ದೇವನಹಳ್ಳಿ ಹಾಗೂ ಯಲಹಂಕ ಮಧ್ಯೆ ಟರ್ಮಿನಲ್. ಮೆಗಾಕೋಚಿಂಗ್ ಟರ್ಮಿನಲ್ ಗೆ ಡಿಪಿಆರ್ ಆಗಿದೆ. ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರ ಕೊಡಲಿದೆ ಎಂದರು.

ಇವರೆಲ್ಲ ಸಭೆಯಲ್ಲಿ ಭಾಗವಹಿಸಿದ್ದರು: ಇದಕ್ಕೂ ಮುನ್ನ ಪ್ರಮುಖ ರೈಲ್ವೆ ಯೋಜನೆಗಳ ಅನುಷ್ಠಾನ ಕುರಿತ ಪೂರ್ವಭಾವಿ ಸಭೆಯಲ್ಲಿ ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ , ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ಸಂಸದರಾದ ಡಾ.ಕೆ ಸುಧಾಕರ್, ಪಿ.ಸಿ.ಮೋಹನ್, ಡಾ. ಸಿ.ಎನ್.ಮಂಜುನಾಥ್ ಹಾಗೂ ಡಿಆರ್ ಎಂ ಅಶುತೋಷ್ ಕುಮಾರ್ ಸಿಂಗ್ ಸೇರಿದಂತೆ ಹಲವು ರೈಲ್ವೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ನೀರಾವರಿ ಕೃಷಿ ಭೂಮಿ ಹಾಗೂ ಹಳ್ಳಿಗಳಿಗೆ ಅನಾನುಕೂಲವಾಗದ ರೀತಿಯಲ್ಲಿ ಕ್ರಮ ವಹಿಸಲು ಮನವಿ: ಕೇಂದ್ರದಲ್ಲಿ ರೈಲ್ವೆ ಸಚಿವನಾಗಿದ್ದಾಗ ಅಂದು ಜಾರಿಗೊಳಿಸಿದ್ದ ಪ್ರಮುಖ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡಲು ಇಂದು ಸಭೆಯಲ್ಲಿ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಈ ದೇಶದ ಪ್ರಗತಿಗಾಗಿ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದನ್ನು ಸ್ವಾಗತಿಸುತ್ತೇನೆ. ತಮ್ಮ ಕ್ರಿಯಾ ಯೋಜನೆಗಳು ಸುಮಾರು 50 ವರ್ಷಗಳ ದೂರದೃಷ್ಟಿ ಉಳ್ಳವಾಗಿರಬೇಕು. ವರ್ತುಲ ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ಕೃಷಿ ಹಾಗೂ ನೀರಾವರಿ ಭೂಮಿಯನ್ನು ಹೊರತುಪಡಿಸಿ ರಸ್ತೆಗಳ ನಿರ್ಮಾಣಕ್ಕೆ ಹೊತ್ತು ನೀಡಬೇಕು. ಹಳ್ಳಿಗಳಲ್ಲಿ ಹಾದು ಹೋಗುವ ರಸ್ತೆಗಳು ನಾಗರೀಕರಿಗೆ ಅನಾನುಕೂಲ ಉಂಟುಮಾಡದೇ ಇರುವ ಹಾಗೆ ಇನ್ನೂ 5 ಅಥವಾ 6 ಕಿ.ಮೀ ಮುಂದೋಗಿ ಹಳ್ಳಿಗಳ ಜನರಿಗೆ ತೊಂದರೆ ಯಾಗದ ರೀತಿಯಲ್ಲಿ ರಸ್ತೆಗಳ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ಹೇಳಿದರು.

ಬೆಂಗಳೂರಿಗರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿ: ಬೆಂಗಳೂರು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಇಲ್ಲಿನ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂವಾಗುವ ರೀತಿಯಲ್ಲಿ ತಾವು ರೈಲ್ವೆ ಯೋಜನೆಗಳನ್ನು ವಿಸ್ತರಿಸುತ್ತಿದ್ದ, ಅದು ಸಾಮನ್ಯ ನಾಗರಿಕರಿಗೂ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಿ ಅನುಕೂಲ ಮಾಡಬೇಕು. ನಗರದಲ್ಲಿ ಮೆಟ್ರೋ ಕನೆಕ್ಟವಿಟಿ ಹೆಚ್ಚಾಗಿರುವುದರಿಂದ ಅದು ಅನುಕೂಲಕರವಾಗುವ ಹಾಗೆ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ತಾವು ಯಾವುದೇ ಕಾರ್ಯ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸುವ ಮೂಲಕ ಅದರ ಕುರಿತು ಚರ್ಚೆ ನಡೆಸಿದಾಗ ಅವು ಅನುಕೂಲಕರವಾಗಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದರು.

