ETV Bharat / state

ಸಿಂಗಾಪುರ ಹಡಗಿನಲ್ಲಿ ಅಗ್ನಿ ಅವಘಡ: ರಕ್ಷಿಸಲಾದ 18 ಮಂದಿ ಮಂಗಳೂರಿಗೆ - 18 PEOPLE EVACUATED TO MANGALURU

ಸಿಂಗಾಪುರದ ಹಡಗಿನಿಂದ ರಕ್ಷಿಸಲಾದ 18 ಮಂದಿ ಸಿಬ್ಬಂದಿಯನ್ನು ಮಂಗಳೂರಿನ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ಪಣಂಬೂರಿಗೆ ಕರೆತರಲಾಗಿದೆ.

18 PEOPLE EVACUATED TO MANGALURU
ಸಿಂಗಾಪುರದ ಹಡಗಿನಿಂದ ರಕ್ಷಿಸಲಾದ 18 ಮಂದಿ ಮಂಗಳೂರಿಗೆ (ETV Bharat)
author img

By ETV Bharat Karnataka Team

Published : June 10, 2025 at 10:21 AM IST

1 Min Read

ಮಂಗಳೂರು: ಕೇರಳದ ಬೇಪುರ್‌ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲುಗಳ ದೂರದಲ್ಲಿ ಸಿಂಗಾಪುರದ ಧ್ವಜದ ಕಂಟೇನರ್ ಹಡಗು (MV Wan Hai 503) ನಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದ ನಂತರ, 22 ಮಂದಿ ಸಿಬ್ಬಂದಿಯಲ್ಲಿ 18 ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ರಕ್ಷಿಸಲಾದ ಸಿಬ್ಬಂದಿಯನ್ನು ಮಂಗಳೂರಿನ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಪಣಂಬೂರಿಗೆ ಕರೆತರಲಾಗಿದೆ. ಈ ಘಟನೆಯಲ್ಲಿ ನಾಲ್ವರು ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಹಡಗಿನಲ್ಲಿ ಜೂನ್ 9 ರಂದು ಬೆಂಕಿ ಕಾಣಿಸಿಕೊಂಡಿತು. ಭಾರತೀಯ ನೌಕಾಪಡೆ ತಕ್ಷಣ ತುರ್ತು ಕರೆಗೆ ಸ್ಪಂದಿಸಿ, INS ಸೂರತ್ ಮೂಲಕ 18 ಸಿಬ್ಬಂದಿಯನ್ನು ರಕ್ಷಿಸಿತು. ರಕ್ಷಿಸಲಾದವರಲ್ಲಿ ಐವರು ಗಾಯಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ರಕ್ಷಿಸಿದ ಸಿಬ್ಬಂದಿಯೊಂದಿಗೆ INS ಸೂರತ್ ಜೂನ್ 9 ರಂದು ರಾತ್ರಿ 10:45ಕ್ಕೆ ಮಂಗಳೂರಿನ NMPAಗೆ ಆಗಮಿಸಿತು.

ಸಿಂಗಾಪುರದ ಹಡಗಿನಿಂದ ರಕ್ಷಿಸಲಾದ 18 ಮಂದಿ ಮಂಗಳೂರಿಗೆ (ETV Bharat)

ರಕ್ಷಿಸಲಾದ ಸಿಬ್ಬಂದಿಯ ರಾಷ್ಟ್ರೀಯತೆ: ಚೀನಾದ 8 ಮಂದಿ, ತೈವಾನ್​ನ ನಾಲ್ವರು, ಮ್ಯಾನ್ಮಾರ್​ನ ನಾಲ್ವರು ಮತ್ತು ಇಂಡೋನೇಷ್ಯಾದ ಇಬ್ಬರು ಇದ್ದಾರೆ.

ಲು ಯಾನ್ಲಿ, ಸೋನಿತುರ್ ಹೇನಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಜು ಫಾಬಾವ್, ಗುವೊ ಲಿನಿನೊ, ಥೀನ್ ಥಾನ್ ಹ್ಟಾಯ್ ಮತ್ತು ಕಿಯಿ ಜಾವ್ ಹ್ಟೂ ಎಂಬುವರಿಗೆ ಕಡಿಮೆ ಪ್ರಮಾಣದಲ್ಲಿ ಗಾಯಗಳಾಗಿವೆ.

ಯಾವುದೇ ಗಾಯಗಳಾಗದ ವೀ ಚುನ್-ಜು, ತಾಗ್ ಪೆಂಗ್, ಕಾನ್ ಹಿಯು ವಾಲ್, ಲಿನ್ ಚುನ್ ಚೆಂಗ್
ಫೆಂಗ್ ಲಿ, ಲಿ ಫೆಂಗುವಾಂಗ್, ಥೆಟ್ ಹ್ಟುಟ್ ಸ್ವೀ, ಗುವೊ ಎರ್ಚುನ್, ಹೋಲಿಕ್ ಅಸ್ಯಾರಿ, ಸು ವೀ,
ಚಾಂಗ್ ರೆನ್-ಹಾನ್ ಮತ್ತು ವೂ ವೆನ್-ಚಿ ಸೇರಿ 12 ಮಂದಿಯನ್ನು ಮಂಗಳೂರಿನ ಹೋಟೆಲ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಒಟ್ಟು 22 ಸಿಬ್ಬಂದಿಯಲ್ಲಿ 4 ಜನ ಕಾಣೆ: ಯು ಬೋ-ಫಾಂಗ್, ಸಾನ್ ವಿನ್, ಜೇನಾಲ್ ಅಬಿದಿನ್ ಮತ್ತು ಹ್ಸಿಯೆ ಚಿಯಾ-ವೆನ್ ಘಟನೆಯಯಲ್ಲಿ ಕಾಣೆಯಾದವರು ವರದಿಯಾಗಿದೆ.

ರಕ್ಷಿಸಲಾದ 18 ಸಿಬ್ಬಂದಿಯನ್ನು INS ಸೂರತ್ ಮೂಲಕ ಮಂಗಳೂರಿನ NMPAಗೆ ಕರೆತರಲಾಗಿದೆ. ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಸ್ಥಳೀಯ ಬಂದರು ಮತ್ತು ಪೊಲೀಸ್ ಅಧಿಕಾರಿಗಳು ಮಾಡಿದ್ದಾರೆ.

ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ ಮತ್ತೊಂದು ಭಾರಿ ಅನಾಹುತ; ಅಪಾಯಕಾರಿ ವಸ್ತುಗಳಿರುವ ಬೃಹತ್ ಹಡಗಿನಲ್ಲಿ ಬೆಂಕಿ; 18 ಸಿಬ್ಬಂದಿ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.