ಲೆವೆಲ್ ಕ್ರಾಸಿಂಗ್ ರಸ್ತೆಗಳಾದ ಯಲಹಂಕ ದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ ಬಂಗಾರಪೇಟೆ ಕಡೆ ನಿರ್ಮಾಣವಾದಾಗ ಅದು ಅನುಕೂಲಕರವಾಗಿರುತ್ತದೆ. ನನ್ನ ಬಹುದಿನಗಳ ಕನಸಾದ ರೈಲ್ವೆ ಕೋಚ್ ಪ್ಯಾಕ್ಟರಿಯನ್ನು ಕೋಲಾರದಲ್ಲಿ ನಿರ್ಮಾಣ ಮಾಡಲು ತಾವು ಅನುಮತಿಸಿ ಚಾಲನೆ ನೀಡಬೇಕು. ದಕ್ಷಣ ಭಾರತದಲ್ಲಿ ಅದು ಕೋಲಾರದಲ್ಲಿ ಈ ರೈಲ್ವೆ ಕೋಚ್ ಪ್ಯಾಕಟ್ರಿ ನಿರ್ಮಾಣ ವಾದಲ್ಲಿ ಈ ಭಾಗದಲ್ಲಿ ಹೆಚ್ಚಿನ ಜನಕ್ಕೆ ಅನುಕೂಲಕರವಾಗಲಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.
ಈ ಯೋಜನೆಗೆ ಸುಮಾರು 1200 ಎಕರೆ ಜಮೀನಿನ ಅವ್ಯಶ್ಯಕತೆ ಇದ್ದು, ಅಂದು ನಾನು ಕೇಂದ್ರದ ರೈಲ್ವೆ ಸಚಿವನಾಗಿದ್ದಾಗ ಜಾರಿಗೊಳಿಸಿದ್ದ ಈ ಪ್ರಮುಖ ಯೋಜನೆಯಾಗಿದ್ದು, ಅಲ್ಲಿ ಸರ್ಕಾರದ ಜಮೀನು ಈಗಾಗಲೇ 700 ಎಕರೆ ಮೀಸಲಿಟ್ಟಿದ್ದು, ಉಳಿದ 500 ಎಕರೆ ಜಮೀನನ್ನು ತಾವು ಅನವು ಮಾಡಿ ಸರ್ಕಾರ ಎಲ್ಲಾ ರೀತಿಯಲ್ಲಿ ತಮಗೆ ಸಹಕಾರಿಯಾಗಲಿದ್ದ, ತಾವು ಈ ಯೋಜನೆಯನ್ನು ತ್ವರಿತಗತಿಯಲ್ಲಿ ಚಾಲನೆ ನೀಡಲು ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಸಚಿವರು ಒತ್ತಾಯಿಸಿದರು.
ಇದನ್ನು ಓದಿ: ಬೆಂಗಳೂರು ಕಾಲ್ತುಳಿತ: ಚಿನ್ನಸ್ವಾಮಿ ಮೈದಾನಕ್ಕೆ ಸಿಐಡಿ ವಿಶೇಷ ತನಿಖಾ ತಂಡ ಭೇಟಿ
ನೈತಿಕತೆ ಇದ್ದರೆ ಸಿಎಂ ರಾಜೀನಾಮೆ ನೀಡಲಿ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿದಲ್ಲಿ 11 ಜನರ ಸಾವಿನ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸೋಮಣ್ಣ, ಇದು ಲಜ್ಜಗೇಡಿ ಸರ್ಕಾರ. ಆರ್ಸಿಬಿ ತಂಡ 18 ವರ್ಷದ ನಂತರ ಗೆದ್ದರು. ಅದಕ್ಕೆ ಹೆಸರು ಬರುತ್ತದೆಂದು ಹೀಗೆ ಮಾಡಿದ್ರು. ಒಂದು ವಾರ ಬಿಟ್ಟು ಸಂಭ್ರಮಾಚರಣೆ ಮಾಡಬಹುದಿತ್ತು. ಏನೇನು ಮಾಡಬಾರದಿತ್ತೋ ಎಲ್ಲ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರ ವಿವೇಚನೆ ಎಲ್ಲಿ ಹೋಗಿತ್ತು. ತಕ್ಷಣ ನಿರ್ಧಾರ ತೆಗೆದುಕೊಂಡ್ರು. ದಕ್ಷ ಕಮೀಷನರ್‌ಗೆ ನೋವು ಕೊಟ್ಟಿದ್ದೀರಿ. ನೀವು ಮಾಡಿರುವ ಅಕ್ಷಮ್ಯ ಅಪರಾಧ ಇದು ಎಂದು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೋರ್ಟ್ ಆದೇಶ ಪಾಲಿಸಬೇಕಾಗುತ್ತದೆ, ರಾಜಕೀಯ ಮಾಡುತ್ತಿದ್ದಾರೆ ಮಾಡಲಿ: ಶಾಸಕ ವಿನಯ್ ಕುಲಕರ್ಣಿ